ಅಮೆರಿಕಾಗಿಂತ ಭಾರತ ಉತ್ತಮ: ಉಗ್ರನ ಬಾಯಿಂದ ಎಂತಾ ಮಾತು?

Posted By:
Subscribe to Oneindia Kannada

ಲಾಹೋರ್, ಅ 14: ಭಾರತದ ವಿರುದ್ದ ಸದಾ ವಿಷ ಕಕ್ಕುವ, ದ್ವೇಷ ಭಾಷಣ ಮಾಡುವ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ಮುಖ್ಯಸ್ಥ, ಅಮೆರಿಕಾಗಿಂತ ಭಾರತ ಉತ್ತಮ ಎನ್ನುವ ಹೇಳಿಕೆಯನ್ನು ನೀಡಿದ್ದಾನೆ.

ಜಮಾತ-ಉಲ್-ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಪಾಕಿಸ್ತಾನ ಇನ್ನು ಮುಂದೆ ಭಾರತದೊಂದಿಗಿನ ಸಂಬಂಧವನ್ನು ವೃದ್ದಿಸಿಕೊಳ್ಳಬೇಕೇ ವಿನಃ ಅಮೆರಿಕಾದ ಜೊತೆಗಲ್ಲ ಎನ್ನುವ ಆಶ್ಚರ್ಯಕರ ಹೇಳಿಕೆ ನೀಡಿದ್ದಾನೆ. (ಆತ್ಮಾಹುತಿ ದಾಳಿಗೆ ಉಗ್ರ ಅಜರ್ ಕರೆ)

Pakistan should build ties with India not USA: Terror mastermind Hafiz Saeed

ಪಾಕಿಸ್ತಾನದ ನವಾಜ್ ಶರೀಫ್ ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿರುವ ಹಫೀಜ್, ಪಾರ್ಲಿಮೆಂಟಿನಲ್ಲಿ ಕೂತವರಿಗೆ ಕಾಶ್ಮೀರದ ಸಮಸ್ಯೆ ಎಲ್ಲಿಂದ ಅರ್ಥವಾಗಬೇಕೆಂದು ಟೀಕಿಸಿದ್ದಾನೆ.

ಭಾರತ ನಡೆಸಿದ ಸರ್ಜಿಕಲ್ ದಾಳಿಯ ನಂತರ ಪಾಕಿಸ್ತಾನದ ಉಗ್ರ ಸಂಘಟನೆಗಳಲ್ಲಿ ಭಿನ್ನಮತ ಮೂಡಿದ್ದು, ಜೈಸ್-ಇ-ಮೊಹಮ್ಮದ್ ಸಂಘಟನೆ ಭಾರತದ ವಿರುದ್ದ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಬೇಕೆಂದು ಹೇಳಿದೆ.

ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜೆಯುಡಿ, ಪಾಕಿಸ್ತಾನ ಸರಕಾರ ಅಮೆರಿಕದ ನೆರವಿಗಾಗಿ ಎದುರು ನೋಡುವುದನ್ನು ಬಿಡಬೇಕೆಂದು ಹೇಳಿದೆ.

ಪಾಕಿಸ್ತಾನ, ಭಾರತದೊಂದಿಗೆ ಸಂಬಂಧ ಅಭಿವೃದ್ದಿಗೊಳ್ಳಬೇಕೆಂದು ಬಯಸಿದರೂ ಅಮೆರಿಕಾ ಅದಕ್ಕೆ ಅಡ್ಡವಾಗಿ ನಿಲ್ಲುತ್ತದೆ ಎಂದಿರುವ ಹಫೀಜ್, ಪಾಕಿಸ್ತಾನಕ್ಕೆ ಭಾರತಕ್ಕಿಂತ ಅಮೆರಿಕ ಅಪಾಯಕಾರಿ ಶತ್ರು ಎಂದು ಅಭಿಪ್ರಾಯ ಪಟ್ಟಿದ್ದಾನೆಂದು ಇಂಡಿಯಾ ಟುಡೇ ವರದಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Terror mastermind and Chief of JuD Hafiz Saeed, called upon Pakistan to shift its focus from India to USA to build relationship, according to a report in India Today.
Please Wait while comments are loading...