Narendra Modi: ಜೆಡಿ ವ್ಯಾನ್ಸ್‌ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್‌ನಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಶ್ವ ನಾಯಕರಿಗೆ ಏರ್ಪಡಿಸಿದ್ದ ಭೋಜನಕೂಟದಲ್ಲಿ ಭಾಗವಹಸಿಇದ್ದರು. ಈ ಸಂದರ್ಭದಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಭೇಟಿ ಮಾಡಿದ್ದಾರೆ. ಮೋದಿ ಯುಎಸ್‌ಗೆ ಭೇಟಿ ನೀಡುವ ಮೊದಲು ಟ್ರಂಪ್ ಸರ್ಕಾರದ ಸದಸ್ಯರೊಬ್ಬರ ಜೊತೆ ಇದು ಮೊದಲನೇ ಭೇಟಿಯಾಗಿದೆ.

ಫ್ರಾನ್ಸ್ ಅಧ್ಯಕ್ಷ ಎಮನ್ಯಾನುಯೆಲ್ ಮ್ಯಾಕ್ರನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸೋಮವಾರ ರಾತ್ರಿ ಎಲಿಸೀ ಅರಮನೆಯಲ್ಲಿ ನರೇಂದ್ರ ಮೋದಿ ಅವರು ವ್ಯಾನ್ಸ್ ಅವರ ಜೊತೆ ಹಸ್ತಲಾಘವ ಮಾಡುತ್ತಿರುವುದನ್ನು ನೋಡಬಹುದು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Pm narendra modi meets jd vance at elysee palace

ಅಭಿನಂದನೆಗಳು, ಇದು ಅದ್ಭುತ ಗೆಲುವು ಎಂದು ನರೇಂದ್ರ ಮೋದಿ ಹೇಳಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ವ್ಯಾನ್ಸ್ ತುಂಬಾ ಧನ್ಯವಾದಗಳು, ನಿಮ್ಮನ್ನು ನೋಡಲು ತುಂಬಾ ಖುಷಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ವಾದಕ್ಕೆ ವ್ಯಾನ್ಸ್ ಒಪ್ಪಿಗೆ

ಎಐ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, ಎಐನಂತಹ ತಂತ್ರಜ್ಞಾನಗಳು ಮನುಷ್ಯರನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ವಾದವನ್ನು ವ್ಯಾನ್ಸ್ ಒಪ್ಪಿಕೊಂಡಿದ್ದಾರೆ. ಎಐನಿಂದ ಎಲ್ಲರೂ ಕೆಲಸ ಕಳೆದುಕೊಳ್ಳುತ್ತಾರೆ ಎನ್ನುವ ವಾದವನ್ನು ನಿರಾಕರಿಸಿದ ಮೋದಿ, ತಂತ್ರಜ್ಞಾನದಿಂದ ಕೆಲಸ ಹೋಗುವುದಿಲ್ಲ ಎಂದು ಇತಿಹಾಸ ಹೇಳಿದೆ ಎಂದರು.

ಕೆಲಸದ ಸ್ವರೂಪಗಳು ಬದಲಾವಣೆಯಾಗಲಿದ್ದೆ, ಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಎಐ ಆಧರಿತ ಭವಿಷ್ಯಕ್ಕಾಗಿ ನಾವು ನಮ್ಮ ಜನರ ಮತ್ತು ಮರು-ಕೌಶಲ್ಯದಲ್ಲಿ ಹೂಡಿಕೆ ಮಾಡಬೇಕು ಎಂದು ನರೇಂದ್ರ ಮೋದಿ ಹೇಳಿದರು.

ನರೇಂದ್ರ ಮೋದಿ ಬಳಿಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ವ್ಯಾನ್ಸ್, ಎಐ ಜನರ ಕೆಲಸವನ್ನು ಸುಲಭವಾಗಿಸುತ್ತದೆ. ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎನ್ನುವ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಶ್ಲಾಘಿಸುತ್ತೇನೆ ಎಂದರು.

ಎಐ ತಂತ್ರಜ್ಞಾನದಿಂದ ಮನುಷ್ಯರ ಕೆಲಸ ಬದಲಾಗುವುದಿಲ್ಲ, ಅದು ಎಂದಿಗೂ ಮನುಷ್ಯರ ಕೆಲಸವನ್ನು ಕಿತ್ತುಕೊಳ್ಳಲು ಆಗಲ್ಲ. ಎಐ ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಹೆಚ್ಚು ಸಮೃದ್ಧವಾಗಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.

ಮಂಗಳವಾರ ನರೇಂದ್ರ ಮೋದಿ ಮತ್ತು ಮ್ಯಾಕ್ರನ್ ಸಹ-ಅಧ್ಯಕ್ಷತೆಯಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸಿದ ವಿಶ್ವ ನಾಯಕರಲ್ಲಿ ಚೀನಾದ ಉಪಾಧ್ಯಕ್ಷ ಜಾಂಗ್ ಗುವೊಕಿಂಗ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಕೂಡ ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+