ಪಾಕಿಸ್ತಾನದಲ್ಲಿ ಸರಣಿ ಸ್ಫೋಟ, ಹತ್ತಾರು ಅಮಾಯಕರು ಬಲಿ
ಪೇಶಾವರ್, ಫೆ.13: ಪೇಶಾವರದ ಸೇನಾ ಶಾಲೆಯ ಮೇಲೆ ನಡೆದ ಘೋರ ಪಾಶವೀ ಕೃತ್ಯದ ನಂತರ ಶುಕ್ರವಾರ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಸುಮಾರು 19 ಜನ ಸಾವನ್ನಪ್ಪಿದ್ದು, 60 ಜನ ಗಾಯಗೊಂಡಿರುವ ಮಾಹಿತಿ ಸಿಕ್ಕಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಕಂಡು ಬಂದಿದೆ.
ಮಸೀದಿಯಲ್ಲಿ ಅಲ್ಲಾಹ್ ಎಂದು ಪ್ರಾರ್ಥಿಸುವ ವೇಳೆಗೆ ಬಾಂಬ್ ಸ್ಫೋಟದ ಸದ್ದು ಕೇಳಿ ಬಂದಿದೆ. ಸುಮಾರು ಏಳು ಜನ ಉಗ್ರಗಾಮಿ ಗ್ರೆನೇಡ್ ಗಳನ್ನು ಬಳಸಿ ಇಮಾಮಿಯಾ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ. ಸರಿ ಸುಮಾರು ಆರೇಳು ಸರಣಿ ಸ್ಪೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮಸೀದಿಯ ಗೋಡೆಗಳು ಕುಸಿದಿವೆ.

ಬಾಂಬ್ ದಾಳಿಯ ಜೊತೆಗೆ ಓರ್ವ ಉಗ್ರಗಾಮಿ ಆತ್ಮಾಹುಳಿ ದಳದ ಸದಸ್ಯ ಎಂದು ಹೇಳಿಕೊಂಡು ಸೂಸೈಡ್ ಬಾಂಬರ್ ಆಗಿ ಮಸೀದಿಯೊಳಗೆ ನುಗ್ಗಿದ ಘಟನೆಯೂ ವರದಿಯಾಗಿದೆ.
ಸಾವಿನ ಸಂಖ್ಯೆ ಏರಿಕೆ: ಬಾಂಬ್ ಸ್ಫೋಟದ ಸಂದರ್ಭದಲ್ಲಿ ಎಲ್ಲರೂ ಪಾಕಿಸ್ತಾನದ ಹಯಾತಾಬಾದ್ ಪ್ರದೇಶದ ಮಸೀದಿಯಲ್ಲಿ ಅಲ್ಲಾಹ್ ನನ್ನು ಪ್ರಾರ್ಥಿಸುತ್ತಿದ್ದರು. ಸುಮಾರು 1000ಕ್ಕೂ ಅಧಿಕ ಮಂದಿ ಇದ್ದರು ಎನ್ನಲಾಗಿದೆ. ಜೀವ ರಕ್ಷಣೆಗಾಗಿ ಮಸೀದಿಯಿಂದ ಹೊರಗಡೆ ಓಡಿ ಬರಲು ಯತ್ನಿಸುತ್ತಿರುವರುವವರ ದೃಶ್ಯ ಮನಕಲುಕುವಂತಿತ್ತು.












Click it and Unblock the Notifications