ಅಫ್ಘಾನಿಸ್ತಾನ ಗಡಿಯಲ್ಲಿ ಪಾಕ್ ಸೇನೆಯಿಂದ ಕಾರ್ಯಾಚರಣೆ, ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮ | Pakistan Military

ಪಾಕಿಸ್ತಾನ ತಾನೇ ಬೆಳೆಸಿರುವ ಉಗ್ರರಿಂದಲೇ ನೂರಾರು ಸಮಸ್ಯೆ ಎದುರಿಸುತ್ತಿದ್ದು, ಈಗಾಗಲೇ ಹತ್ತಾರು ಸಾವಿರ ಪ್ರಜೆಗಳು ಪಾಕಿಸ್ತಾನದಲ್ಲಿ ಉಗ್ರರ ಕಾರಣಕ್ಕೆ ಜೀವ ಬಿಟ್ಟಿದ್ದಾರೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಮತ್ತೆ ಉಗ್ರರ ಬೆನ್ನಿಗೆ ನಿಲ್ಲುತ್ತಿದ್ದು, ಅದೇ ಉಗ್ರರು ಪಾಕಿಸ್ತಾನದ ಒಳಗೆ ನುಗ್ಗಿ ಭಾರಿ ಹಿಂಸಾಚಾರ ನಡೆಸುತ್ತಿದ್ದಾರೆ. ಮೊನ್ನೆ ಮೊನ್ನೆ ಇಸ್ಲಾಮಾಬಾದ್ ನಗರದ ಮಸೀದಿಯಲ್ಲಿ ಭೀಕರವಾಗಿ ಸ್ಫೋಟವಾಗಿತ್ತು, ಆ ನಂತರ ಗಡಿಯಲ್ಲಿ ಪದೇ ಪದೇ ಉಗ್ರರು ಬಾಲ ಬಿಚ್ಚುತ್ತಿದ್ದರು. ಹೀಗಿದ್ದಾಗಲೇ ಎಚ್ಚೆತ್ತುಕೊಂಡ ಪಾಕಿಸ್ತಾನ ಸೇನೆ ಅಫ್ಘಾನ್ ಗಡಿಯಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ಆದರೆ ಈ ಕಾರ್ಯಾಚರಣೆ ಕೂಡ ಕಣ್ಣೊರೆಸುವ ತಂತ್ರ ಎಂಬ ಆರೋಪ ಕೇಳಿಬಂದಿದೆ.

ಕಳೆದ 24 ಗಂಟೆಗಳಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಗೆ ಅಪ್ಘಾನಿಸ್ತಾನದ 22 ಜನ ಬಲಿಯಾಗಿದ್ದಾರೆ. ಅಂದಹಾಗೆ ಪಾಕಿಸ್ತಾನ ನೆಲದಲ್ಲಿ ಇತ್ತೀಚೆಗೆ ನಡೆದ ಬಂಡುಕೋರರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು ಪಾಕ್ ಸೇನೆ ಮುಂದಾಗಿದೆ. ಈ ಕಾರಣಕ್ಕೆ ನೆರೆಯ ಅಫ್ಘಾನಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ಮಾಡಿದೆ ಪಾಕಿಸ್ತಾನ, ಸುಮಾರು 7 ಉಗ್ರರ ಅಡಗುದಾಣಗಳನ್ನ ಟಾರ್ಗೆಟ್ ಮಾಡಿ ಪಾಕ್ ಸೇನೆ ಈ ದಾಳಿಯನ್ನ ನಡೆಸಿದೆ ಎನ್ನಲಾಗಿದೆ. ಪಾಕಿಸ್ತಾನ ನಡೆಸಿರುವ ವಾಯುದಾಳಿ ಪರಿಣಾಮ ಅಫ್ಘಾನಿಸ್ತಾನದ ಮನೆಗಳು ಹಾಗೂ ದಾರ್ಮಿಕ ಕೇಂದ್ರಗಳಿಗೆ ತೀವ್ರ ಹಾನಿಯಾಗಿದೆ. ಘಟನೆ ಬಗ್ಗೆ ರೊಚ್ಚಿಗೆದಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಪಾಕಿಸ್ತಾನದ ವಿರುದ್ಧ ಮರುದಾಳಿಯ ಎಚ್ಚರಿಕೆ ನೀಡಿದೆ.

Pakistan Military

ಪಾಕ್ ದಾಳಿಯಲ್ಲಿ 17 ಜನ ಬಲಿ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಮತ್ತೊಮ್ಮೆ ಕಿಚ್ಚು ಹೊತ್ತಿಕೊಂಡು ಇದೀಗ ಧಗಧಗಿಸುತ್ತಿದೆ. ಅಫ್ಘಾನಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿರುವ ಪಾಕಿಸ್ತಾನ, ವಾಯುದಾಳಿ ಮೂಲಕ ಉಗ್ರರನ್ನು ಹಾಗೂ ಬಂಡುಕೋರರನ್ನ ಟಾರ್ಗೆಟ್ ಮಾಡಿದ್ದೀವಿ ಎನ್ನುತ್ತಿದೆ. ಆದರೆ ಈ ದಾಳಿಯಲ್ಲಿ ಹತ್ತಾರು ನಾಗರಿಕರು ಬಲಿ ಆಗಿರುವುದು ತಾಲಿಬಾನ್ ಆಡಳಿತಕ್ಕೆ ತೀವ್ರ ಕೋಪ ತರಿಸಿದೆ. ಪೂರ್ವ ಅಫ್ಘಾನಿಸ್ತಾನ ನಂಗರ್ಹಾರ್ ಪ್ರಾಂತ್ಯದ ಬೆಸುದ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೇನೆಯಿಂದ ನಡೆದ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 17 ನಾಗರಿಕರು ಬಲಿಯಾಗಿರುವ ಆರೋಪ ಮಾಡಲಾಗಿದೆ.

ಏಷ್ಯಾ ಭಾಗದಲ್ಲಿ ಶಾಂತಿ ಕದಡುವ ಸಾಧ್ಯತೆ

ಈ ಘಟನೆಯು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಕಿಚ್ಚು ಹೊತ್ತಿಸಿದ್ದು, ಯಾವುದೇ ಕ್ಷಣದಲ್ಲಿ ಪಾಕ್ ದಾಳಿಗೆ ಅಫ್ಘಾನಿಸ್ತಾನ ರಿವೇಂಜ್ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೆಲವು ತಿಂಗಳ ಹಿಂದೆ ಕೂಡ ಇದೇ ರೀತಿಯಾಗಿ ಪಾಕಿಸ್ತಾನ & ಅಫ್ಘಾನಿಸ್ತಾನ ಕಿತ್ತಾಡಿಕೊಂಡಿದ್ದವು, ಇದೀಗ ಮತ್ತೊಮ್ಮೆ ಭಾರಿ ದೊಡ್ಡ ಮಟ್ಟದಲ್ಲಿ ಕದನ ನಡೆದಿದೆ. ಅಲ್ಲದೇ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣವನ್ನ ಕೂಡ ನಿರ್ಮಾಣ ಮಾಡಿದ್ದು, ಏಷ್ಯಾ ಭಾಗದಲ್ಲಿ ಶಾಂತಿ ಕದಡುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+