'ನನ್ನ ಅವರ ನಡುವಣ ಸಂಬಂಧ ಸಹಮತದ್ದು'

'ಖಂಡಿತ ನನ್ನ ಮೇಲೆ ಪ್ರಭಾವಿ ಬಾಸ್ ಬಿಲ್ ಕ್ಲಿಂಟನ್ ಅವರ ಒತ್ತಡವಿತ್ತು. ಖಂಡಿತವಾಗಿಯೂ ಅವರು ನನ್ನನ್ನು ಬಳಸಿಕೊಂಡರು. ಆದರೂ ಅದು ಪರಸ್ಪರ ಸಮ್ಮತದ ಸಂಬಂಧವಾಗಿತ್ತು. ಆ ಸಂಬಂಧದ ಬಗ್ಗೆ ನನಗೆ ವಿಷಾದವಿದೆ. ದುರದೃಷ್ಟವೆಂದರೆ ಅವರ ಪ್ರತಿಷ್ಠೆ/ಸ್ಥಾನಮಾನದ ರಕ್ಷಣೆಗಾಗಿ ನನ್ನನ್ನು ಬಲಿಪಶು ಮಾಡಲಾಯಿತು' ಎಂದು ತಾಜಾ ಲೇಖನವೊಂದರಲ್ಲಿ ಮೋನಿಕಾ ಲೆವಿನ್ಸಕಿ (Monica Lewinsky) ಬರೆದುಕೊಂಡಿದ್ದಾರೆ. ( ಲೆವಿನ್‌ಸ್ಕಿ ಲೈಂಗಿಕ ಹಗರಣ: ಜಾಬ್ಸ್ ಸಲಹೆ ಕೇಳಿದ್ದ ಕ್ಲಿಂಟನ್ )
'ಆ ಸಂಬಂಧದ ವಿಷಯದಲ್ಲಿ ಈಗಲೂ ನನ್ನ ದುರ್ಬಳಕೆ ನಡೆಯುತ್ತಿದೆ. (Bill Clinton) ಕ್ಲಿಂಟನ್ ಪತ್ನಿ ಹಿಲರಿ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ಈ ಪ್ರೇಮ ಪ್ರಸಂಗ ಮತ್ತೆ ಪ್ರಮುಖ ಚರ್ಚೆಗೆ ಬರುತ್ತಿದೆ. ರಾಜಕೀಯ ಸ್ವಾರ್ಥಕ್ಕೆ ನನ್ನ ಹೆಸರು ಬಳಸಿಕೊಳ್ಳುವುದು ಸರ್ವಥಾ ಸರಿಯಲ್ಲ' ಎಂದು Vanity Fair ನಿಯತಕಾಲಿಕಕ್ಕೆ ಬರೆದುಕೊಟ್ಟಿರುವ ಲೇಖನದಲ್ಲಿ ಮೋನಿಕಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆ ಹಗರಣದಿಂದಾದ ಅವಮಾನ, ಪಟ್ಟಿರುವ ಪಶಾತ್ತಾಪ, ವೃತ್ತಿಯನ್ನು ಕಾಡಿದ ನೀವು ಹೀಗೆ ಎಲ್ಲವನ್ನೂ 40 ವರ್ಷದ ಲೆವಿನ್ಸಕಿ ಅವರು ಲೇಖನದಲ್ಲಿ ವಿವರಿಸಿದ್ದಾರೆ. ಅಂದಹಾಗೆ, ಇಂದು ಗುರುವಾರ ಸದರಿ ನಿಯತಕಾಲಿಕದಲ್ಲಿ 4,300 ಪದಗಳ ಈ ಲೇಖನ ಪ್ರಕಟವಾಗುತ್ತಿದೆ.
'2008ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನನ್ನ ಹೆಸರು ಬಳಸಿಕೊಂಡಿದ್ದರಿಂದ ಹಲವು ವರ್ಷ ನಾನು ವನವಾಸ ಅನುಭವಿಸಬೇಕಾಯಿತು. 2016ನೇ ಸಾಲಿನ ಅಧ್ಯಕ್ಷೀಯ ಚುನಾವಣೆಯಲ್ಲೂ ಅವರು ಮತ್ತೆ ಸ್ಪರ್ಧಿಸಲಿದ್ದಾರೆ. ಈ ಬಾರಿಯೂ ಹಾಗೇಯೇ ಆದರೆ ಮತ್ತೆ 8-10 ವರ್ಷ ನಾನು ನೇಪಥ್ಯದಲ್ಲಿರಬೇಕಾಗುತ್ತದೆ' ಎಂದು ತಮ್ಮ ಸಂಕಟ ತೋಡಿಕೊಂಡಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications