ಮೇ 1ಕ್ಕೆ ಪಾಕಿಸ್ತಾನಕ್ಕೆ ಹಿಂತಿರುಗಲಿರುವ ಮಾಜಿ ಮಿಲಿಟರಿ ಸರ್ವಾಧಿಕಾರಿ ಮುಷರಫ್

ಇಸ್ಲಾಮಾಬಾದ್, ಏಪ್ರಿಲ್ 28: ಪಾಕಿಸ್ತಾನದ ಮಾಜಿ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಮೇ ಒಂದನೇ ತಾರೀಕು ತವರಿಗೆ ಹಿಂತಿರುಗಲಿದ್ದಾರೆ ಎಂದು ಅವರ ವಕೀಲರು ಶನಿವಾರ ತಿಳಿಸಿದ್ದಾರೆ. ಎಪ್ಪತ್ತೈದು ವರ್ಷದ ಮುಷರಫ್ ಮೇಲೆ ದೇಶ ದ್ರೋಹದ ಆರೋಪ ಹೊರಿಸಲಾಗಿದೆ. ಮೂರು ವರ್ಷದ ಹಿಂದೆ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದ ಅವರು, ಪಾಕ್ ಗೆ ಹಿಂತಿರುಗಿರಲಿಲ್ಲ.

ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿರುವ ಅವರು ಕಳೆದ ತಿಂಗಳು ದುಬೈನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. "ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ ಮೇ ಎರಡನೇ ತಾರೀಕು ಕೋರ್ಟ್ ವಿಚಾರಣೆಗೆ ಹಜರಾಗಲು ಮುಷರಫ್ ನಿರ್ಧರಿಸಿದ್ದಾರೆ" ಎಂದು ವಕೀಲ ಸಲ್ಮಾನ್ ಸಫ್ದಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಮೇ ಎರಡನೇ ತಾರೀಕು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಅರ್ಜಿಯೊಂದರ ವಿಚಾರಣೆ ವೇಳೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಹೇಳಿದೆ. ಒಂದು ವೇಳೆ ಪಾಕಿಸ್ತಾನಕ್ಕೆ ವಾಪಸಾಗಿ, ತಮ್ಮ ಹೇಳಿಕೆ ದಾಖಲಿಸಲು ವಿಫಲರಾದಲ್ಲಿ ಆ ನಂತರ ತಮ್ಮ ಹೇಳಿಕೆ ದಾಖಲಿಸುವ ಹಕ್ಕನ್ನೇ ಮುಷರಫ್ ಕಳೆದುಕೊಳ್ಳುತ್ತಾರೆ ಎಂದು ಮೂವರು ಸದಸ್ಯರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

Pervez Musharraf will return to Pakistan on May 1

ಹನ್ನೆರಡು ವರ್ಷದ ಹಿಂದೆ ತುರ್ತು ಪರಿಸ್ಥಿತಿ ಹೇರಿದ್ದ ಮುಷರಫ್ ವಿರುದ್ಧ ಸದ್ಯಕ್ಕೆ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ (ಪಿಎಂಎಲ್-ಎನ್) ಸರಕಾರವು ದೇಶದ್ರೋಹದ ಆರೋಪ ಹೊರಿಸಿತ್ತು. ಮುಷರಫ್ ರನ್ನು ತಪ್ಪಿತಸ್ಥ ಎಂದು ಘೋಷಿಸಿದ ವಿಶೇಷ ಕೋರ್ಟ್ ಅವರ ಆಸ್ತಿ ಜಪ್ತಿಗೆ ಆದೇಶಿಸಿತ್ತು. ಜತೆಗೆ ಮುಷರಫ್ ಪಾಸ್ ಪೋರ್ಟ್, ರಾಷ್ಟ್ರೀಯ ಗುರುತು ಪತ್ರವನ್ನು ರದ್ದುಪಡಿಸಿತ್ತು.

1999ರಿಂದ 2008ರ ತನಕ ಮುಷರಫ್ ಅವರು ಪಾಕಿಸ್ತಾನದಲ್ಲಿ ಆಡಳಿತ ನಡೆಸಿದ್ದರು. ದೇಶದ ವಿರುದ್ಧ ಪಿತೂರಿ ನಡೆಸಿದ ಆರೋಪ ಮುಷರಫ್ ಅವರ ಮೇಲಿದೆ. ಆ ತಪ್ಪು ಸಾಬೀತಾದರೆ ಮರಣ ದಂಡನೆ ಅಥವಾ ಜೀವಾವಧಿ ಜೈಲು ಶಿಕ್ಷೆ ವಿಧಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+