ಕೊವಿಡ್ 19: ಪಾಕಿಸ್ತಾನದಲ್ಲಿ ಶಾಲೆ, ಕಾಲೇಜುಗಳು ಪುನರಾರಂಭ

ಇಸ್ಲಾಮಾಬಾದ್, ಸೆಪ್ಟೆಂಬರ್ 15: ಸತತ ಐದು ತಿಂಗಳುಗಳ ಬಳಿಕ ಪಾಕಿಸ್ತಾನದಲ್ಲಿ ಶಾಲಾ, ಕಾಲೇಜುಗಳು ಪುನರಾರಂಭಗೊಂಡಿವೆ.

ಕೊರೊನಾ ಸೋಂಕಿನಿಂದ ಇಡೀ ಜಗತ್ತೇ ಕಂಗಾಲಾಗಿತ್ತು, ಪಾಕಿಸ್ತಾನದಲ್ಲಿ ಕೂಡ ಶಾಲಾ, ಕಾಲೇಜುಗಳನ್ನು ಮುಚ್ಚಲಾಗಿತ್ತು.ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳನ್ನು ತೆರೆಯಲಾಗಿದೆ.

ಸೆಪ್ಟೆಂಬರ್ 15 ರಿಂದ ಹೈಸ್ಕೂಲ್, ವಿಶ್ವವಿದ್ಯಾಲಯಗಳು ಆರಣಭಗೊಂಡಿದೆ. ಸೆಪ್ಟೆಂಬರ್ 23ರಿಂದ 5-7ನೇ ತರಗತಿ ಆರಂಭಗೊಳ್ಳಲಿದೆ. ಪ್ರಾಥಮಿಕ ಶಾಲೆಗಳು ಸೆಪ್ಟೆಂಬರ್ 30ರಿಂದ ತೆರೆಯಲಿವೆ.

Pakistan Reopens Schools, Universities

ಒಂದುತರಗತಿಯಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕುಳಿತುಕೊಳ್ಳುವಂತಿಲ್ಲ, ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಒಂದೊಂದು ದಿನ ಒಂದೊಂದು ಗುಂಪು ಶಾಲೆಗೆ ಬರಲಿದೆ.

ಮಾರ್ಚ್ 16 ರಿಂದ ಪಾಕಿಸ್ತಾನದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿತ್ತು. ಎಲ್ಲಾ ವಾರ್ಷಿಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿತ್ತು.ಪಾಕಿಸ್ತಾನದಲ್ಲಿ 302,424 ಪ್ರಕರಣಗಳಿವೆ, ಕಳೆದ 24 ಗಂಟೆಯಲ್ಲಿ 404 ಹೊಸ ಪ್ರಕರಣಗಳು ಪತ್ತೆಯಾಗಿವೆ. 6389 ಮಂದಿ ಸಾವನ್ನಪ್ಪಿದ್ದಾರೆ.

290,261 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 563 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.ಸಿಂಧ್ ನಲ್ಲಿ 132,250 ಪ್ರಕರಣಗಳಿವೆ.

ಪಂಜಾಬ್‌ನಲ್ಲಿ 97,817 ಪ್ರಕರಣಗಳಿವೆ, ಇಸ್ಲಾಮಾಬಾದ್‌ನಲ್ಲಿ 15,962 ಪ್ರಕರಣಗಳಿವೆ. ಬಲೂಚಿಸ್ತಾನದಲ್ಲಿ 13,621 ಪ್ರಕರಣಗಳಿವೆ. ದೇಶದಲ್ಲಿ ಒಟ್ಟು 29,95,890 ಪರೀಕ್ಷೆಯನ್ನು ಮಾಡಿಸಲಾಗಿದೆ. ಒಂದೇ ದಿನ 27,277 ಮಂದಿಯನ್ನು ಪರೀಕ್ಷಿಸಲಾಗಿದೆ.

Recommended Video

      ಸಂಜನಾ, ರಾಗಿಣಿ ಆಯ್ತು ಈಗ ದಿಗಂತ್, ಐಂದ್ರಿತಾ ಸರದಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+