ಶ್ರೀಲಂಕಾ ನಂತರ ಪತನದ ಅಂಚಿನಲ್ಲಿ ಪಾಕಿಸ್ತಾನದ ಆರ್ಥಿಕತೆ!

ಇಸ್ಲಮಾಬಾದ್‌,ಜುಲೈ.19: ದಶಕಗಳ ಭ್ರಷ್ಟಾಚಾರ, ದುರಾಡಳಿತ ಮತ್ತು ಅಸ್ಥಿರ ಆಡಳಿತದಿಂದಾಗಿ ಈಗಾಗಲೇ ದುರ್ಬಲ ಸ್ಥಿತಿಯಲ್ಲಿರುವ ಪಾಕಿಸ್ತಾನದ ಆರ್ಥಿಕತೆಯು ಇದೀಗ ರಷ್ಯಾ- ಉಕ್ರೇನ್ ಯುದ್ಧದಿಂದ ಆರ್ಥಿಕ ಕುಸಿತದಿಂದಾಗಿ ಪತನವಾಗುವ ಅಪಾಯದಲ್ಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ವಾಷಿಂಗ್‌ಟನ್ ಮೂಲದ ಮ್ಯಾಗಜೀನ್ ನ್ಯಾಷನಲ್ ಇಂಟರೆಸ್ಟ್‌ನ ಹಿರಿಯ ಉದ್ಯೋಗಿ ಮೈಕೆಲ್ ರೂಬಿನ್ ಅವರ ವರದಿಯ ಪ್ರಕಾರ, ಪಾಕಿಸ್ತಾನದ ಆರ್ಥಿಕತೆಯ ಕುಸಿತದ ಬಗ್ಗೆ ಎಚ್ಚರಿಸಿದ್ದಾರೆ. ರಷ್ಯಾ- ಉಕ್ರೇನ್ ಯುದ್ಧದ ಪತನವನ್ನು ಉಲ್ಲೇಖಿಸಿ ಅವರು, ಇದು ಪಾಕಿಸ್ತಾನದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಯುರೋಪ್‌ನಲ್ಲಿ ಮಾತ್ರವಲ್ಲದೆ ವಿಶಾಲವಾದ ಮಧ್ಯಪ್ರಾಚ್ಯದಲ್ಲಿಯೂ ಆರ್ಥಿಕ ಆಘಾತವನ್ನು ಉಂಟುಮಾಡಿದೆ. ದಶಕಗಳ ಭ್ರಷ್ಟಾಚಾರ, ದುರಾಡಳಿತ ಮತ್ತು ಅಸ್ಥಿರ ಆಡಳಿತದಿಂದಾಗಿ ಈಗಾಗಲೇ ದುರ್ಬಲವಾಗಿರುವ ಪಾಕಿಸ್ತಾನವು ವಿಶೇಷವಾಗಿ ಆರ್ಥಿಕತೆಯಲ್ಲೂ ದುರ್ಬಲವಾಗಿದೆ ಎಂದು ಮೈಕೆಲ್ ರೂಬಿನ್ ವರದಿ ಹೇಳಿದೆ.

ಪೂರ್ವ ಯುರೋಪ್‌ನಲ್ಲಿನ ಯುದ್ಧದ ಕಾರಣ, ಇಸ್ಲಾಮಾಬಾದ್‌ಗೆ ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿಯ ಭಾರಿ ಅಭಾವ ಸೃಷ್ಟಿಯಾಗಿದೆ. ಅನೇಕ ದೇಶಗಳು ಉಕ್ರೇನಿಯನ್ ಅಥವಾ ರಷ್ಯಾದ ಗೋಧಿ ಅಥವಾ ವಿದೇಶಿ ಇಂಧನ ಆಮದುಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಪಾಕಿಸ್ತಾನಕ್ಕೆ ಇವೆರಡರ ನೆರವು ಬೇಕಾಗಿದೆ. ಜುಲೈ 2020 ಮತ್ತು ಜನವರಿ 2021 ರ ನಡುವೆ ಇಂಡೋನೇಷ್ಯಾ ಮತ್ತು ಈಜಿಪ್ಟ್ ನಂತರ ಪಾಕಿಸ್ತಾನವು ಉಕ್ರೇನಿಯನ್ ಗೋಧಿ ರಫ್ತಿನ ಮೂರನೇ ಅತಿದೊಡ್ಡ ಗ್ರಾಹಕ ದೇಶವಾಗಿದೆ.

 ವ್ಯಾಪಾರ ಕೊರತೆ 50 ಶತಕೋಟಿ ಡಾಲರ್‌

ವ್ಯಾಪಾರ ಕೊರತೆ 50 ಶತಕೋಟಿ ಡಾಲರ್‌

ಪಾಕಿಸ್ತಾನವು ಪ್ರಸ್ತುತ ಭಾರಿ ಹಣದುಬ್ಬರದಿಂದ ಬಳಲಿದೆ. ಅದರ ವ್ಯಾಪಾರ ಕೊರತೆಯು ದೇಶದ ಶೋಚನೀಯ ಸ್ಥಿತಿಯನ್ನು ಪ್ರತಿಬಿಂಬಿಸಿದೆ. ಜೂನ್ ವೇಳೆಗೆ ಪಾಕಿಸ್ತಾನದ ವ್ಯಾಪಾರ ಕೊರತೆ 50 ಶತಕೋಟಿ ಡಾಲರ್‌. ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇಕಡಾ 57ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ. ಇದು ಸಾಮಾನ್ಯವಾಗಿ ನೋಡಬೇಕಾದ ಪರಿಸ್ಥಿತಿ ಅಲ್ಲ. ಪಾಕಿಸ್ತಾನದ ಆರ್ಥಿಕತೆಯ ಕುಸಿತವು ಅಫ್ಘಾನಿಸ್ತಾನದ ಮೇಲೂ ಪರಿಣಾಮಗಳನ್ನು ಬೀರುತ್ತದೆ. ಅಫ್ಘಾನಿಸ್ತಾನದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಪಾಕಿಸ್ತಾನದ ಆರ್ಥಿಕತೆಯ ಕುಸಿತದಿಂದ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.

 ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟು ಎದುರಿಸಲಿದೆ

ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟು ಎದುರಿಸಲಿದೆ

ಅಫ್ಘಾನಿಸ್ತಾನದಲ್ಲಿ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಅಗ್ಗವಾಗಿದ್ದರೆ, ಅದನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಆದರೆ ಇದುವರೆಗೆ ಈ ವಿಷಯದಲ್ಲಿ ಯಾವುದೇ ಭದ್ರತೆ ಮಾಡಲಾಗಿಲ್ಲ. ಈ ವಿಷಯದಲ್ಲಿ ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅಫ್ಘಾನಿಸ್ತಾನದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಸದಸ್ಯ ಖಂಜಾನ್ ಅಲಿಕೋಜೈ ಹೇಳಿದ್ದಾರೆ.

 ಅಫ್ಘಾನಿಸ್ತಾನಕ್ಕೂ ಭೀಕರ ಪರಿಣಾಮ

ಅಫ್ಘಾನಿಸ್ತಾನಕ್ಕೂ ಭೀಕರ ಪರಿಣಾಮ

2020 ಮತ್ತು 2021ರ ನಡುವೆ ತೈಲ ಬೆಲೆಯಲ್ಲಿನ ಬೆಲೆ ಏರಿಕೆಯು ಪಾಕಿಸ್ತಾನದ ಆಮದುಗಳ ವೆಚ್ಚವನ್ನು ಶೇಕಡಾ 85ಕ್ಕಿಂತ ಹೆಚ್ಚು ಅಂದರೆ ಸುಮಾರು 5 ಶತಕೋಟಿ ಡಾಲರ್‌ಗೆ ಹೆಚ್ಚಿಸುತ್ತಿದೆ. ಪಾಕಿಸ್ತಾನದ ಆರ್ಥಿಕ ವ್ಯವಸ್ಥೆಯ ಕುಸಿತವು ಅಫ್ಘಾನಿಸ್ತಾನಕ್ಕೂ ಭೀಕರ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ರಫ್ತು ಮತ್ತು ಆಮದುಗಳ ಪ್ರಾದೇಶಿಕ ಯೋಜನೆಗಳಾದ ಸಿಎಎಸ್‌ಎ 1000, ಟಿಎಪಿಐ ಯೋಜನೆ ಮತ್ತು ವ್ಯಾಪಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅರ್ಥಶಾಸ್ತ್ರಜ್ಞ ಶಾಕಿರ್ ಯಾಕೂಬಿ ಹೇಳಿದ್ದಾರೆ.

 ಪ್ರತಿ ದಿನವೂ ಹೊಸ ಕನಿಷ್ಠ ಮಟ್ಟಕ್ಕೆ ಇಳಿಕೆ

ಪ್ರತಿ ದಿನವೂ ಹೊಸ ಕನಿಷ್ಠ ಮಟ್ಟಕ್ಕೆ ಇಳಿಕೆ

ಪಾಕಿಸ್ತಾನಿ ರೂಪಾಯಿಯು ಯುಎಸ್ ಡಾಲರ್‌ಗೆ ಹೋಲಿಸಿದರೆ ಮೌಲ್ಯದ ಕುಸಿತವನ್ನು ಮುಂದುವರೆಸಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 30ಕ್ಕಿಂತ ಹೆಚ್ಚು.

ಪ್ರತಿ ದಿನವೂ ಹೊಸ ಕನಿಷ್ಠ ಮಟ್ಟಕ್ಕೆ ಇಳಿಯುತ್ತಿರುವ ಪಾಕಿಸ್ತಾನದ ರೂಪಾಯಿಯ ಮೇಲೆ ಇದು ಬೀಕರ ಪರಿಣಾಮ ಬೀರಿದೆ ಎಂದು ವರದಿ ಉಲ್ಲೇಖಿಸಿದೆ. ವಿದೇಶಿ ವಿನಿಮಯ ದರವು ಪಿಆರ್‌ಕೆ 212ಕ್ಕೆ ಇಳಿಯುವುದರೊಂದಿಗೆ ಯುಎಸ್ ಡಾಲರ್ ವಿರುದ್ಧ ಪಾಕಿಸ್ತಾನದ ರೂಪಾಯಿ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+