Get Updates
Get notified of breaking news, exclusive insights, and must-see stories!

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಸಂಸತ್‌ನಲ್ಲಿ ವಿಶೇಷ ಗೌರವ | PM Narendra Modi

ಭಾರತ ಮತ್ತು ಇಸ್ರೇಲ್ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂಬುದು ಇಡೀ ಜಗತ್ತಿಗೆ ಮತ್ತೊಮ್ಮೆ ಈಗ ಮನವರಿಕೆ ಆಗುತ್ತಿದ್ದು, ಇಸ್ರೇಲ್ ಸಂಸತ್ ಉದ್ದೇಶಿಸಿ ಪ್ರಧಾನಿ ಮೋದಿ ಅವರು ಆಡಿದ ಮಾತುಗಳು ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಒಂದು ಕಡೆ ಪಾಕಿಸ್ತಾನ ರೀತಿಯ ಉಗ್ರ ಪೋಷಕ ದೇಶಗಳಿಗೆ ಎಚ್ಚರಿಕೆ ಸಂದೇಶ ಹೋಗಿದ್ದರೆ, ಇನ್ನೊಂದು ಕಡೆ ಭಾರತದ ಅಭಿವೃದ್ಧಿಯ ವೇಗ ಇಸ್ರೇಲ್ ಜೊತೆ ಜೊತೆಗೆ ಸಾಗುವ ಸಂದೇಶ ಕೂಡ ರವಾನೆ ಆಗಿದೆ. ಇಸ್ರೇಲ್ ಮತ್ತು ಭಾರತ ಹಲವು ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದ್ದು, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಸಂಸತ್‌ನಲ್ಲಿ ವಿಶೇಷ ಗೌರವ ನೀಡಲಾಗಿದೆ. ಇದನ್ನೆಲ್ಲಾ ನೋಡಿ ಪಾಕಿಸ್ತಾನ ನಾಯಕರಿಗೆ ಹೊಸ ಚಿಂತೆಯೇ ಶುರು ಆಗಿದೆ.

ಇಸ್ರೇಲ್ ಸಂಸತ್ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದಲ್ಲಿ ಹಲವಾರು ಪ್ರಮುಖ ಅಂಶಗಳು ಇದ್ದವು. ಆದರೆ ಜಗತ್ತಿನ ಗಮನ ಸೆಳೆದಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟ ಹಾಗೂ ಉಗ್ರವಾದದ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದ್ದು ಗಮನ ಸೆಳೆಯಿತು. ಅಲ್ಲದೆ ಇದು, ಪಾಕಿಸ್ತಾನ ರೀತಿಯ ಉಗ್ರ ಪೋಷಕ ದೇಶಗಳಿಗೆ ನಿದ್ದೆಯೇ ಹಾರಿ ಹೋಗುವಂತೆ ಮಾಡಿದೆ. 2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದಿದ್ದ ಹಮಾಸ್ ದಾಳಿಯನ್ನ ಪ್ರಧಾನಿ ಮೋದಿ ಅವರು ಮಾನವೀಯ ಮೌಲ್ಯ ತುಳಿದ ಕ್ರೂರ ಭಯೋತ್ಪಾದಕ ಕೃತ್ಯ, ಎಂದಿರುವುದು ಭಯೋತ್ಪಾದನೆಗೆ ಬೆಂಬಲ ನೀಡುವವರಿಗೆ ವಾರ್ನಿಂಗ್ ಕೊಟ್ಟಂತಿದೆ. ಇದೇ ವೇಳೆ ಇಸ್ರೇಲ್ ಸಂಸತ್ ವತಿಯಿಂದ, ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ ಪ್ರದಾನ ಮಾಡಿ ಪ್ರಧಾನಿ ಮೋದಿ ಅವರನ್ನು ಗೌರವಿಸಿದೆ ಇಸ್ರೇಲ್.

PM Narendra Modi

ಮೊದಲ ಬಾರಿಗೆ ಭಾರತದ ಪ್ರಧಾನಿ ಭಾಷಣ

ಇಸ್ರೇಲ್ & ಭಾರತದ ಸಂಬಂಧದಲ್ಲಿ ಮತ್ತೊಂದು ಐತಿಹಾಸಿಕ ದಿನ ದಾಖಲಾಗಿದ್ದು, ಇದೇ ಮೊದಲನೇ ಬಾರಿಗೆ ಭಾರತದ ಪ್ರಧಾನಿ ಒಬ್ಬರು ಇಸ್ರೇಲ್ ಸಂಸತ್ ಉದ್ದೇಶಿಸಿ ಮಾತನಾಡಿದ್ದಾರೆ. ಬರೋಬ್ಬರಿ 9 ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರವಾಸ ಕೈಗೊಂಡಿದ್ದು, 2017ರ ಸಮಯದಲ್ಲಿ ಮೊದಲ ಬಾರಿ ಇಸ್ರೇಲ್‌ಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದರು. ಇದೀಗ ಇಸ್ರೇಲ್‌ನ ಸಂಸತ್‌ನಲ್ಲಿ ನಿಂತು ಪ್ರಧಾನಿ ಮೋದಿ ಅವರು ಮಾತನಾಡುತ್ತಾ, ಇಸ್ರೇಲ್ ದೇಶಕ್ಕೆ ಸಂಪೂರ್ಣ ಬೆಂಬಲ ಘೋಷಿಸಿ ಜಗತ್ತಿನ ಗಮನ ಸೆಳೆದರು. ಹಾಗೇ, 2023 ಅಕ್ಟೋಬರ್ 7 ಇಸ್ರೇಲ್ ಎಂದಿಗೂ ಮರೆಯಲು ಆಗದು. ಏಕೆಂದರೆ ಇದೇ ದಿನ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ ಹಿಂಸಾಚಾರ ನಡೆಸಿದ್ದರು. ಇಂಥ ಘೋರ ಘಟನೆಯನ್ನ ಪ್ರಧಾನಿ ಮೋದಿ ಅವರು ಈಗ ತೀವ್ರವಾಗಿ ಖಂಡಿಸಿದ್ದಾರೆ.

ರಕ್ಷಣಾ ಕ್ಷೇತ್ರದ ಬಲವರ್ಧನೆಗೆ ಪ್ಲಾನ್

ಪ್ರಧಾನಿ ಮೋದಿ ಅವರು ಇದೀಗ ಇಸ್ರೇಲ್ ಜೊತೆಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ, ಈ ಪೈಕಿ ರಕ್ಷಣಾ ಕ್ಷೇತ್ರ ಬಲವರ್ಧನೆಗೆ ಭಾರತ ಮತ್ತು ಇಸ್ರೇಲ್ ಒಟ್ಟಿಗೆ ಕೆಲಸ ಮಾಡುವುದು ಸೇರಿ ತಂತ್ರಜ್ಞಾನ, ಕೃಷಿ, ಸೈಬರ್ ಭದ್ರತೆ ಹಾಗೇ ವ್ಯಾಪಾರ ಸಂಬಂಧ ವೃದ್ಧಿ ವಿಚಾರವಾಗಿ ಕೂಡ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಅವರ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ & ಭವಿಷ್ಯದ ದೃಷ್ಟಿಯಿಂದಲೂ ಭಾರತಕ್ಕೆ ದೊಡ್ಡ ಲಾಭ ತರಲಿರುವ ಈ ಭೇಟಿ ಇತಿಹಾಸದ ಪುಟಗಳಲ್ಲಿ ಉಳಿಯಲಿದೆ ಎಂಬುದು ತಜ್ಞರ ಮಾತು. ಮತ್ತೊಂದು ಕಡೆ ಶೀಘ್ರದಲ್ಲೇ ಇಸ್ರೇಲ್ ಮತ್ತು ಭಾರತ ಉಗ್ರರ ವಿಚಾರದಲ್ಲಿ ಜಂಟಿಯಾಗಿ ಹೋರಾಟ ಶುರು ಮಾಡುವ ನಿರೀಕ್ಷೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+