4 ಕಡೆಗಳಿಂದ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ: ತಿರುಗು ಬಾಣಕ್ಕೆ ವಿಲವಿಲ...!

Pakistan in Trouble from 4 sides: ಪಾಕಿಸ್ತಾನಕ್ಕೆ ನಾಲ್ಕೂ ಕಡೆಗಳಿಂದ ಸಂಕಷ್ಟ ಎದುರಾಗಿದ್ದು ಏನು ಮಾಡಬೇಕು ಎಂದು ದಿಕ್ಕು ತೋಚದಂತೆ ಆಗಿದೆ. ಹೌದು ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿರುವಾಗಲೇ ಪಾಕ್‌ಗೆ ದೇಶದ ಒಳಗಿನಿಂದ ಹಾಗೂ ಹೊರಗಿನಿಂದಲೂ ಸಂಕಷ್ಟ ಎದುರಾಗಿದೆ. ಪಾಕಿಸ್ತಾನ್‌ವು ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಭಾರತದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಪಾಕಿಸ್ತಾನಕ್ಕೆ ತನ್ನದೇ ಭೂಮಿಯಲ್ಲಿ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಪಾಕಿಸ್ತಾನ ಡ್ರೋನ್‌ ಹಾಗೂ ಕ್ಷಿಪಣಿ ದಾಳಿಗಳನ್ನು ಮಾಡುತ್ತಿದ್ದು. ಭಾರತವೂ ಇದಕ್ಕೆ ಭಾರೀ ತಿರುಗೇಟು ನೀಡುತ್ತಿದೆ. ಪಾಕಿಸ್ತಾನಕ್ಕೆ ಆಫ್ಗಾನಿಸ್ತಾನ ಸೂಕ್ಷ್ಮವಾಗಿ ತಿರುಗೇಟು ನೀಡಿದೆ. ಇದರ ನಡುವೆ ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಹೋರಾಟ ಮಾಡುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಬಲೂಚಿಸ್ತಾನದ ವಿವಿಧ ಸೇನಾ ನೆಲೆಗಳನ್ನು ವಶಪಡಿಸಿಕೊಂಡಿರುವುದು ವರದಿಯಾಗಿದೆ.

ಪಾಕಿಸ್ತಾನಕ್ಕೆ ದೇಶದ ಒಳಗಿನಿಂದಲೇ ಪಾಕ್‌ಗೆ ಸಂಕಷ್ಟ ಎದುರಾಗುತ್ತಿದೆ. ಪಾಕಿಸ್ತಾನ ಸರ್ಕಾರದ ಬಗ್ಗೆ ಅಲ್ಲಿನ ಜನರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಸರ್ಕಾರವು ಅಲ್ಲಿನ ಜನರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಅಲ್ಲಿನ ಜನ ದೂರಿದ್ದು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದರೊಂದಿಗೆ ಅಲ್ಲಿನ ವಿರೋಧ ಪಕ್ಷವು ಸಂಸತ್ತಿನ ಒಳಗೆ ಹಾಗೂ ಸಂಸತ್ತಿನ ಹೊರಗೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದೆ. ಭಾರತೀಯ ಸೇನೆಯ ಕ್ಷಿಪಣಿಗಳ ದಾಳಿಯನ್ನು ತಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎನ್ನುವ ಆಕ್ರೋಶವೂ ಅಲ್ಲಿನ ಜನರಲ್ಲಿ ಇದೆ ಎಂದು ಹೇಳಲಾಗುತ್ತಿದೆ.

Pakistan in Trouble from 4 sides Trouble from Balochistan and India

ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವುದು ಪ್ರಾದೇಶಿಕ ಹಿತಾಸಕ್ತಿಗೆ ಒಳ್ಳೆಯದಲ್ಲ ಎಂದು ಆಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರ ಪಾಕ್‌ಗೆ ಎಚ್ಚರಿಕೆ ನೀಡಿತ್ತು. ರಾಜತಾಂತ್ರಿಕವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಪಾಕ್‌ಗೆ ಆಫ್ಗಾನಿಸ್ತಾನ ಸರ್ಕಾರವು ಎಚ್ಚರಿಕೆಯ ಸಂದೇಶವನ್ನು ನೀಡಿತ್ತು. ಭಾರತ ಹಾಗೂ ಪಾಕ್‌ನ ನಡುವೆ ಈ ರೀತಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಮುನ್ನವೇ ಭಾರತವೂ ಆಫ್ಗಾನಿಸ್ತಾನದೊಂದಿಗೆ ಚರ್ಚೆ ಮಾಡಿತ್ತು. ಆಫ್ಗಾನಿಸ್ತಾನವೂ ಸಹ ಪಾಕಿಸ್ತಾನದ ಪರವಾಗಿಲ್ಲ. ಇದು ಪಾಕ್‌ಗೆ ಮುಗ್ಗಲ್ಲ ಮುಳ್ಳಾದಂತೆ ಆಗಿದೆ. ಚೀನಾದ ಶಸ್ತ್ರಾಸ್ತ್ರಗಳನ್ನು ಬಳಸಿದ್ದೇವೆ ಎಂದು ಪಾಕ್‌ ಹೇಳಿದ ಮೇಲೆ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ಚೀನಾ ಹೇಳಿತ್ತು. ಚೀನಾವನ್ನೇ ಪಾಕ್‌ ನೆಚ್ಚಿಕೊಂಡಿತ್ತು.

ಬಲೂಚಿಸ್ತಾನ್ ಲಿಬರೇಶನ್ ಆರ್ಮಿ: ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯು (ಬಂಡುಕೋರರು) ಪಾಕಿಸ್ತಾನಕ್ಕೆ ತಲೆನೋವಾಗಿ ಪರಿಣಮಿಸಿದೆ. ನಿರಂತರವಾಗಿ ಪಾಕ್‌ ಸೈನಿಕರನ್ನು ಗುರಿಯಾಗಿಸಿಕೊಂಡು ಈ ಬಂಡುಕೋರರು ದಾಳಿ ನಡೆಸುತ್ತಿದ್ದಾರೆ. ಈ ಬಂಡುಕೋರರು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ 12 ಜನ ಸೈನಿಕರು ಮೃತಪಟ್ಟಿದ್ದಾರೆ. ಹಲವು ಪ್ರದೇಶಗಳಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯಿಂದ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಹಲವು ಸೇನಾ ನೆಲೆಗಳನ್ನು ವಶಪಡಿಸಿಕೊಂಡಿದೆ. ಬಲೂಚಿಸ್ತಾನ್‌ ಪ್ರಾಂತ್ಯದ ರಾಜದಾನಿ ಕ್ವೆಟ್ಟಾ ಮೇಲೆ ಭಾಗಶಃ ಹಿಡಿತ ಸಾಧಿಸಿದೆ ಎಂದೂ ಹೇಳಲಾಗುತ್ತಿದೆ.

ಆಪರೇಷನ್‌ ಸಿಂಧೂರ 2.0: ಇನ್ನು ಆಪರೇಷನ್‌ ಸಿಂಧೂರ ಹಾಗೂ ಆಪರೇಷನ್‌ ಸಿಂಧೂರ 2.0 ಕಾರ್ಯಾಚರಣೆಗಳನ್ನು ಭಾರತೀಯ ಸೇನೆಯು ಚುರುಕುಗೊಳಿಸಿದ್ದು. ಭಾರತದ ಮೇಲೆ ದಾಳಿ ಮಾಡುವ ಪಾಕ್‌ ಪ್ರಯತ್ನವನ್ನು ವಿಫಲಗೊಳಿಸುವುದರೊಂದಿಗೆ ಪಾಕ್‌ ಸೇನೆಗೆ ಸರಿಯಾದ ಉತ್ತರವನ್ನು ನೀಡಿದೆ.

ಪಾಕ್‌ ಪ್ರಜೆಗಳಿಂದಲೇ ಸಂಕಷ್ಟ: ಇದರೊಂದಿಗೆ ಪಾಕ್‌ ಪ್ರಜೆಗಳಿಂದಲೂ ಪಾಕ್‌ನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲಿನ ಜನ ಪಾಕ್‌ ವೈಫಲ್ಯವನ್ನು ಟೀಕಿಸಿ ಆ ದೇಶದಾದ್ಯಂತ ಬೀದಿಗೆ ಇಳಿದಿದ್ದಾರೆ. ಈ ಎಲ್ಲಾ ವಿಚಾರಗಳೂ ಪಾಕ್‌ಗೆ ನುಂಗಲಾರದ ತುತ್ತಾಗಿದೆ. ಈ ಮೂಲಕ ನಾಲ್ಕೂ ಕಡೆಗಳಿಂದಲೂ ಪಾಕ್‌ ಸಂಕಷ್ಟಕ್ಕೆ ಸಿಲುಕಿದೆ. ಪಾಕ್‌ ಸೇನೆಯು ಈ ಬೆಳವಣಿಗೆಗಳಿಂದ ಕಂಗಾಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+