ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ
ಮೆಕ್ಸಿಕೋ, ಜೂನ್ 23 : ದಕ್ಷಿಣ ಮೆಕ್ಸಿಕೋದ ಕರಾವಳಿ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಮಂಗಳವಾರ ಭೂಮಿ ಕಂಪಿಸುತ್ತಿದ್ದಂತೆ ಜನರು ಮನೆಯಿಂದ ರಸ್ತೆಗೆ ಓಡಿ ಬಂದಿದ್ದಾರೆ.
Recommended Video
ಮಂಗಳವಾರದ ಭೂಕಂಪದ ಬಳಿಕ ಮೆಕ್ಸಿಕೋದಲ್ಲಿ ಸುನಾಮಿಯ ಎಚ್ಚರಿಕೆ ನೀಡಲಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.4ರಷ್ಟು ದಾಖಲಾಗಿತ್ತು.
ಭೂಕಂಪದಿಂದ ಯಾವ ಪ್ರಮಾಣದ ಹಾನಿಯಾಗಿದೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿಲ್ಲ. ಪ್ರಧಾನಿ ಆಯಂಡ್ರೆಸ್ ಮಾನ್ಯುಯೆಲ್ ಲೋಪೆಜ್ ಒಬ್ರಾಡರ್ ಸಹ ಹಾನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಭೂಕಂಪದದಿಂದಾಗಿ ಅಪಾರ್ಟ್‌ಮೆಂಟ್ ಗೋಡೆ ಬಿರುಕು ಬಿಟ್ಟಿದ್ದು, ಎಲ್ಲರೂ ರಸ್ತೆಗೆ ಓಡಿ ಬಂದೆವು ಎಂದು ಕೆಲವು ನಿವಾಸಿಗಳು ಹೇಳಿಕೆ ನೀಡಿದ್ದಾರೆ. ಮೆಕ್ಸಿಕೋ ನಗರದಲ್ಲಿಯೂ ಭೂಕಂಪದಿಂದ ಯಾವುದೇ ಹಾನಿಯಾಗಿಲ್ಲ.
2017ರಲ್ಲಿ ಕೇಂದ್ರ ಮೆಕ್ಸಿಕೋ ಭಾಗದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ 355 ಜನರು ಮೃತಪಟ್ಟಿದ್ದರು. ಹಲವಾರು ಕಟ್ಟಡಗಳಿಗೆ ಹಾನಿ ಉಂಟಾಗಿತ್ತು. ಮಂಗಳವಾರದ ಭೂಕಂಪದ ಬಳಿಕ ಸುನಾಮಿ ಉಂಟಾಗಬಹುದು ಎಂಬ ಎಚ್ಚರಿಕೆಯೂ ಇದೆ.












Click it and Unblock the Notifications