ಪಾಪಿ ಪಾಕಿಸ್ತಾನದಲ್ಲಿ ‘ಮಿಶ್ರತಳಿ’ ಸರ್ಕಾರ? ಹಿಂಸಾಚಾರಕ್ಕೆ ವೇದಿಕೆ ಸಿದ್ಧ?
ಪಾಕಿಸ್ತಾನ ಅಂದ್ರೆ ಜಗತ್ತಿಗೆ ಒಂದು ಇರಿಟೇಷನ್. ಅಲ್ಲಿನ ಉಗ್ರರಿಂದ, ಜಗತ್ತು ತುಂಬಾ ಸಮಸ್ಯೆ ಅನುಭವಿಸಿದೆ ಅದ್ರಲ್ಲೂ ಅಲ್ಲಿನ ರಾಜಕಾರಣಿಗಳು ಒಬ್ಬರಿಗಿಂತ ಮತ್ತೊಬ್ಬರು ಮಹಾನ್ ಕಡು ಭ್ರಷ್ಟರು. ಪಾಕಿಸ್ತಾನ ತನ್ನ ಹೆಸರಿನ ಜತೆ 'ಪಾಪಿ' ಎಂಬ ಟೈಟಲ್ ಕೂಡ, ಗಿಫ್ಟ್ ಆಗಿ ಪಡೆದಿದೆ. ಹೀಗಿದ್ದಾಗಲೇ ಪಾಕಿಸ್ತಾನದಲ್ಲಿ ಚುನಾವಣೆ ಕೂಡ ನಡೆದಿದ್ದು ಸಮ್ಮಿಶ್ರ ಸರ್ಕಾರ ರಚನೆಗೆ ಅಲ್ಲಿನ ಭ್ರಷ್ಟ ರಾಜಕಾರಣಿಗಳು ಕಸರತ್ತು ಜೋರು ಮಾಡಿದ್ದಾರೆ.
ಹೌದು, ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ಚುನಾವಣೆ ನಡೆದಿತ್ತು. ಪಾಕಿಸ್ತಾನದ ಸಂಸತ್ ಚುನಾವಣೆಗೆ ಕೋಟಿ ಕೋಟಿ ಪಾಕಿಸ್ತಾನಿ ಪ್ರಜೆಗಳು ಮತ ಹಾಕಿದ್ದರು. ಈಗಾಗಲೇ, ರಿಸಲ್ಟ್ ಬಂದು ಹಲವು ದಿನಗಳೇ ಕಳೆದು ಹೋಗಿದೆ. ಆದರೂ ಇನ್ನೂ ಅಲ್ಲಿ ಹೊಸ ಸರ್ಕಾರವನ್ನೇ ರಚನೆ ಮಾಡಿಲ್ಲ.

ಹೀಗಾಗಿ ಪಾಕಿಸ್ತಾನದ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದ್ದು, ಪಾಕಿಸ್ತಾನಿ ಪ್ರಜೆಗಳು ಕೂಡ ಭಯದಲ್ಲೇ ದಿನ ದೂಡುತ್ತಿದ್ದಾರೆ. ಹೀಗಿದ್ದಾಗಲೇ ಪಾಕಿಸ್ತಾನಿ ನೆಲದ ರಾಜಕಾರಣಿಗಳು ಅಧಿಕಾರ ಪಡೆಯಲು ಕಿತ್ತಾಟ ಮಾಡುತ್ತಿದ್ದು, ಇದೀಗ ಸಮ್ಮಿಶ್ರದ ಮೊರೆ ಹೋಗಿದ್ದಾರೆ.
ಸಮ್ಮಿಶ್ರ ಸರ್ಕಾರ ರಚಿಸುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಂತರ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖಂಡರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪಿಎಂಎಲ್-ಎನ್ ಅಧ್ಯಕ್ಷ ಶೆಹಬಾಜ್ ಷರೀಫ್‌ಗೆ ಈಗ ಪ್ರಧಾನಿ ಪಟ್ಟ ಕೊಟ್ಟರೆ, ಪಿಪಿಪಿ ಆಸಿಫ್ ಜರ್ದಾರಿಗೆ ಪಾಕಿಸ್ತಾನದ ರಾಷ್ಟ್ರಪತಿ ಸ್ಥಾನ ಸಿಗಲಿದೆ ಎನ್ನಲಾಗಿದೆ.
ಈಗ ಪಿಎಂಎಲ್-ಎನ್ 75 ಸ್ಥಾನ ಗೆದ್ದರೆ, ಪಿಪಿಪಿ 54 ಸ್ಥಾನ ಪಡೆದಿದೆ. ಈ ನಡುವೆ 17 ಸ್ಥಾನ ಗೆದ್ದ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ ಪಕ್ಷ ಕೂಡ, ಹೊಸ ಮೈತ್ರಿಗೆ ಬೆಂಬಲ ಸೂಚಿಸಿದೆ. ಆದರೂ ಇಮ್ರಾನ್ ಖಾನ್ ಅವರ ಬೆಂಬಲಿತ 'ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್' ಸ್ವತಂತ್ರ ಅಭ್ಯರ್ಥಿಗಳು 93 ಸ್ಥಾನ ಗೆದ್ದಿದ್ದರೂ ಪ್ರಯೋಜನ ಇಲ್ಲವಾಗಿದೆ. ಇದು ಪಾಕಿಸ್ತಾನದಲ್ಲಿ ಆಂತರಿಕ ಶಾಂತಿಗೆ ಭಂಗ ತರುವಆ ಆತಂಕ ಎದುರಾಗಿದೆ.

ಟ್ವಿಟ್ಟರ್ ಬ್ಯಾನ್ ಮಾಡಿದ ಪಾಕಿಸ್ತಾನ
ಇಷ್ಟೆಲ್ಲದರ ನಡುವೆ ಪಾಕಿಸ್ತಾನದ ಪರಿಸ್ಥಿತಿ ನಿಭಾಯಿಸುವುದು ಅಲ್ಲಿನ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿದೆ. ಪಾಕಿಸ್ತಾನದಲ್ಲಿ ಈಗ ಸಾಮಾಜಿಕ ಜಾಲತಾಣ ವೇದಿಕೆ 'ಎಕ್ಸ್' ಅಂದ್ರೆ ಈ ಹಿಂದಿನ ಟ್ವಿಟ್ಟರ್ ಅನ್ನ ಬ್ಯಾನ್ ಮಾಡಲಾಗಿದೆ. ಹೀಗೆ ಬ್ಯಾನ್ ಮಾಡಿದ ನಂತರವೂ ಪರಿಸ್ಥಿತಿ ಹಿಡಿತಕ್ಕೆ ಬಂದಿಲ್ಲ. ಹೀಗಾಗಿ ಆರನೇ ದಿನವಾದ ಗುರುವಾರವೂ ಸಹ ಬಳಕೆದಾರರಿಗೆ ಪಾಕಿಸ್ತಾನದಲ್ಲಿ ಟ್ವಿಟ್ಟರ್ ಬಳಕೆ ಸಾಧ್ಯವಾಗುತ್ತಿಲ್ಲ.
ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ನಡೆದಿರುವ, ರಾಜಕೀಯ ಬೆಳವಣಿಗೆ ಈ ರೀತಿ ಟ್ವಿಟ್ಟರ್ ಬ್ಯಾನ್‌ಗೆ ಕಾರಣವಾಗಿತ್ತು ಎನ್ನಲಾಗುತ್ತಿದೆ. ಅದ್ರಲ್ಲೂ ಹಲವು ಕೇಸ್‌ಗಳಲ್ಲಿ ಜೈಲು ಸೇರಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದರು. ಆ ನಂತರ ಹಲವು ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿತ್ತು.












Click it and Unblock the Notifications