ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ಮುಸ್ಲಿಂ ರಾಷ್ಟ್ರಗಳ ಅಮೆರಿಕ ಪ್ರವೇಶ ನಿರ್ಬಂಧ ಜಾರಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿದ್ದ ಆರು ಮುಸ್ಲಿಂ ರಾಷ್ಟ್ರಗಳ ನಿರಾಶ್ರಿತರಿಗೆ ಅಮೆರಿಕ ಪ್ರವಾಸ ನಿರ್ಬಂಧ ನಿಯಮ ಜಾರಿ. ಸುಪ್ರೀಂ ಕೋರ್ಟ್ ನಲ್ಲಿದ್ದ ಪ್ರಕರಣದಲ್ಲಿ ಜಯ ಸಾಧಿಸಿದ ಟ್ರಂಪ್. ನ್ಯಾಯಪೀಠದಿಂದ ಹಸಿರು ನಿಶಾನೆ ದೊರೆ

|
Google Oneindia Kannada News

ವಾಷಿಂಗ್ಟನ್, ಜೂನ್ 30: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಜಾರಿಗೊಳಿಸಿದ್ದ ಆರು ಮುಸ್ಲಿಂ ರಾಷ್ಟ್ರಗಳ ನಿರಾಶ್ರಿತರ ಅಮೆರಿಕ ಪ್ರವೇಶ ನಿರ್ಬಂಧದ ನಿಯಮ ಈಗ ಜಾರಿಗೆ ಬಂದಿದೆ.

ಟ್ರಂಪ್ ಮುಖಕ್ಕೆ ಮಸಿ ಬಳೆದ ನ್ಯಾಯಾಲಯ, 'ಟ್ರಾವೆಲ್ ಬ್ಯಾನ್'ಗೆ ತಡೆಟ್ರಂಪ್ ಮುಖಕ್ಕೆ ಮಸಿ ಬಳೆದ ನ್ಯಾಯಾಲಯ, 'ಟ್ರಾವೆಲ್ ಬ್ಯಾನ್'ಗೆ ತಡೆ

ಜನವರಿಯಲ್ಲಿ ಟ್ರಂಪ್ ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮನ್ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶದಿಂದ ನಿಷೇಧ ಹೇರಿದ್ದರು.

refugees from six Muslim countries comes into effect

ಟ್ರಂಪ್ ಅವರ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಮೆರಿಕದ ವಿರೋಧ ಪಕ್ಷಗಳೂ ಇದನ್ನು ವ್ಯಾಪಕವಾಗಿ ಟೀಕಿಸಿದವು.

ಮುಸ್ಲಿಂ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶವಿನ್ನು ಕಠಿಣ ಮುಸ್ಲಿಂ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶವಿನ್ನು ಕಠಿಣ

ಭಾರೀ ವಿರೋಧದ ಹಿನ್ನೆಲೆಯಲ್ಲಿ ಈ ಪ್ರಕರಣ ಅಮೆರಿಕದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ, ಈ ಆರು ದೇಶಗಳಿಂದ ನಿರಾಶ್ರಿತರ ಹೆಸರಿನಲ್ಲಿ ಭಯೋತ್ಪಾದಕರು ಹೆಚ್ಚಾಗಿ ಅಮೆರಿಕದ ಕಡೆಗೆ ವಲಸೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ತಾವು ನಿಷೇಧದ ನಿರ್ಧಾರ ಕೈಗೊಂಡಿರುವುದಾಗಿ ತಮ್ಮ ಆದೇಶವನ್ನು ಸಮರ್ಥಿಸಿಕೊಂಡಿದ್ದರು.

ಸುಮಾರು ಐದು ತಿಂಗಳ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಕೊನೆಗೆ ಟ್ರಂಪ್ ವಾದಕ್ಕೇ ಮನ್ನಣೆ ನೀಡಿತು.

ಹೀಗೆ, ಸುಪ್ರೀಂ ಕೋರ್ಟ್ ನ ಹಸಿರು ನಿಶಾನೆ ಸಿಕ್ಕ ಹಿನ್ನೆಲೆಯಲ್ಲಿ, ಆರು ರಾಷ್ಟ್ರಗಳ ಅಮೆರಿಕ ಪ್ರವೇಶ ನಿರ್ಬಂಧ ಜೂನ್ 29ರಿಂದ ಜಾರಿಯಾಗಿದೆ ಎಂದು ಅಮೆರಿಕ ಸರ್ಕಾರದ ಮೂಲಗಳು ತಿಳಿಸಿವೆ.

English summary
The ban imposed by US President Donald Trump on refugees from six Muslim countries comes into effect. The order came into effect after the Supreme Court allowed it following a five month battle with rights groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X