ಕ್ಷಮೆ ಕೇಳು ಇಮ್ರಾನ್ ಖಾನ್ ಅಂತು ಪಾಕ್ ಸರ್ಕಾರ!
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಣಿಯೋಕೆ ಎಲ್ಲಾ ರೀತಿ ಕಸರತ್ತು ಮಾಡಿದ್ದ ಪಾಕಿಸ್ತಾನ ಸರ್ಕಾರ, ಈಗ ಸಂಧಾನಕ್ಕೆ ಮುಂದಾಗಿದೆ. ಇಮ್ರಾನ್ ಖಾನ್ ಕ್ಷಮೆ ಕೇಳಿದರೆ ಮಾತುಕತೆಗೆ ನಾವ್ ರೆಡಿ ಅಂತಾ ಪಾಕ್ ಕೇಂದ್ರ ಸಚಿವ ಹೇಳಿದ್ದು, ಸಂಚಲನ ಸೃಷ್ಟಿಯಾಗಿದೆ. ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಇಮ್ರಾನ್ ಖಾನ್ ಅರೆಸ್ಟ್ ಆದ ನಂತರ ಅಂದರೆ ಮೇ 9ರ ಬಳಿಕ ನಡೆದ ಹಿಂಸಾಚಾರ ಪ್ರಕರಣದ ಕುರಿತು ಇಮ್ರಾನ್ ಖಾನ್ ದೇಶದ ಜನರಲ್ಲಿ ಕ್ಷಮೆ ಕೇಳಲಿ. ಆಗ ಮಾತ್ರ ಸರ್ಕಾರ ಮಾತುಕತೆ ನಡೆಸಲು ಸಿದ್ಧ. ಹೀಗಾಗಿ ಮೊದಲು ಇಮ್ರಾನ್ ಖಾನ್ ಪಾಕಿಸ್ತಾನದ ಜನರ ಬಳಿ ಕ್ಷಮೆ ಕೇಳಲಿ ಎಂದಿದ್ದಾರೆ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್. ಹೀಗಾಗಿ ಕೇಂದ್ರ ಸಚಿವರ ಈ ಮಾತು ಪಾಕ್‌ನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ (Imran Khan Arrest).

ಚರ್ಚೆ ನಾಯಕರ ಜೊತೆ, ಉಗ್ರರ ಜೊತೆಗಲ್ಲ!
ಅಂದಹಾಗೆ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಖಾಸಗಿ ಸಂದರ್ಶನದಲ್ಲಿ ಮಾತನಾಡುವಾಗ, ಇಮ್ರಾನ್ ಖಾನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪರೋಕ್ಷವಾಗಿ ಇಮ್ರಾನ್ ಖಾನ್ ಬೆಂಬಲಿಗರನ್ನ ಉಗ್ರರು ಎಂದು ಆರೋಪಿಸಿದ್ದಾರೆ. ಅಲ್ಲದೆ, ಮಾತುಕತೆ ನಡೆಸುವುದು ರಾಜಕೀಯ ವ್ಯಕ್ತಿಗಳೊಂದಿಗೆ ಮಾತ್ರ, ಭಯೋತ್ಪಾದಕರ ಜೊತೆ ಅಲ್ಲ ಎನ್ನು ಮೂಲಕ ಮತ್ತೊಂದು ಕಿಡಿ ಅಂಟಿಸಿದ್ದಾರೆ.
ಮಾಜಿ ಪ್ರಧಾನಿ VS ಮಾಜಿ ಪ್ರಧಾನಿ ಮಗಳು!
ಮೊನ್ನೆ ಮೊನ್ನೆ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಮಗಳು ಮರ್ಯಮ್ ನವಾಜ್ ಕೂಡ ಇಮ್ರಾನ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಳು. ನಾಯಕನೇ ನರಿಯಾಗಿರುವಾಗ ಜನ ಹೇಗೆ ನಿಲ್ಲುತ್ತಾರೆ? ಕಳೆದ ವರ್ಷ ಏಪ್ರಿಲ್‍ನಲ್ಲಿ ಅವಿಶ್ವಾಸ ನಿರ್ಣಯದಿಂದಾಗಿ ಇಮ್ರಾನ್ ಅಧಿಕಾರ ಕಳೆದುಕೊಂಡ ಬಗ್ಗೆ ಆಡಿಕೊಂಡಿದ್ದಾರೆ ನವಾಜ್ ಷರೀಫ್ ಮುದ್ದಿನ ಮಗಳು ಮರ್ಯಮ್. ಅಲ್ಲದೆ ಇಮ್ರಾನ್ ಖಾನ್ ಆಟ ಮುಗಿದಿದೆ, ಅವರ ಪಕ್ಷದ ಕಥೆಯೂ ಇದೀಗ ಮುಗಿದ ಅಧ್ಯಾಯ ಎನ್ನುವ ರೀತಿ ಹೇಳಿಕೆ ನೀಡಿದ್ದರು. ಇದೀಗ ಮಾತುಕತೆಗೆ ಸಿದ್ಧ, ಕ್ಷಮೆ ಕೇಳಿ ಅಂತಾ ಪಾಕ್ ಸರ್ಕಾರ ಹೇಳಿರುವುದು ಕುತೂಹಲ ಕೆರಳಿಸಿದೆ.

ಏನ್ ಗುರೂ ಇದು ಪಾಕಿಸ್ತಾನದ ಕಥೆ?
ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಕೂಡ ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಅಲ್ಲಿ ಖಾನ್ ಲಾಕ್ ಆಗಿಲ್ಲ, ಇದೀಗ ಇಮ್ರಾನ್ ಖಾನ್ ಹೊರ ಹೋಗದಂತೆ ಲಾಕ್ ಮಾಡಲಾಗಿದೆ.
5 ಸಾವಿರ ಕೋಟಿ ರೂ. ನುಂಗಿದ ಇಮ್ರಾನ್?
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದಾರೆ. ಆದ್ರೂ ಇದೇ ಪ್ರಕರಣ ಸಂಬಂಧ ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಹೀಗಾಗಿ ದೇಶ ಬಿಟ್ಟು ಈ ವ್ಯಕ್ತಿ ಓಡಿ ಹೋಗ್ತಾರೆ ಎಂದು ಆರೋಪಿಸಿ ಇಮ್ರಾನ್ ಖಾನ್ ಪಾಸ್ಪೋರ್ಟ್ ಲಾಕ್ ಮಾಡಲಾಗಿದೆಯಂತೆ.

ಒಟ್ನಲ್ಲಿ ಪಾಕಿಸ್ತಾನ ಅರಾಜಕತೆಯ ತವರು ಅನ್ನೋದು ಪದೇ ಪದೆ ಸ್ಪಷ್ಟವಾಗುತ್ತಿದೆ. ಅದರಲ್ಲೂ ಇಮ್ರಾನ್ ಖಾನ್ ವಿಚಾರದಲ್ಲಿ ಕಾನೂನು ಮೀರಿ ಎಲ್ಲವೂ ನಡೆಯುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಇಮ್ರಾನ್ ಖಾನ್ ಜೈಲಿಗೆ ಹೋದರೂ ಅಚ್ಚರಿ ಪಡಬೇಕಿಲ್ಲ. ಹಾಗೇ ಇಮ್ರಾನ್ ಖಾನ್ ಬೆಂಬಲಿಗರು ಹಿಂಸಾಚಾರ ನಡೆಸಲು ಸದಾ ಸಿದ್ಧರಾಗಿದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ.












Click it and Unblock the Notifications