ಪ್ರವಾದಿ ಮಹಮ್ಮದರ ದೂರದ ಸಂಬಂಧಿಯಂತೆ ರಾಣಿ ಎಲಿಜಬೆತ್

ಲಂಡನ್, ಏಪ್ರಿಲ್ 9: ಬ್ರಿಟನ್ ನ ರಾಣಿ ಎಲಿಜಬೆತ್ ಅವರು ಪ್ರವಾದಿ ಮಹಮ್ಮದರ ವಂಶಸ್ಥರು ಎಂಬ ಸುದ್ದಿ ಹರಿದಾಡುತ್ತಿದೆ. ಮೊರಕ್ಕೊದ ಪತ್ರಿಕೆಯೊಂದು ಈ ಅಂಶ ಬಹಿರಂಗ ಪಡಿಸಿದ್ದು, ಅಧ್ಯಯನವೊಂದರ ಮೂಲಕ ತಿಳಿದುಬಂದ ಅಂಶ ಇದು ಎಂದು ಹೇಳಿಕೊಳ್ಳಲಾಗಿದೆ.

ಡೈಲಿ ಮೇಲ್ ಪ್ರಕಾರ, ಈ ಅಂಶ ಮೊದಲಿಗೆ ಪ್ರಕಟಣೆ ಆಗಿದ್ದು 1986ರಲ್ಲಿ. ಮೊರಕ್ಕೊ ಪತ್ರಿಕೆ ಹೇಳಿಕೊಳ್ಳುವಂತೆ, ರಾಣಿ ಎಲಿಜಬೆತ್ ರ ಕುಟುಂಬದ ನಲವತ್ಮೂರು ತಲೆಮಾರುಗಳ ಪರಿಶೀಲನೆ ಮಾಡಿದ ನಂತರ ಈ ಅಂಶ ಬಯಲಾಗಿದೆಯಂತೆ. ಪ್ರವಾದಿ ಮಹಮ್ಮದರಿಗೆ ರಾಣಿ ದೂರದ ಸಂಬಂಧಿ ಎಂದು ಈ ವರದಿ ಹೇಳುತ್ತಿದೆ.

Queen Elizabeth

ಅಧ್ಯಯನದ ಪ್ರಕಾರ, ಎಲಿಜಬೆತ್ ರ ರಕ್ತ ಸಂಬಂಧವು ಪ್ರವಾದಿ ಮಹಮ್ಮದರ ಮಗಳು ಫಾತಿಮಾ ಕಡೆಯಿಂದ ಹರಿದು ಬಂದಿರುವುದಂತೆ. ಆದರೆ ಕೆಲವು ಇತಿಹಾಸಕಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವು ದಾಖಲೆಗಳು ವಾದಕ್ಕೆ ಪುಷ್ಟಿಯನ್ನು ಸಹ ನೀಡುತ್ತಿವೆ ಎನ್ನುತ್ತಾರೆ. ಒಟ್ಟಿನಲ್ಲಿ ಇದೀಗ ಈ ಸುದ್ದಿ ಭಾರೀ ಚರ್ಚೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+