
ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ
ಟೋಕಿಯೋ, ಸೆಪ್ಟೆಂಬರ್ 27: ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಜಪಾನ್‌ಗೆ ತೆರಳಿದ್ದಾರೆ.
ಪ್ರಧಾನಿ ಮೋದಿ ಶಿಂಜೋ ಅಬೆಗೆ ಶ್ರದ್ಧಾಂಜಲಿ ಸಲ್ಲಿಸಲು ಹಲವಾರು ಜಾಗತಿಕ ನಾಯಕರೊಂದಿಗೆ ಸೇರಿಕೊಳ್ಳಲಿದ್ದಾರೆ. ಮಂಗಳವಾರ ನಡೆಯಲಿರುವ ಅಬೆ ಅವರ ಅಂತ್ಯಕ್ರಿಯೆಯಲ್ಲಿ 20ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರು ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಸೆ. 27ಕ್ಕೆ ಶಿಂಜೋ ಅಬೆಗೆ 2ನೇ ಬಾರಿ ನಮನ, ವಿವಿಧ ದೇಶದ ಗಣ್ಯರು ಭಾಗಿ
ಜಪಾನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ "ಟೋಕಿಯೋದಲ್ಲಿ ಬಂದಿಳಿದೆ" ಎಂದು ಟ್ವೀಟ್ ಮಾಡಿದ್ದಾರೆ. ಡಿಪ್ಲೇನಿಂಗ್ ಮಾಡುವಾಗ ಅವರ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಇದೇ ರೀತಿಯ ಟ್ವೀಟ್ ಅನ್ನು ಜಪಾನಿನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಪಾನ್ ತೆರಳುವ ಮುನ್ನ ಪ್ರಧಾನಿ ಟ್ವೀಟ್:
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಿ ಗೌರವದೊಂದಿಗೆ ನೆರವೇರಲಿರುವ ಜಪಾನ್‌ನ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೋಮವಾರ ರಾತ್ರಿ ಜಪಾನ್‌ನ ಟೋಕಿಯೋಗೆ ತೆರಳಲಿದರು. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ;
"ಭಾರತ-ಜಪಾನ್ ಬಾಂಧವ್ಯದ ಮಹಾನ್ ನಾಯಕ ಮತ್ತು ಆತ್ಮೀಯ ಗೆಳೆಯರಾಗಿದ್ದ, ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾನು ಇಂದು ರಾತ್ರಿ ಟೋಕಿಯೋಗೆ ತೆರಳುತ್ತಿದ್ದೇನೆ. "ನಾನು ಎಲ್ಲಾ ಭಾರತೀಯರ ಪರವಾಗಿ ಪ್ರಧಾನಮಂತ್ರಿ ಕಿಶಿದಾ ಮತ್ತು ಶ್ರೀಮತಿ ಅಬೆ ಅವರಿಗೆ ಹೃದಯಾಂತರಾಳದ ಸಂತಾಪ ಸೂಚಿಸಲಿದ್ದೇನೆ. ಅಬೆ ಸಾನ್ ಅವರ ಕಲ್ಪನೆಯಂತೆ ಭಾರತ-ಜಪಾನ್ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಕಾರ್ಯವನ್ನು ನಾವು ಮುಂದುವರಿಸುತ್ತೇವೆ," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.