ಉಂಡ ಮನೆಗೆ ದ್ರೋಹ ಬಗೆಯುತ್ತಿದೆ ಪಾಪಿ ಪಾಕಿಸ್ತಾನ, ಆಘಾತದಲ್ಲಿ ಇರಾನ್... Israel And Iran
ಪಾಪಿ ಪಾಕಿಸ್ತಾನದ ಬುದ್ಧಿ ಹೇಗಂದ್ರೆ ಒಂದು ಬಿರಿಯಾನಿ ಕೊಟ್ಟರೆ ಇರಾನ್ ಕಡೆ, ಎರಡು ಬಿರಿಯಾನಿ ಕೊಟ್ರೆ ಅಮೆರಿಕ ಕಡೆ ಅನ್ನೋ ರೀತಿ ಡಬಲ್ ಗೇಮ್ ಆಡುತ್ತಿದೆ. ಪಾಪಿ ಪಾಕ್ ಈ ಜನ್ಮದಲ್ಲಿ ಒಳ್ಳೆಯ ಬುದ್ಧಿ ಕಲಿಯೋದಿಲ್ಲ, ಆ ದೇಶ ಸರ್ವನಾಶ ಆಗಿ ಹೋಗೋದೆ ಸರಿ ಅನ್ನೋ ಮಾತನ್ನ ಕೂಡ ಹೇಳುತ್ತಾರೆ ಭಾರತೀಯರು. ಹೀಗಿದ್ದಾಗಲೇ, ತಾನು ನಂಬಿ ಕೂತಿದ್ದ ಇರಾನ್ ದೇಶಕ್ಕೂ ಕೈಕೊಟ್ಟಿದೆ ಈ ನೀಜ ಬುದ್ಧಿಯ ಪಾಪಿ ಪಾಕಿಸ್ತಾನ.
ಇಸ್ರೇಲ್ ವಿರುದ್ಧ ಡೆಡ್ಲಿ ವಾರ್ ಮಾಡುತ್ತಿರುವ ಇರಾನ್ ಈಗ ನಂಬಿ ಕೂತಿರುವುದೇ ಪಾಪಿ ಪಾಕಿಸ್ತಾನ ದೇಶವನ್ನ. ನಮ್ಮ ಮೇಲೆ ಇಸ್ರೇಲ್ ನೇರವಾಗಿ ದಾಳಿ ಮಾಡಿ ವಿನಾಶ ಮಾಡಿ, ಸಮಸ್ಯೆ ಸೃಷ್ಟಿಸಿದರೆ ಪಾಕಿಸ್ತಾನ ಇಸ್ರೇಲ್ ಮೇಲೆ ನ್ಯೂಕ್ಲಿಯರ್ ಅಂದ್ರೆ ಪರಮಾಣು ದಾಳಿ ಮಾಡಲಿದೆ ಅಂತಾ ಎಚ್ಚರಿಕೆ ನೀಡಿತ್ತು ಇರಾನ್. ಆದರೆ ಇದೀಗ ಉಂಡ ಮನೆಗೆ ದ್ರೋಹ ಬಗೆಯುತ್ತಿದೆ ಪಾಪಿ ಪಾಕಿಸ್ತಾನ!

ಉಂಡ ಮನೆಗೆ ದ್ರೋಹ ಬಗೆದ ಪಾಕ್?
ಹೌದು, ಇರಾನ್ ಜೊತೆಗೆ ಸ್ನೇಹ ಮಾಡಿಕೊಂಡು ಸಂಕಷ್ಟದ ಸಮಯದಲ್ಲಿ ಸಹಾಯವನ್ನ ಮಾಡುವ ಮಾತು ಕೊಟ್ಟಿದ್ದ ಪಾಪಿ ಪಾಕಿಸ್ತಾನ ಈಗ ಪುಡಿಗಾಸಿಗೆ ಆಸೆಪಟ್ಟು ದ್ರೋಹವನ್ನೇ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇರಾನ್‌ಗೆ ಸಹಾಯ ಮಾಡುವ ಮಾತನ್ನು ಕೊಟ್ಟಿದ್ದ ಪಾಕಿಸ್ತಾನ ಈಗ ಅಮೆರಿಕ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ, ಇದೇ ಕಾರಣಕ್ಕೆ ಹಣದ ಸಹಾಯ ಕೂಡ ಪಾಕಿಸ್ತಾನ ಪಡೆಯಲಿದೆ ಎಂಬ ಆರೋಪವನ್ನು ಕೂಡ ಇದೀಗ ಮಾಡಲಾಗುತ್ತಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ & ಅಮೆರಿಕದ ಅಧಿಕಾರಿಗಳ ಮಧ್ಯೆ ಇದೀಗ ಮಹತ್ವದ ಸಭೆ ಆಯೋಜನೆ ಮಾಡಿರುವುದು ಹಲವು ಅನುಮಾನ ಸೃಷ್ಟಿಸಿದೆ.












Click it and Unblock the Notifications