ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆ ಲೋಕಾರ್ಪಣೆ

Posted By:
Subscribe to Oneindia Kannada

ಲಂಡನ್, ನವೆಂಬರ್ 14 : ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರ ಪುತ್ಥಳಿಯಲ್ಲಿ ಲಂಡನ್‌ನ ಲ್ಯಾಂಬೆತ್ ನಗರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. 'ಅನುಭವ ಮಂಟಪದ ಕಲ್ಪನೆ ನೀಡಿದ್ದ ಬಸವಣ್ಣ ಅವರು ಮಹಾನ್ ಮಾನವತಾವಾದಿ' ಎಂದು ಮೋದಿ ಬಣ್ಣಿಸಿದರು.

ಶನಿವಾರ ಲಂಡನ್ ಕಾಲಮಾನ ಬೆಳಗ್ಗೆ 9.45ಕ್ಕೆ ನಡೆದ ಸಮಾರಂಭದಲ್ಲಿ ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಂಡೆಯ ಆಲ್ಬರ್ಟ್ ಎಂಬಾಕ್ ಮೆಂಟ್ ಎಂಬ ಪ್ರದೇಶದಲ್ಲಿ ನರೇಂದ್ರ ಮೋದಿ ಬಸವೇಶ್ವರ ಪ್ರತಿಮೆ ಲೋಕಾರ್ಪಣೆಗೊಳಿಸಿದರು. [ಬಸವಣ್ಣ ಪ್ರತಿಮೆ ಅನಾವರಣ ಆಹ್ವಾನ ಸ್ವೀಕರಿಸಿದ ಮೋದಿ]

basaveshwara

ಸುಮಾರು 2 ಅಡಿ ಎತ್ತರದ ಬಸವಣ್ಣ ಪ್ರತಿಮೆಯನ್ನು ಹಡಗಿನ ಮೂಲಕ ಲಂಡನ್‌ಗೆ ರವಾನಿಸಲಾಗಿತ್ತು. 2012ರ ಜುಲೈ ತಿಂಗಳಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ಸಿಕ್ಕಿತ್ತು. 2013ರ ಫೆಬ್ರುವರಿಯಲ್ಲಿ ತುಮಕೂರು ಸಿದ್ದಗಂಗಾ ಶ್ರೀಗಳು ಸಾಂಕೇತಿಕವಾಗಿ ಶಿಲಾನ್ಯಾಸ ನೆರವೇರಿಸಿದ್ದರು. [ಚಿತ್ರಗಳು : ಲಂಡನ್ ನಲ್ಲಿ ನರೇಂದ್ರ ಮೋದಿ]

ಕಲಬುರಗಿ ಮೂಲದ ಕನ್ನಡಿಗ, ಲಂಡನ್‌ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರ ಪರಿಶ್ರಮದಿಂದ ಥೇಮ್ಸ್ ನದಿ ದಂಡೆಯ ಪ್ರದೇಶದಲ್ಲಿ ಬಸವೇಶ್ವರರ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಅದನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.

ನನ್ನ ಜೀವನದ ಅಪೂರ್ವ ಕ್ಷಣ : ಪ್ರತಿಮೆ ಲೋಕಾರ್ಪಣೆ ಮಾಡಿದ ಬಳಿ ಮಾತನಾಡಿದ ಮೋದಿ 'ಇದು ನನ್ನ ಜೀವನದ ಅಪೂರ್ವ ಕ್ಷಣವಾಗಿದೆ. ಬಸವಣ್ಣ ಪ್ರತಿಮೆ ಅನಾವರಣ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಜಾತಿ ಅಸಮಾನತೆ ಹೋಗಲಾಡಿಸುವಲ್ಲಿ ಬಸವಣ್ಣನವರ ಪಾತ್ರ ಮಹತ್ತರವಾದದ್ದು. ಅನುಭವ ಮಂಟಪದ ಕಲ್ಪನೆ ನೀಡಿದ್ದ ಬಸವಣ್ಣ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Prime Minister Narendra Modi on Saturday unveiled a statue of 12th century social reformer Basaveshwara in London.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ