• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಪಕ್ಷವನ್ನು ಹಾಳುಮಾಡಿದ 'ದಾಮಾದ್' ಯಾರು?

|

ಸ್ಯಾನ್ ಹೋಸೆ, ಸೆಪ್ಟೆಂಬರ್ 28 : ಒಬ್ಬ 'ದಾಮಾದ್' (ಅಳಿಯ) ಹೇಗೆ ಯುಪಿಎ ಸರ್ಕಾರವನ್ನು ಮತ್ತು ಭಾರತವವನ್ನು, ಅಷ್ಟೇ ಏಕೆ ಕಾಂಗ್ರೆಸ್ ಪಕ್ಷವನ್ನು ಹಾಳುಗೆಡವಿದ! ಪ್ರಧಾನಿ ನರೇಂದ್ರ ಮೋದಿ ಸ್ಯಾನ್ ಹೋಸೆ ಯಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡುತ್ತ ಮೇಲಿನಂತೆ ಹೇಳಿದರು. ಮೋದಿ ದಮಾದ್ ಪದ ಬಳಸಿದ ತಕ್ಷಣ ನೆರೆದಿದ್ದ ಜನರು ಉದ್ಘೋಷವೂ ಹೆಚ್ಚಾಯಿತು.

ಪ್ರಧಾನಿ ನರೇಂದ್ರ ಮೋದಿ ಸ್ಯಾನ್ ಹೋಸೆಯಲ್ಲಿ ಮಾತನಾಡುತ್ತ ಯುಪಿಎ ಸರ್ಕಾರದ 'ಅಳಿಯನ' ಮೇಲೆ ವಾಗ್ದಾಳಿ ಮಾಡಿದರು. ಒಬ್ಬ ಅಳಿಯ ಇಡೀ ಭಾರತವನ್ನು ಲೂಟಿ ಹೊಡೆದ ಎಂದು ರಾಬರ್ಟ್ ವಾದ್ರಾ ಹೆಸರು ಹೇಳದೇ ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಮಾತನಾಡಿದರು.[ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಮಾಡಿದ ಸಿಡಿಲಿನಂಥ ಭಾಷಣ ಕೇಳಿ]

ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತ ನರೇಂದ್ರ ಮೋದಿ, 'ಒಬ್ಬರು 50 ಕೋಟಿ ಹಣ ಮಾಡಿಕೊಂಡರು, ಅವರ ಮಗ 250 ಕೋಟಿ ಹಣ ಮಾಡಿಕೊಂಡರು, ಮಗಳು 500 ಕೋಟಿ ಹಣ ಮಾಡಿಕೊಂಡರು, ಆದರೆ ಅಳಿಯ ಸಾವಿರಾರು ಕೋಟಿ ಹಣ ಮಾಡಿಕೊಂಡರು' ಎಂದು ಹೇಳಿದರು.[ಸ್ಯಾನ್‌ ಹೋಸೆಯಲ್ಲಿ ಮೊಬೈಲ್ ಆಡಳಿತದ ಕನಸು ಬಿಚ್ಚಿಟ್ಟ ಮೋದಿ]

ಭಾರತದತ್ತ ಪ್ರಪಂಚ ಹೊಸ ನೋಟ ಬೀರುತ್ತಿದೆ. ಭಾರತೀಯರು ಹೇಗೆ ಬದಲಾವಣೆ ಬಯಸುತ್ತಿದ್ದಾರೋ, ಪ್ರಪಂಚ ಸಹ ಅದಕ್ಕೆ ತಕ್ಕಂತೆ ನೋಡುತ್ತಿದೆ ಎಂದು ಹೇಳಿದರು. ಮೋದಿ 'ದಾಮಾದ್' ಎಂದು ಹೇಳುತ್ತಲೇ ನೆರೆದಿದ್ದ 18 ಸಾವಿರ ಜನ ಉದ್ಘಾರ ಮಾಡಿದರು. ಆದರೆ ಮೋದಿಯವರ ವಿದೇಶದಲ್ಲಿನ ಈ ನಡವಳಿಕೆಯನ್ನು ಕಾಂಗ್ರೆಸ್ ನಾಯಕ ರಶೀದ್ ಆಳ್ವಿ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a veiled attack on UPA regime on corruption and taking a swipe at the Congress president's son-in-law Robert Vadra, Prime Minister Narendra Modi said there were allegations of politicians and their families making crores of rupees while his government has no graft charge. Prime Minister Modi addressed the Indian diaspora at a reception in San Jose's SAP Centre and said there has been a change in the mindset about India of the people across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more