ನ್ಯೂಜೆರ್ಸಿಯ ಮೊದಲ ಸಿಖ್ ಮೇಯರ್ ರವೀಂದರ್ ಭಲ್ಲ

By: ವಿಕಾಸ್ ನಂಜಪ್ಪ
Subscribe to Oneindia Kannada

ನ್ಯೂಜೆರ್ಸಿ, ನವೆಂಬರ್ 9: ಅಮೆರಿಕಾದ ನ್ಯೂಜೆರ್ಸಿಯ ಹೊಬೊಕಾನ್ ನಗರದ ಮೊದಲ ಸಿಖ್ ಮೇಯರ್ ಆಗಿ ರವೀಂದರ್ ಬಲ್ಲಾ ಆಯ್ಕೆಯಾಗಿದ್ದಾರೆ.

ಈ ಹಿಂದೆ ಇದೇ ಭಲ್ಲರಿಗೆ ಉಗ್ರಗಾಮಿ ಪಟ್ಟ ಕಟ್ಟಲಾಗಿತ್ತು. ಇದರಿಂದ ಹೊರ ಬಂದು ಇದೀಗ ಹೊಬೊಕಾನ್ ನಗರದ ಮೇಯರ್ ಆಗಿ ಅವರು ಆಯ್ಕೆಯಾಗಿದ್ದಾರೆ.

Ravinder Bhalla champions racism becomes first Sikh mayor of Hoboken, New Jersey

ಚುನಾವಣೆ ಮೂಲಕ ಆಯ್ಕೆಯಾದ ನ್ಯೂಜೆರ್ಸಿಯ ಮೊದಲ ಸಿಖ್ ಜನಪ್ರತಿನಿಧಿ ಎಂಬ ಕೀರ್ತಿಗೆ ಭಲ್ಲ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಅವರು ಇಲ್ಲಿನ ಕೌನ್ಸಿಲರ್ ಆಗಿ 7 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.

ಮೇಯರ್ ಆಗಿ ಆಯ್ಕೆಯಾದ ನಂತರ ಟ್ವೀಟ್ ಮಾಡಿದ ಭಲ್ಲ, "ಧನ್ಯವಾದಗಳು ಹೊಬೊಕಾನ್. ನಾನು ನಿಮ್ಮ ಮೇಯರ್ ಆಗುವುದನ್ನು ಎದುರು ನೋಡುತ್ತಿದ್ದೇನೆ," ಎಂದಿದ್ದಾರೆ.

ಜೂನ್ ನಿಂದ ಮೇಯರ್ ಚುನಾವಣೆಗೆ ಪ್ರಚಾರ ಆರಂಭವಾಗಿತ್ತು. ಭಲ್ಲ ವಿರುದ್ಧ ಎದುರಾಳಿಗಳು ಸುಳ್ಳು ಪ್ರಚಾರ ನಡೆಸಿದ್ದರು. ಆದರೆ ಈ ಎಲ್ಲಾ ಅಡೆತಡೆಗಳನ್ನು ದಾಟಿದ ಭಲ್ಲ ಗೆಲುವಿನ ನಗೆ ಬೀರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ravinder Bhalla became the first ever Sikh mayor of New Jersey’s Hoboken city. The victory was a sweet one for Bhalla who was labelled a terrorist in slanderous flyers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ