ಮಡಿವಂತಿಕೆ ಮಡಚಿಟ್ಟು ಮತ್ತೆ ನಗ್ನ ಚಿತ್ರ ಮುದ್ರಿಸಿದ 'ಪ್ಲೇಬಾಯ್'

Posted By:
Subscribe to Oneindia Kannada
ಶಿಕಾಗೋ, ಫೆಬ್ರವರಿ 15: 'ಸಾಫ್ಟ್- ಪೋರ್ನ್' ಎಂದೇ ಖ್ಯಾತವಾಗಿರುವ ಪ್ಲೇ ಬಾಯ್ ನಿಯತಕಾಲಿಕೆ ಒಂದು ವರ್ಷದ ನಂತರ ಪುನಃ ತನ್ನ ಪುಟಗಳಲ್ಲಿ ನಗ್ನ ಚಿತ್ರಗಳನ್ನು ಪ್ರಕಟಿಸಲಾರಂಭಿಸಿದೆ.

ಪಡ್ಡೆ ಹುಡುಗರ ಪಾಲಿನ ಅಚ್ಚುಮೆಚ್ಚಿನ ಮ್ಯಾಗಜೀನ್ ಎನಿಸಿರುವ ಪ್ಲೇ ಬಾಯ್, 2015ರ ಮಧ್ಯಭಾಗದಲ್ಲಿ ತನ್ನಲ್ಲಿ ಯಾವುದೇ ನಗ್ನ ಚಿತ್ರಗಳನ್ನು ಮುದ್ರಿಸುವುದಿಲ್ಲ ಎಂದು ಹೇಳಿದ್ದು ವಿಶ್ವದೆಲ್ಲೆಡೆ ಹರಡಿರುವ ಅದರ ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ಕೊಟ್ಟಂತಾಗಿತ್ತು.

Playboy announces to Run Pictures Of Naked Women again

ಆದರೆ, ಆನ್ ಲೈನ್ ಆವೃತ್ತಿಯನ್ನು ಓದುತ್ತಿದ್ದ ಅನೇಕ ಓದುಗರು ಪ್ಲೇ ಬಾಯ್ ನಿಯತಕಾಲಿಕೆಯಲ್ಲಿ ಮತ್ತೆ ನಗ್ನ ಫೋಟೋಗಳು ಬರಬೇಕೆಂದು ತೀವ್ರ ಅಭೀಪ್ಸೆ ವ್ಯಕ್ತಪಡಿಸಿದ್ದರಿಂದಾಗಿ ಪುನಃ ನಗ್ನ ಚಿತ್ರಗಳನ್ನು ಪ್ರಕಟಿಸಲಾರಂಭಿಸಿದ್ದೇವೆ ಎಂದು ಮ್ಯಾಗಝೀನ್ ಮುಖ್ಯಸ್ಥ ಸ್ಕಾಟ್ ಫ್ಲಾಂಡೆರ್ಸ್ ತಿಳಿಸಿದ್ದಾರೆ.

ಮ್ಯಾಗಜೀನ್ ನಲ್ಲಿ ನಗ್ನ ಚಿತ್ರಗಳು ಪ್ರಕಟಗೊಳ್ಳುವುದು ನಿಂತಾಗಿನಿಂದ ಅದರ ಅಂದವೇ ಹಾಳಾಗಿದೆ ಎಂದು ಖುದ್ದು ಸ್ಕಾಟ್ ಫ್ಲಾಂಡೆರ್ಸ್ ಅವರ 25 ವರ್ಷದ ಪುತ್ರನೇ ಗೊಣಗುತ್ತಿದ್ದರೂ ಸ್ಕಾಟ್ ಅವರಿಗೆ ಬೇಸರ ತರಿಸಿತ್ತೆಂದು ಹೇಳಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After publishing its first nudity-free issues for one year, Playboy magazine announces it would once again run nude pictures. According to the magazine's chief executive Scott Flanders, the huge demand for porn led to change his decision.
Please Wait while comments are loading...