ಪಾಕಿಸ್ತಾನ ಮಾಜಿ ಪ್ರಧಾನಿಗೆ ಸಿಗುತ್ತಾ ಜೈಲಿನಿಂದ ಮುಕ್ತಿ?

ಪಾಕಿಸ್ತಾನ ಅನ್ನೋ ಹೆಸರಲ್ಲೇ ನೂರಾರು ಸಮಸ್ಯೆ ಇದೆ ಅಂತಾ ಕಾಣುತ್ತೆ, ಯಾಕಂದ್ರೆ ಈ ದೇಶ ಸಾಲು ಸಾಲು ಸಮಸ್ಯೆಗಳನ್ನ ಸೃಷ್ಟಿಸಿಕೊಂಡು ಒದ್ದಾಡುತ್ತಿದೆ. ಅಲ್ಲಿನ ಜನರು ಒಂದು ಹೊತ್ತು ನೆಮ್ಮದಿಯಾಗಿ ಊಟ ಮಾಡಲು ಕೂಡ ಆಗುತ್ತಿಲ್ಲ. ಇನ್ನು ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಗಬ್ಬೆದ್ದು ಹೋಗಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಕಂಬಿ ಹಿಂದೆ ತಳ್ಳಲಾಗಿದೆ. ಆದರೆ ಈಗ, ಒಂದೊಂದೇ ಪ್ರಕರಣದಲ್ಲಿ ಇಮ್ರಾನ್ ಖಾನ್ ರಿಲೀಫ್ ಪಡೆದು ನಿಟ್ಟುಸಿರು ಬಿಡುತ್ತಿದ್ದಾರೆ.

ಹೌದು, 2023ರ ಮೇ 9 ರಂದು ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗ 2 ಕೇಸ್‌ನಲ್ಲಿ ಇಮ್ರಾನ್ ಖಾನ್ ರಿಲೀಫ್ ಪಡೆದಿದ್ದಾರೆ. ಸಾಕ್ಷ್ಯಗಳ ಕೊರತೆ ಕಾರಣಕ್ಕೆ ಪಾಕ್ ನ್ಯಾಯಾಲಯ ಇದೀಗ ಇಮ್ರಾನ್ ಖಾನ್ ಅವರನ್ನು ಖುಲಾಸೆ ಮಾಡಿದ್ದು. ಪಿಟಿಐ ಅಂದ್ರೆ ಪಾಕಿಸ್ತಾನ್‌-ಎ-ಇಸ್ಸಾಫ್‌ ಪಕ್ಷದ ಸಂಸ್ಥಾಪಕ ಕೂಡ ಆಗಿರುವ ಇಮ್ರಾನ್‌ ಖಾನ್‌ ಪರೋಕ್ಷವಾಗಿ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರು, ಹಾಗೇ ಇಮ್ರಾನ್ ಅವರ ಬಂಬಲಿಗರು ಸಾರ್ವಜನಿಕ ಸ್ವತ್ತಿಗೆಲ್ಲಾ ಹಾನಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿತ್ತು. ಆದರೆ ಆರೋಪದಿಂದ ಇಮ್ರಾನ್ ಈಗ ಮುಕ್ತರಾಗಿದ್ದಾರೆ.

Pakistan s Ex-Prime Minister Imran Khan Got Relief In Another 2 Case

ಪಾಕ್ ಸೇನೆ ಮೇಲೆಯೂ ಅಟ್ಯಾಕ್

ಪಾಕಿಸ್ತಾನದಲ್ಲಿ 2023ರ ಮೇ 9 ರಂದು ನಡೆದಿದ್ದ ಹಿಂಸಾಚಾರ ಜಗತ್ತಿನ ಮೂಲೆ ಮೂಲೆಯಲ್ಲಿ ಸದ್ದು ಮಾಡಿತ್ತು. ಅದರಲ್ಲೂ ಸೇನಾ ತುಕಡಿಗಳ ಮೇಲೆ ಕೂಡ ಅಟ್ಯಾಕ್ ಮಾಡಲಾಗಿದ್ದು ಇದರ ಹಿಂದೆ ಮಾಜಿ ಪ್ರಧಾನಿ ಇಮ್ರಾನ್ ಬೆಂಬಲ ಕೂಡ ಇದೆ ಎಂಬ ಆರೋಪ ಮಾಡಿತ್ತು ಪಾಕಿಸ್ತಾನದ ಸೇನೆ.

ಆದ್ರೆ ಇದೀಗ ಒಂದೊಂದೇ ಕೇಸ್‌ನಲ್ಲಿ ಮುಕ್ತಿ ಪಡೆಯುತ್ತಿದ್ದಾರೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್. ಈ ಮೂಲಕ, ಇಮ್ರಾನ್ ಖಾನ್ ಜೈಲಿನಿಂದ ರಿಲೀಸ್ ಆಗಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಇಮ್ರಾನ್‌ ಖಾನ್‌ ಈಗ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿದ್ದು, ಇತ್ತೀಚೆಗೆ ಇತರ 2 ಕೇಸ್‌ನಲ್ಲಿ ಕೂಡ ರಿಲೀಫ್ ಪಡೆದಿದ್ದರು.

Pakistan s Ex-Prime Minister Imran Khan Got Relief In Another 2 Case

ಧ್ವಂಸ ಪ್ರಕರಣಗಳಲ್ಲಿ ರಿಲೀಫ್!

ಕೆಲ ದಿನಗಳ ಹಿಂದೆ 2 ಧ್ವಂಸ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್‌ ಖಾನ್‌ ಹಾಗೂ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ ಪಾರ್ಟಿ ಲೀಡರ್ಸ್‌ಗೆ ದೊಡ್ಡ ರಿಲೀಫ್ ಸಿಕ್ಕಿತ್ತು. ಇಸ್ಲಾಮಾಬಾದ್ ಜಿಲ್ಲಾ, ಸೆಷನ್ಸ್‌ ನ್ಯಾಯಾಲಯವು ಈ ಕೇಸ್‌ನ ಬಗ್ಗೆ ಮಹತ್ವದ ತೀರ್ಪು ನೀಡಿ ಇಮ್ರಾನ್ ಖಾನ್ ಸಹಿತ ಅವರ ಪಕ್ಷದ ನಾಯಕರಿಗೆ ರಿಲೀಫ್ ನಿಡಿತ್ತು.

2022ರ ಮಾರ್ಚ್‌ನಲ್ಲಿ ರ‍್ಯಾಲಿ ನಡೆದಿತ್ತು, ಈ ವೇಳೆ ನಡೆದಿದ್ದ ಧ್ವಂಸ ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಅವರಿಗೆ ರಿಲೀಫ್ ಸಿಕ್ಕಿತ್ತು. ಕರಾಚಿ ಠಾಣೆ ಸೇರಿ ಒಟ್ಟು 2 ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ಕೇಸ್ ರಿಜಿಸ್ಟಾರ್ ಆಗಿತ್ತು. ಇದೀಗ ಮತ್ತೆ ಎರಡು ಕೇಸ್‌ನಲ್ಲಿ ಖುಲಾಸೆಯಾಗಿದ್ದು, ಇಮ್ರಾನ್ ವಿರುದ್ಧ ನೂರಾರು ಕೇಸ್‌ಗಳು ಇವೆ. ಈ ಎಲ್ಲಾ ಪ್ರಕರಣದಲ್ಲೂ ಅವರಿಗೆ ರಿಲೀಫ್ ಸಿಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+