Islamabad: ಪಾಕಿಸ್ತಾನ ಪ್ರಧಾನಿ ಹುಚ್ಚಾಟ, ಇಸ್ಲಾಮಾಬಾದ್ ಘಟನೆಗೆ ಭಾರತವೇ ಕಾರಣವಂತೆ!
ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಯುದ್ಧದ ವಾತಾವರಣ ಇದೀಗ ನಿರ್ಮಾಣ ಆಗುತ್ತಿದೆ. ಒಂದು ಕಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ ನಂತರ ಪಾಕಿಸ್ತಾನ ಹೊಸ ನಾಟಕ ಶುರು ಮಾಡಿದಂತೆ ಕಾಣುತ್ತಿದೆ. ಪ್ರತಿಬಾರಿ ಕೂಡ ಉಗ್ರರನ್ನು ತಲೆಯ ಮೇಲೆಯೇ ಹೊತ್ತುಕೊಂಡು ಮೆರೆಸುವ ಡಬಲ್ ಗೇಮ್ ಪಾಕಿಸ್ತಾನ ಇದೀಗ ತನ್ನದೇ ನೆಲದಲ್ಲಿ ಭೀಕರವಾದ ದಾಳಿ ಎದುರಿಸಿದೆ. ಇಷ್ಟಾದರೂ ಬುದ್ಧಿ ಇಲ್ಲದವರಂತೆ ಇದೀಗ, ಭಾರತವನ್ನೇ ದೂರುವ ಕೆಲಸ ಮಾಡಿದ್ದಾರೆ ಪಾಕಿಸ್ತಾನ ಪ್ರಧಾನಿ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇಂದು ಉಗ್ರರಿಂದ ಭೀಕರವಾದ ಆತ್ಮಾಹುತಿ ದಾಳಿ ನಡೆದಿದೆ. ಅಂದಹಾಗೆ ಇಂದು ಮಧ್ಯಾಹ್ನ ಪಾಕಿಸ್ತಾನದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು ಜನ ಹೆಚ್ಚಾಗಿರುವ ಸಮಯದಲ್ಲೇ ಈ ರೀತಿಯ ದಾಳಿ ಮಾಡಲಾಗಿದೆ. ಉಗ್ರರಿಂದ ಈ ಕೃತ್ಯ ನಡೆದಿದೆ ಎಂಬ ಆರೋಪವು ಕೇಳಿ ಬಂದಿದೆ. ಸ್ಫೋಟ ಕೋರ್ಟ್ ಆವರಣದಲ್ಲಿ ಇದ್ದ ವಕೀಲರಲ್ಲಿ ಭಯ ಮೂಡಿಸಿತ್ತು, ತಕ್ಷಣವೇ ಎಲ್ಲರೂ ಓಡಿ ಹೋಗಿದ್ದಾರೆ. ಹಾಗೇ ಬ್ಲಾಸ್ಟ್ ಅದೆಷ್ಟು ತೀವ್ರವಾಗಿತ್ತು ಎಂದರೆ, 5 ಕಿಲೋ ಮೀಟರ್ ದೂರಕ್ಕೂ ಸ್ಫೋಟದ ಸದ್ದು ಕೇಳಿಸಿದೆ. ಹೀಗೆ ಸಿಲಿಂಡರ್ ಸ್ಫೋಟಿಸಿ ಈ ಕೃತ್ಯ ಎಸಗಿರುವ ಆರೋಪ ಕೇಳಿ ಬಂದಿದೆ, ಆದರೆ ಇದೇ ವಿಚಾರವಾಗಿ ಇದೀಗ ಪಾಕಿಸ್ತಾನ ಪ್ರಧಾನಿ ಭಾರತವನ್ನು ದೂರಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

ಭಾರತದ ಬಗ್ಗೆ ನಾಲಿಗೆ ಹರಿಬಿಟ್ಟ ಪಾಕ್!
ಇಸ್ಲಾಮಾಬಾದ್ ಕೋರ್ಟ್ ಸಮೀಪ ನಡೆದಿರುವ ಘಟನೆಯಲ್ಲಿ ಸುತ್ತಮುತ್ತ ಇದ್ದ ವಾಹನಗಳೂ ಹಾನಿಗೀಡಾಗಿವೆ. ಗಾಯಗೊಂಡವರಲ್ಲಿ ಹೆಚ್ಚಿನವರು ವಕೀಲರು & ಕೋರ್ಟ್‌ನಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈಗ, ಬ್ಲಾಸ್ಟ್ ಬಗ್ಗೆ ಮಾತನಾಡುತ್ತಾ ಭಾರತವನ್ನ ಎಳೆದು ತಂದಿದ್ದಾರೆ. ಹಾಗಾದ್ರೆ ಪಾಕಿಸ್ತಾನ ಪ್ರಧಾನಿ ಇದೀಗ ಭಾರತದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಏನು? ಮುಂದೆ ಓದಿ.
ಉಗ್ರರ ಪೋಷಕ ಪಾಪಿ ಪಾಕಿಸ್ತಾನ...
ಇಸ್ಲಾಮಾಬಾದ್ ಘಟನೆಯಲ್ಲಿ ಭಾರತದ ಪಾತ್ರ ಇದೆ, ಎಂದು ಪಾಕ್ ಪ್ರಧಾನಿ ಹೇಳಿದ್ದು ಬೆಂಕಿ ಹೊತ್ತಿಸಿದೆ. ಭಾರತದಿಂದ ಪ್ರಾಯೋಜಿತವಾಗಿ ದಾಳಿ ನಡೆದಿದೆ ಎಂದು ಷರೀಫ್ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸರ್ಕಾರಿ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ್ ಶೆಹಬಾಜ್ ಷರೀಫ್ ಹೇಳಿಕೆ ಪ್ರಕಟಿಸಿದೆ.
ಈ ಮೂಲಕ ಮತ್ತೊಮ್ಮೆ ಭಾರತ & ಪಾಕಿಸ್ತಾನ ನಡುವೆ ಬೆಂಕಿ ಹೊತ್ತಿದೆ, ಈವರೆಗೆ ಇಸ್ಲಾಮಾಬಾದ್ ಕೋರ್ಟ್ ಬಳಿ ನಡೆದ ಡೆಡ್ಲಿ ಬ್ಲಾಸ್ಟ್‌ನಲ್ಲಿ 12 ಜನ ಮೃತಪಟ್ಟಿದ್ದಾರೆ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ, ಅಲ್ಲದೆ ಹತ್ತಾರು ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ. ಭಾರತದ ರಾಜಧಾನಿ ದೆಹಲಿಯಲ್ಲಿ ನಡೆದ ಸ್ಫೋಟದ ಮರು ದಿನವೇ ಇಂತಹ ಘಟನೆ ನಡೆದಿರುವುದು ಪಾಪಿ ಪಾಕ್‌ನ ಬುದ್ಧಿ ಇಡೀ ಜಗತ್ತಿಗೇ ತಿಳಿಸಿದೆ. ಹಾಗೇ ಪಾಕಿಸ್ತಾನ ಎಂತಹ ಉಗ್ರ ಪೋಷಕ ದೇಶ ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ.












Click it and Unblock the Notifications