• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ನನಗೆ ಥ್ಯಾಂಕ್ಸ್ ಹೇಳುವುದು ಬೇಡ ಎಂದ ಫ್ರಾನ್ಸ್ ಮಾಜಿ ಅಧ್ಯಕ್ಷ!

|

ಪ್ಯಾರಿಸ್, ಸೆಪ್ಟೆಂಬರ್ 22: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭಾರತದ ಪಾಲುದಾರನಾಗಿ ಅನಿಲ್ ಅಂಬಾನಿ ಸಮೂಹದ ರಿಲಯನ್ಸ್ ಅನ್ನು ಫ್ರಾನ್ಸ್ ಆಯ್ಕೆ ಮಾಡಿಕೊಂಡಿರಲಿಲ್ಲ ಎಂಬುದನ್ನು ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾಂಕೊ ಒಲಾಂಡ್ ಪುನರುಚ್ಚರಿಸಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ಶುಕ್ರವಾರ ಪ್ರಕಟವಾದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಒಲಾಂಡ್, ರಿಲಯನ್ಸ್ ಅನ್ನು ಫ್ರಾನ್ಸ್ ಯಾವುದೇ ರೀತಿಯಲ್ಲಿಯೂ ಆಯ್ಕೆ ಮಾಡಿರಲಿಲ್ಲ ಎಂದರು.

ರಿಲಯನ್ಸ್ ಜತೆ ಯಾವುದೇ ಹಿತಾಸಕ್ತಿ ಸಂಘರ್ಷ ಇರುವುದನ್ನು ಅವರು ನಿರಾಕರಿಸಿದರು. ತಮ್ಮ ಪ್ರೇಯಸಿ ಜೂಲಿ ಗಾಯೆಟ್ ಅವರ ಸಿನಿಮಾಕ್ಕೆ 2016ರಲ್ಲಿ ಅಲ್ಪಮಟ್ಟಿಗೆ ಹಣ ಹೂಡಿಕೆ ಮಾಡಿದ್ದರ ಬಗ್ಗೆಯೂ ತಮಗೆ ಅರಿವಿಲ್ಲ ಎಂದು ಹೇಳಿದ್ದಾರೆ.

ದಸಾಲ್ಟ್ ಜತೆ ಪಾಲುದಾರನಾಗಿ ರಿಲಯನ್ಸ್ ಅನ್ನು ಆಯ್ಕೆ ಮಾಡುವಂತೆ ಭಾರತ ಒತ್ತಡ ಹೇರಿತ್ತೇ ಎಂಬ ಪ್ರಶ್ನೆಗೆ ಅವರು, 'ಇದಕ್ಕೆ ದಸಾಲ್ಟ್ ಮಾತ್ರವೇ ಪ್ರತಿಕ್ರಿಯೆ ನೀಡಬಲ್ಲದು' ಎಂದಿದ್ದಾರೆ.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

'ಒಪ್ಪಂದದಲ್ಲಿ ಪಾಲುದಾರಿಕೆ ದೊರೆತಿದ್ದಕ್ಕೆ ರಿಲಯನ್ಸ್ ನನಗೆ ಧನ್ಯವಾದ ಹೇಳುವ ಅಗತ್ಯವಿಲ್ಲ. ಅಲ್ಲದೆ, ಜೂಲಿ ಗಾಯೆಟ್ ಅವರ ಸಿನಿಮಾಕ್ಕೂ ರಿಲಯನ್ಸ್ ಸಮೂಹಕ್ಕೂ ನಂಟು ಇರುವ ಬಗ್ಗೆ ನಾನು ಕಲ್ಪನೆಯನ್ನೂ ಮಾಡಿಕೊಳ್ಳಲಾರೆ' ಎಂದು ಹೇಳಿದ್ದಾರೆ.

English summary
France former President Francois Hollande reiterated his statement on the selection of Reliance as India's offset partner in Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X