ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿಮಾನ ಪತನ ಎಲ್ಲಾಯ್ತು, ಹೇಗಾಯ್ತು, ಮೋದಿ ಟ್ವೀಟ್ ಕುರಿತು ವರದಿ

|
Google Oneindia Kannada News

ನವದೆಹಲಿ, ಮಾರ್ಚ್ 21: ಚೀನಾದ ಗುವಾಂಗ್‌ಕ್ಸಿ ಪ್ರಾಂತ್ಯದಲ್ಲಿ 132 ಮಂದಿಯನ್ನು ಹೊತ್ತೊಯ್ಯುತ್ತಿದ್ದ MU5735 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

"ಚೀನಾದ ಗುವಾಂಗ್‌ಕ್ಸಿಯಲ್ಲಿ 132 ಪ್ರಯಾಣಿಕರಿದ್ದ MU5735 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾದ ವಿಷಯ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ. ಈ ವಿಮಾನ ಅಪಘಾತದಲ್ಲಿ ಮೃತಪಟ್ಟವರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ನನ್ನ ಸಂತಾಪ ಮತ್ತು ಪ್ರಾರ್ಥನೆ ಸಲ್ಲಿಸಲು ಬಯಸುತ್ತೇನೆ," ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಹಾರುವ ಶವಪೆಟ್ಟಿಗೆ ಎಂದೇ ಹೆಸರಾದ ಬೋಯಿಂಗ್ 737 ವಿಮಾನ ಪತನ: ವಿಡಿಯೋ ವೈರಲ್ ಹಾರುವ ಶವಪೆಟ್ಟಿಗೆ ಎಂದೇ ಹೆಸರಾದ ಬೋಯಿಂಗ್ 737 ವಿಮಾನ ಪತನ: ವಿಡಿಯೋ ವೈರಲ್

132 ಜನರಿದ್ದ ಚೀನಾದ ವಿಮಾನವು ದಕ್ಷಿಣ ಗುವಾಂಗ್‌ಕ್ಸಿ ಪ್ರಾಂತ್ಯದಲ್ಲಿ ಸೋಮವಾರ ಪತನಗೊಂಡಿದೆ. ಕುನ್ಮಿಂಗ್‌ನಿಂದ ಗುವಾಂಗ್‌ಕ್ಸಿಗೆ ಹಾರಿದ ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನವು ವುಝೌ ನಗರದ ಬಳಿಯ ಟೆಂಗ್‌ಕ್ಸಿಯಾನ್ ಕೌಂಟಿಯಲ್ಲಿ ಪತನಗೊಂಡಿದೆ ಎಂದು ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಡಳಿಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಚೀನಾ ರಾಯಭಾರಿ:

ಭಾರತದಲ್ಲಿನ ಚೀನಾ ರಾಯಭಾರಿ ಸನ್ ವೀಡಾಂಗ್ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ನಿಮ್ಮ ಪ್ರಾರ್ಥನೆ ಮತ್ತು ವಿಮಾನ ಅಪಘಾತದ ನಷ್ಟಕ್ಕೆ ಸಹಾನುಭೂತಿ ತೋರಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಸ್ನೇಹಿತರಿಗೆ ಧನ್ಯವಾದಗಳು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸಂಪೂರ್ಣ ಹುಡುಕಾಟ ಮತ್ತು ರಕ್ಷಣೆಗೆ ಆದೇಶ ನೀಡಿದ್ದಾರೆ. ಸಂತ್ರಸ್ತರು ಹಾಗೂ ಅವರ ಕುಟುಂಬಗಳಿಗೆ ತೀವ್ರ ಸಂತಾಪ," ಎಂದು ಟ್ವೀಟ್ ಮಾಡಿದ್ದಾರೆ.

PM Narendra modi expresses grief over the crash of the passenger flight MU5735 in china

ವಿಮಾನ ಪತನದ ಬಗ್ಗೆ ಈವರೆಗೂ ತಿಳಿದ ಮಾಹಿತಿ:

ಸೋಮವಾರ ಮಧ್ಯಾಹ್ನ, 133 ಜನರೊಂದಿಗೆ ಚೀನಾದ ವಿಮಾನವು ದಕ್ಷಿಣ ಪ್ರಾಂತ್ಯದ ಗುವಾಂಗ್‌ಕ್ಸಿಯಲ್ಲಿ ಪತನಗೊಂಡಿದೆ ಎಂದು ರಾಜ್ಯ ಮಾಧ್ಯಮವು ಮೊದಲು ವರದಿ ಮಾಡಿತು. ಚೀನಾದ ನಾಗರಿಕ ವಿಮಾನಯಾನ ಆಡಳಿತವು ನಂತರ ತನ್ನ ವೆಬ್‌ಸೈಟ್‌ನಲ್ಲಿ ಅಪಘಾತವನ್ನು ದೃಢಪಡಿಸಿತು. 123 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿ ಸೇರಿ ಒಟ್ಟು 132 ಜನರಿದ್ದರು ಎಂದು ಹೇಳಿತು.

ಚೀನಾ ಪೂರ್ವ ವಿಮಾನ MU5735 ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಸ್ಥಳೀಯ ಸಮಯ ಮಧ್ಯಾಹ್ನ 1.11 ಕ್ಕೆ (0511 GMT) ಹೊರಟಿತ್ತು ಎಂದು FlightRadar24 ಅಂಕಿ-ಅಂಶಗಳು ಹೇಳುತ್ತವೆ. ಫ್ಲೈಟ್-ಟ್ರ್ಯಾಕಿಂಗ್ ಸ್ಥಳೀಯ ಸಮಯ ಮಧ್ಯಾಹ್ನ 2.22ಕ್ಕೆ (0622 GMT) 3225 ಅಡಿ ಎತ್ತರದಲ್ಲಿ 376 ವೇಗದಲ್ಲಿ ಕಾಣದೇ ಹೋಯಿತು. ಇದು ಪೂರ್ವ ಕರಾವಳಿಯ ಗುವಾಂಗ್‌ಝೌನಲ್ಲಿ ಮಧ್ಯಾಹ್ನ 3:05ಕ್ಕೆ ಲ್ಯಾಂಡ್ ಆಗಬೇಕಿತ್ತು (0705 GMT).

ವಿಮಾನ ಅಪಘಾತ ನಡೆದಿದ್ದು ಹೇಗೆ?:

ಅಧಿಕೃತ ಮಾಧ್ಯಮಗಳ ಪ್ರಕಾರ, ವಿಮಾನವು ಪರ್ವತ ಪ್ರದೇಶದ ಮೇಲೆ ತೀವ್ರವಾಗಿ ಇಳಿದು ಪತನಗೊಂಡಿದೆ. ಸ್ಥಳೀಯರು ತಮ್ಮ ಫೋನ್‌ಗಳಲ್ಲಿ ಚಿತ್ರೀಕರಿಸಿದ ದೃಶ್ಯಾವಳಿಗಳು ಅಪಘಾತದ ಪ್ರದೇಶದಲ್ಲಿ ಭಾರಿ ಬೆಂಕಿ ಆವರಿಸಿದ್ದು, ಸ್ಫೋಟದ ಸದ್ದು ಕೇಳಿಬಂದಿತು. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಫ್‌ಎ) ಟ್ವಿಟರ್ ಮೂಲಕ ಕೇಳಿದರೆ ತನಿಖೆಯ ಪ್ರಯತ್ನಗಳಲ್ಲಿ ಸಹಾಯ ಮಾಡಲು ಸಿದ್ಧ ಎಂದು ಹೇಳಿದೆ. ವಿಮಾನ ಅಪಘಾತದ ಮಾಧ್ಯಮ ವರದಿಗಳ ಬಗ್ಗೆ ತನಗೆ ತಿಳಿದಿದೆ ಮತ್ತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕೆಲಸ ಮಾಡುತ್ತಿದೆ ಎಂದು ಬೋಯಿಂಗ್ ಚೀನಾ ಹೇಳಿದೆ. ಇದರ ಮಧ್ಯೆ ಸೋಮವಾರದ ಅಪಘಾತದ ನಂತರ ಚೀನಾ ಈಸ್ಟರ್ನ್ ವಿಮಾಯಾನವು ಎಲ್ಲಾ ಬೋಯಿಂಗ್ 737-800 ಅನ್ನು ನೆಲಸಮಗೊಳಿಸಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆಗೆ ಆದೇಶಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್:

ಚೀನಾದಲ್ಲಿ ನಡೆದಿರುವ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತಂಕ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ವಿಮಾನ ಪತನಗೊಂಡಿರುವ ಸ್ಥಳಕ್ಕೆ ತುರ್ತು ರಕ್ಷಣಾ ಸಿಬ್ಬಂದಿಯು ತೆರಳಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಚೀನಾದ ವಿಮಾನಯಾನ ಸಂಸ್ಥೆಯು ತಿಳಿಸಿದೆ.

English summary
PM Narendra modi expresses grief over the crash of the passenger flight MU5735 in china.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X