'ಅಣು ಬಾಂಬ್ ಹಾಕಿ ಭಾರತದ ಸರ್ವನಾಶ': ಪಾಕಿಸ್ತಾನ

Posted By:
Subscribe to Oneindia Kannada

ಇಸ್ಲಾಮಾಬಾದ್, ಸೆ. 30: ಗಡಿ ನಿಯಂತ್ರಣ ರೇಖೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದ ಉಗ್ರರ ಕ್ಯಾಂಪಿನ ಮೇಲಿನ ದಾಳಿಯ ಬಗ್ಗೆ ಪಾಕಿಸ್ತಾನ ಉಗ್ರವಾಗಿ ಪ್ರತಿಕ್ರಿಯಿಸಿದೆ. ಭಾರತವನ್ನು ಅಣು ಬಾಂಬ್ ಹಾಕಿ ಸರ್ವನಾಶ ಮಾಡಲಾಗುವುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಗುಡುಗಿದ್ದಾರೆ.

ಹಿಮಾಲಯದ ಪರ್ವತ ಶ್ರೇಣಿಯಲ್ಲಿರುವ ಈ ವಿವಾದಿತ ಗಡಿ ಪ್ರದೇಶವನ್ನು ಭಾರತದ ಸೈನಿಕರು ದಾಟಿದ್ದಾರೆ. ಈ ಮೂಲಕ 2003ರ ಗಡಿಯಾಚೆಗಿನ ಕದನ ವಿರಾಮ ಒಪ್ಪಂದವನ್ನು ಭಾರತ ಮುರಿದಿದೆ ಎಂದು ಪಾಕ್ ರಕ್ಷಣಾ ಸಚಿವರು 'ದಿ ಸನ್' ಪತ್ರಿಕೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. [ಒಂದು ಏಟಿಗೆ ಎರಡು ಏಟು : ಅಜಿತನ ತಿರುಗೇಟು]

Pakistan threatens to DESTROY India with nuclear bomb After Surgical Strike

ನಾವು ಯುದ್ಧವನ್ನು ಬಯಸುತ್ತಿಲ್ಲ. ಅದರೆ, ನಮ್ಮ ದೇಶದ ರಕ್ಷಣೆಗಾಗಿ ಪ್ರತ್ಯುತ್ತರ ನೀಡಲು ಸಿದ್ಧ. ಭಾರತ ಇದೇ ರೀತಿ ನಿಯಮ ಉಲ್ಲಂಘಿಸಿ ದಾಳಿ ನಡೆಸಿದರೆ ನಾವು ಭಾರತವನ್ನು ನಾಶ ಪಡಿಸುತ್ತೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಜಾ ಆಸಿಫ್ ಹೇಳಿದ್ದಾರೆ.

ನಾವು ಇನ್ನೂ ನಮ್ಮ ಬಳಿ ಇರುವ ಅಣ್ವಸ್ತ್ರವನ್ನು ಪ್ರದರ್ಶನ ಮಾಡಿಲ್ಲ. ಪರಿಸ್ಥಿತಿ ಕೈಮೀರಿದರೆ ಅಣ್ವಸ್ತ್ರ ಪ್ರಯೋಗಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಸಿಫ್ ಹೇಳಿದರು.
ಈ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ಯುಎಸ್ ಹಾಗೂ ಚೀನಾ, ಭಾರತ ಹಾಗೂ ಪಾಕಿಸ್ತಾನ ನಡುವೆ ಶಾಂತಿ ಮಾತುಕತೆ ನಡೆಯಲಿ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan's Defence Minister has threatened to 'destroy' India – after India said on Thursday it had carried out 'surgical strikes' on suspected militants preparing to infiltrate from Pakistan-ruled Kashmir reports The Sun.
Please Wait while comments are loading...