ಪಾಕಿಸ್ತಾನದಲ್ಲಿ ಹಬ್ಬುತ್ತಿದೆ ನಿಗೂಢ ಕಾಯಿಲೆ! ಮೆದುಳು ತಿನ್ನುವ ‘ಹುಳು’ಗಳ ಭೀಕರ ದಾಳಿ..!
ಪಾಕಿಸ್ತಾನ ನಾಯಕರಿಗೆ ಯುದ್ಧ, ಶತ್ರುತ್ವ, ಉಗ್ರರ ಪೋಷಣೆ ಬಿಟ್ಟು ಬೇರೆ ಯಾವುದೂ ನೆನಪಿಗೆ ಬರೋದಿಲ್ಲ. ಹೀಗಾಗಿ ಇವತ್ತಿಗೂ ಪಾಕಿಸ್ತಾನದಲ್ಲಿ ಮೂಲಸೌಕರ್ಯ ಕ್ಷೇತ್ರ ಭಾರಿ ಹಿಂದುಳಿದಿದೆ. ಜನ ಕುಡಿಯುವ ನೀರು ಗಿಟ್ಟಿಸಿಕೊಳ್ಳಲು ಪರದಾಡುತ್ತಾರೆ. ಈ ಮಧ್ಯೆ ಪಾಕ್‌ನಲ್ಲಿ ಸಾಂಕ್ರಾಮಿಕ ರೋಗಗಳು ಕಾಡಲು ಶುರುಮಾಡಿವೆ. ಪಾಕಿಸ್ತಾನದಲ್ಲಿ 'ನಾಗ್ಲೆರಿಯಾ ಫೌಲೆರಿ' ಅಥವಾ ಮೆದುಳು ತಿನ್ನುವ ಅಮೀಬಾ ಕಾಟ ಜೋರಾಗಿದೆ.
ದಿನದಿಂದ ದಿನಕ್ಕೆ ಮೆದುಳು ತಿನ್ನುವ ಅಮೀಬಾ ಪಾಕಿಸ್ತಾನದ ಹಲವು ಪ್ರದೇಶಗಳಿಗೆ ಹಬ್ಬುತ್ತಿದೆ. ಇದೀಗ 'ನಾಗ್ಲೆರಿಯಾ ಫೌಲೆರಿ' ಎಂಬ ಭಯಾನಕ ಕಾಯಿಲೆಗೆ ಪಾಕಿಸ್ತಾನದ ಸರ್ಜನ್ ಒಬ್ಬರು ಬಲಿಯಾಗಿದ್ದಾರೆ. ಇವರ ಜೊತೆಗೆ ಓರ್ವ ಬಾಲಕ ಕೂಡ ಮೃತಪಟ್ಟಿದ್ದು, ಪಾಕ್ ಪರಿಸ್ಥಿತಿಯ ಗಂಭೀರತೆ ತಿಳಿಸುತ್ತಿದೆ.
'ನಾಗ್ಲೆರಿಯಾ ಫೌಲೆರಿ' (Naegleria fowleri) ಎಂದು ಕರೆಯಲಾಗುವ, ಅಮೀಬಾ ವಂಶಕ್ಕೆ ಸೇರಿದ ಈ ಸೂಕ್ಷ್ಮಾಣು ಜೀವಿಗಳಿಗೆ ಮನುಷ್ಯರ ಮೆದುಳು ತಿನ್ನುವುದೇ ಕೆಲಸ. ಇವು ಏಕಕೋಶ ಜೀವಿಗಳಾಗಿದ್ದು, ಮನುಷ್ಯನ ಮೂಗಿನ ಮೂಲಕ ಪ್ರವೇಶ ಮಾಡಿ ಮೆದುಳನ್ನು ತಿಂದು ಮನುಷ್ಯನ ಸಾವಿಗೆ ಕಾರಣವಾಗುತ್ತವೆ.

ಮೆದುಳು ಸೇರಿದರೆ ಒಂದೇ ವಾರದಲ್ಲಿ ಸಾವು
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಎಂದರೆ, ಈ ಸೋಂಕಿಗೆ ಸರಿಯಾದ ಔಷಧಗಳೇ ಲಭ್ಯವಿಲ್ಲ. ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಮನುಷ್ಯನ ಮೆದುಳು ಸೇರಿದಂತೆ, ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ. ಕೇವಲ ಒಂದು ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತದೆ. ಆದರೆ ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿಗಳು. ಹೀಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಮನುಷ್ಯರ ಮೆದುಳು ತಿನ್ನುವ ಹುಳು ದಾಳಿ ಮಾಡುತ್ತಿದೆ ಹುಷಾರ್..!

ಜ್ವರ, ವಾಂತಿ, ತಲೆನೋವು ಕಾಡುವುದು
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿದರೆ ಮೆಲ್ಲಗೆ ತನ್ನ ಕಾರ್ಯ ಚಟುವಟಿಕೆ ಆರಂಭಿಸುತ್ತದೆ. ಹೀಗೆ ಸೂಕ್ಷ್ಮಾಣು ಜೀವಿ ತನ್ನ ಕೆಲಸ ಆರಂಭಿಸಿದ ಒಂದೆರಡು ದಿನಗಳಲ್ಲಿ ತೀವ್ರ ಜ್ವರ ಹಾಗೂ ತಲೆನೋವು ಕಾಡಲು ಆರಂಭವಾಗುತ್ತದೆ. ಹೀಗೆ ಆರಂಭವಾಗುವ ಸೋಂಕಿನ ಲಕ್ಷಣ, ಭಾರಿ ಪ್ರಮಾಣದಲ್ಲಿ ವಾಂತಿಯಾಗುವಂತೆ ಮಾಡುತ್ತದೆ. ಮನುಷ್ಯನ ರೋಗನಿರೋಧಕ ಶಕ್ತಿಯು ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿ, ಕಡೆಗೆ 1 ವಾರದ ಒಳಗಾಗಿ ಸೋಂಕಿತ ವ್ಯಕ್ತಿ ಮೃತಪಡುತ್ತಾನೆ. ಅಷ್ಟರೊಳಗೆ ಅಮಿಬಾ ವಂಶಕ್ಕೆ ಸೇರಿದ ಈ 'ನಾಗ್ಲೆರಿಯಾ ಫೌಲೆರಿ' ಸೂಕ್ಷ್ಮಾಣು ಜೀವಿ ಮೆದುಳನ್ನು ತಿಂದು ಮುಗಿಸಿರುತ್ತದೆ.

ಮೂಗಿನ ಒಳಗೆ ನೀರು ಸೇರಿಸಬೇಡಿ..!
ಈ ಸೂಕ್ಷ್ಮಾಣು ಜೀವಿ ಲೇಕ್ ಜಾನ್ಸನ್ ನಗರದಲ್ಲಿ ಕಂಡುಬಂದ ತಕ್ಷಣ ಅಧಿಕಾರಿಗಳು ಜನರಿಗೆ ನೀಡಿದ ಮೊದಲ ಎಚ್ಚರಿಕೆ, ಮೂಗಿನ ಒಳಗೆ ನೀರು ಸೇರಿಸಬೇಡಿ ಅಂತಾ. ಏಕೆಂದರೆ ಮೂಗಿನಲ್ಲಿ ನೀರು ಹೋದರೆ ಇಂತಹ ಮೈಕ್ರೋಬ್‌ಗಳು ಮೆದುಳು ಸೇರುವುದು ತುಂಬಾ ಸುಲಭ. ಹೀಗೆ ಮೆದುಳು ಸೇರುವ ಸೂಕ್ಷ್ಮಾಣು ಜೀವಿ ನಾಗ್ಲೆರಿಯಾ ಫೌಲೆರಿ ತಕ್ಷಣ ಮೆದುಳನ್ನ ತಿನ್ನಲು ಶುರುಮಾಡುತ್ತದೆ. ಕಡೆಗೆ ಸೋಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೆ ಆತ ನರಳಿ ಪ್ರಾಣಬಿಡುತ್ತಾನೆ. ಹೀಗಾಗಿ ಮೂಗಿನ ಒಳಗೆ ನೀರು ಸೇರಿಸಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.

ಅಮೆರಿಕದಲ್ಲಿ ಕಳೆದ ವರ್ಷ ಪತ್ತೆ
ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಕಳೆದ ವರ್ಷವೇ ಅಮೆರಿಕದಲ್ಲಿ ಪತ್ತೆಯಾಗಿ, ಹಲವರನ್ನ ಬಲಿಪಡೆದು ತಣ್ಣಗಾಗಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ಪಾಕಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನಲಾಗಿದೆ. ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಬಗ್ಗೆ ಭಯ ಬೇಕಿಲ್ಲ. ಆದರೂ ಇದರ ಬಗ್ಗೆ ಭಾರಿ ಮುನ್ನೆಚ್ಚರಿಕೆ ವಹಿಸಬೇಕು. ಇದು ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಅಂಟಿಕೊಳ್ಳುವ ಸೋಂಕು ಅಲ್ಲ. ಆದರೆ ನೀರಿನ ಮೂಲಕ ತುಂಬಾ ವೇಗವಾಗಿ ಇಡೀ ಮನುಕುಲದ ಮೆದುಳಿನ ಮೇಲೆ ದಾಳಿ ಮಾಡಿ, ಜೀವ ತೆಗೆಯುತ್ತದೆ. ಹೀಗಾಗಿ ನೀರು ಬಳಸುವ ಮುನ್ನ ಚೆನ್ನಾಗಿ ಕುದಿಸುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications