Narendra Modi: ಭಾರತ ಶಾಂತಿ ಬೆಂಬಲಿಸುತ್ತದೆ ಎಂದು ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ!
ಶಾಂತಿ ಪ್ರಿಯ ಭಾರತ ಸದಾ ಯುದ್ಧಗಳನ್ನು ವಿರೋಧ ಮಾಡುತ್ತಲೇ ಬರುತ್ತಿದೆ. ಅದರಲ್ಲೂ ಭಾರತ ಮತ್ತೊಮ್ಮೆ ಜಗತ್ತಿಗೆ ಶಾಂತಿ ಸಂದೇಶ ನೀಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಜಾಗತಿಕವಾಗಿ ಮಹತ್ವದ ಮೆಸೇಜ್ ಕೊಟ್ಟಿದ್ದು, ಭಾರತ ಯುದ್ಧಗಳನ್ನ ಬೆಂಬಲಿಸುವುದಿಲ್ಲ ಆದರೆ ಯುದ್ಧಗಳನ್ನು ವಿರೋಧಿಸುತ್ತದೆ ಎಂಬ ಮಾತು ಹೇಳಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಅವರು ಈ ಮಹತ್ವದ ಹೇಳಿಕೆ ನೀಡಿದ್ದು ಎಲ್ಲಿ? ಬನ್ನಿ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಪೋಲೆಂಡ್ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿಂದ ಅವರು ಯುದ್ಧ ಪೀಡಿತ ಉಕ್ರೇನ್ ದೇಶಕ್ಕೆ ಕೂಡ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ಉಕ್ರೇನ್‌ಗೆ ಸಾಂತ್ವನ ಹೇಳಲಿದ್ದಾರೆ, ಅಲ್ಲದೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಕೂಡ ದಟ್ಟವಾಗಿದೆ. ಹೀಗಿದ್ದಾಗಲೇ ಮಹತ್ವದ ಘಟನೆ ಒಂದು ನಡೆದಿದೆ, ಅದು ಏನೆಂದರೆ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಯುದ್ಧ ವಿರೋಧಿಸಿದ್ದಾರೆ. ಅಲ್ಲದೆ ಈ ಕುರಿತು ಬಹಿರಂಗವಾಗಿ ಯುದ್ಧ ವಿರೋಧಿ ಹೇಳಿಕೆ ಕೂಡ ನೀಡಿದ್ದಾರೆ. ಹಾಗಾದ್ರೆ ಈಗ ಪ್ರಧಾನಿ ಮೋದಿ ಅವರು ಯುದ್ಧಗಳ ಬಗ್ಗೆ ಹೇಳಿದ್ದು ಏನು? ಮುಂದೆ ಓದಿ.

ಭಾರತ ಎಲ್ಲಾ ದೇಶಗಳ ಸ್ನೇಹಿತ!
ಯುದ್ಧವನ್ನ ವಿರೋಧಿಸಿ ಮಹತ್ವದ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, 'ಭಾರತ ಶಾಂತಿ ಬೆಂಬಲಿಸುತ್ತದೆ. ರಾಜತಾಂತ್ರಿಕತೆ ಹಾಗೂ ಮಾತುಕತೆಯ ಮೂಲಕ ಯಾವುದೇ ಸಂಘರ್ಷ ಸರಿ ಮಾಡಬಹುದು, ಹೀಗಾಗಿ ಇದು ಯುದ್ಧಗಳನ್ನ ಮಾಡುವ ಸಮಯ ಅಲ್ಲ' ಎಂದು ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು. ಇದು ರಷ್ಯಾ & ಉಕ್ರೇನ್ ನಾಯಕರಿಗೆ ಮಹತ್ವದ ಮೆಸೇಜ್ ಕೊಟ್ಟಂತಾಗಿದೆ.
ಪೋಲೆಂಡ್ ಪ್ರವಾಸದ ಸಂದರ್ಭದಲ್ಲಿ ವಾಸಾದಲ್ಲಿ ಭಾರತ ಮೂಲದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಎಲ್ಲ ದೇಶಗಳಿಂದಲೂ ಅಂತರ ಕಾಯ್ದು ಕೊಳ್ಳಬೇಕು ಎಂಬುದು ಹಿಂದಿನ ಭಾರತದ ನೀತಿ ಆಗಿತ್ತು. ಆದರೆ ಈಗ ಅದು ಬದಲಾಗಿದ್ದು, ಭಾರತ ಈಗ ಪ್ರಪಂಚದ ಎಲ್ಲಾ ದೇಶಗಳಿಗೂ ಹತ್ತಿರವಾಗ್ತಿದೆ' ಎಂದಿದ್ದಾರೆ ಪ್ರಧಾನಿ ಮೋದಿ ಅವರು.
45 ವರ್ಷಗಳ ನಂತರ ಭೇಟಿ!
ಪ್ರಧಾನಿ ಮೋದಿ ಅವರು ಪೋಲೆಂಡ್ ದೇಶದಲ್ಲಿ 2 ದಿನ ವಾಸ್ತವ್ಯ ಹೂಡಲಿದ್ದಾರೆ. 45 ವರ್ಷದ ನಂತರ ಈ ದೇಶಕ್ಕೆ ಭಾರತದ ಪ್ರಧಾನಿ ಒಬ್ಬರು ಅಧಿಕೃತವಾಗಿ ಮೊದಲ ಬಾರಿಗೆ ಭೇಟಿ ನೀಡಿದ್ದು ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಪೋಲೆಂಡ್ ನಂತರ ಮೋದಿ ಅವರು ಆಗಸ್ಟ್ 23 ರಂದು ಅಂದ್ರೆ ನಾಳೆ, ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ಕೊಡಲಿದ್ದಾರೆ. ಒಟ್ಟು 7 ಗಂಟೆಗಳ ಕಾಲ ಉಕ್ರೇನ್ ರಾಜಧಾನಿಯಲ್ಲಿ ಉಕ್ರೇನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸುವರು. ಪೋಲೆಂಡ್ ದೇಶದ ಮೂಲಕ ಅವರು ರೈಲು ಮಾರ್ಗದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟಾರೆ 20 ಗಂಟೆಗಳ ಕಾಲ ರೈಲು ಪ್ರಯಾಣ ಮಾಡಲಿದ್ದಾರೆ ಪ್ರಧಾನಿ ಮೋದಿ ಅವರು.












Click it and Unblock the Notifications