ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ: ಮುಷ್ರಫ್ ನೀಡಿದ ಶಾಕಿಂಗ್ ಹೇಳಿಕೆಯಿಂದ ಪಾಕ್ ಮುಖಭಂಗ!

|
Google Oneindia Kannada News

Recommended Video

Surgical Strike 2: ಮುಷ್ರಫ್ ನೀಡಿದ ಶಾಕಿಂಗ್ ಹೇಳಿಕೆಯಿಂದ ಪಾಕ್ ಮುಖಭಂಗ! | Oneindia Kannada

ಇಸ್ಲಾಮಾಬಾದ್, ಮಾರ್ಚ್ 07: ಪುಲ್ವಾಮಾ ದಾಳಿಯನ್ನು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೂಲಕ ಪಾಕಿಸ್ತಾನ ಇಂಟರ್ ಸರ್ವಿಸ್ ಇಂಟಲಿಜೆನ್ಸ್(ಐಎಸ್ ಐ) ಮಾಡಿಸಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ಹೇಳಿರುವುದು ಪಾಕಿಸ್ತಾನಕ್ಕೆ ಭಾರೀ ಆಘಾತವನ್ನುಂಟು ಮಾಡಿದೆ.

'ಹಮ್ ಟಿವಿ ಡಿಜಿಟಲ್' ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮುಷ್ರಫ್ ಈ ರೀತಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಭಾರತದ ಮೇಲೆ 50 ಅಣುಬಾಂಬ್ ಹಾಕಲು ನಮಗೆ ಸಾಧ್ಯವೇ? ಮುಷ್ರಫ್ ಪ್ರಶ್ನೆ!ಭಾರತದ ಮೇಲೆ 50 ಅಣುಬಾಂಬ್ ಹಾಕಲು ನಮಗೆ ಸಾಧ್ಯವೇ? ಮುಷ್ರಫ್ ಪ್ರಶ್ನೆ!

ಪಾಕಿಸ್ತಾನದ ಗುಪ್ತಚರ ಇಲಾಖೆಯಾಗಿರುವ ಐಎಸ್ ಐ, ಭಾರತದ ವಿರುದ್ಧ ತಾನೇ ಉಗ್ರದಾಳಿ ಮಾಡಿಸಿದೆ, ಅದಕ್ಕಾಗಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಬಳಸಿಕೊಂಡಿದೆ ಎಂಬ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲೂ ತಲ್ಲಣ ಸೃಷ್ಟಿಸಿದೆ.

ಮುಷ್ರಫ್ ಮಾತು ಸತ್ಯವಾದರೆ..?

ಮುಷ್ರಫ್ ಮಾತು ಸತ್ಯವಾದರೆ..?

ಮುಷ್ರಫ್ ಅವರು ಹೇಳಿದಂತೆ ಪಾಕಿಸ್ತಾನದ ಐಎಸ್ ಐಯು ಜೆಇ ಎಂ ಮೂಲಕ ಭಾರತದ ವಿರುದ್ಧ ದಾಳಿ ನಡೆಸಿರುವುದು ಸತ್ಯವಾದರೆ ಪಾಕಿಸ್ತಾನ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ತಾನು ಭಯೋತ್ಪಾದನೆಯ ವಿರೋಧಿ ಎನ್ನುತ್ತ ಹಲವು ಉಗ್ರ ಸಂಘಟನೆಗಳಿಗೆ ನಿಷೇಧ ಹೇರುವ ನಾಟಕವನ್ನು ಮಾಡುತ್ತಲೇ, ಪಾಕ್ ಸರ್ಕಾರದ ಅಂಗವೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತದೆ ಎಂದಾದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ.

ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ

ಜೆಇಎಂ ಗೆ ಪಾಕ್ ಬೆಂಬಲ ಸ್ಪಷ್ಟ

ಜೆಇಎಂ ಗೆ ಪಾಕ್ ಬೆಂಬಲ ಸ್ಪಷ್ಟ

ಪಾಕಿಸ್ತಾನದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಅಸ್ತಿತ್ವದಲ್ಲೇ ಇಲ್ಲ' ಎಂದು ಬುಧವಾರ ಐಎಸ್ ಐ ನೀಡಿದ ಹೇಳಿಕೆಯನ್ನು ನೋಡಿದರೆ, ಐಎಸ್ ಐಯು ಜೆಇಎಂ ನ ಬೆಂಬಲಕ್ಕೆ ನಿಂತಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅದಕ್ಕೆ ಪೂರಕ ಎಂಬಂತೆ ಮುಷ್ರಫ್ ನೀಡಿದ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಪುಲ್ವಾಮ ದಾಳಿಯಲ್ಲಿ ಜೆಇಎಂ ಕೈವಾಡ ಒಪ್ಪಿದ್ದ ಮುಷ್ರಫ್

ಪುಲ್ವಾಮ ದಾಳಿಯಲ್ಲಿ ಜೆಇಎಂ ಕೈವಾಡ ಒಪ್ಪಿದ್ದ ಮುಷ್ರಫ್

ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ಉಗ್ರರ ಕೈವಾಡವಿರುವುದು ಸತ್ಯ. ಆದರೆ ಪಾಕಿಸ್ತಾನದ ಕೈವಾಡ ಇದರಲ್ಲಿಲ್ಲ. ಪಾಕಿಸ್ತಾನ ಅಮಾಯಕ. ಆದರೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯೇ ಈ ದಾಳಿಯನ್ನು ನಡೆಸಿದೆ ಎಂದು ಮುಷ್ರಫ್ ಹೇಳಿದ್ದರು. ಈ ಮೂಲಕ ಪಾಕಿಸ್ತಾನವೇ ನೆಲೆ ನೀಡಿದ ಜೆಇಎಂ ನಿಂದಲೇ ದಾಳಿ ನಡೆದಿದೆ ಎಂದು ಒಪ್ಪಿಕೊಂಡಿದ್ದರು.

ಮತ್ತೀಗ ಬದಲಾದ ಹೇಳಿಕೆ!

ಮತ್ತೀಗ ಬದಲಾದ ಹೇಳಿಕೆ!

ಅಂದು ಪಾಕಿಸ್ತಾನ ಅಮಾಯಕ ಎಂದಿದ್ದ ಮುಷ್ರಫ್, ಇದೀಗ ಐಎಸ್ ಐ ಕೈವಾಡವಿದೆ ಎನ್ನುತ್ತಿದ್ದಾರೆ! "ನೀವ್ಯಾಕೆ ಪಾಕಿಸ್ತಾನದ ವಿಷಯದಲ್ಲಿ ತಲೆಹಾಕುತ್ತೀರಿ? ಪಾಕಿಸ್ತಾನವನ್ನು ಎರಡು ಭಾಗ(ಪಾಕಿಸ್ತಾನ-ಬಾಂಗ್ಲಾದೇಶ) ಮಾಡಲು ನೀವೇಕೆ ಸಹಾಯ ಮಾಡಿದಿರಿ? ನೀವು ಫ್ರಾನ್ಸ್ ಮತ್ತು ಅಮೆರಿಕದ ಬೆಂಬಲದಿಂದಾಗಗಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರತ್ನಿಸುತ್ತಿದ್ದೀರಿ" ಎಂದು ಭಾರತದ ವಿರುದ್ಧ ಕಿಡಿಕಾರಿದ್ದ ಮುಷ್ರಫ್, ಇದೀಗ ಐಎಸ್ಐ ಮೂಲಕವೇ ಪುಲ್ವಾಮಾ ದಾಳಿ ನಡೆದಿದೆ ಎನ್ನುತ್ತಿದ್ದಾರೆ. ಈಗ ಪಾಕಿಸ್ತಾನವನ್ನು ಅವರು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ?

English summary
Former president of Pakistan Parvez Musharraf admitted that Pakistan's ISI(Inter-Services Intelligence) used Jaish-e-Mohammad for terror attacks in India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X