ಪಾಕಿಸ್ತಾನದಲ್ಲಿ ಹಿಂದೂ ವಿವಾಹ ಮಸೂದೆ ಅಂಗೀಕಾರ
ಪಾಕಿಸ್ತಾನದ ಸೆನೆಟ್ ನಲ್ಲಿ ಹಿಂದೂ ವಿವಾಹ ಮಸೂದೆ 2017 ಹಿಂದೂ ಸಮುದಾಯದ ವಿಸ್ತೃತ ವೈಯಕ್ತಿಕ ಕಾನೂನು ಆಗಿ ರೂಪುಗೊಂಡಿದೆ. ಅಲ್ಪಸಂಖ್ಯಾತ ಹಿಂದೂಗಳ ಮದುವೆ ನಿಯಂತ್ರಣದ ಈ ಮಸೂದೆಗೆ ಅವಿರೋಧ ಬೆಂಬಲ ವ್ಯಕ್ತವಾಗಿದೆ.
ಇಸ್ಲಾಮಾಬಾದ್, ಫೆಬ್ರವರಿ 19: ಪಾಕಿಸ್ತಾನದ ಸೆನೆಟ್ ನಲ್ಲಿ ಹಿಂದೂ ವಿವಾಹ ಮಸೂದೆ 2017 ಹಿಂದೂ ಸಮುದಾಯದ ವಿಸ್ತೃತ ವೈಯಕ್ತಿಕ ಕಾನೂನು ಆಗಿ ರೂಪುಗೊಂಡಿದೆ. ಅಲ್ಪಸಂಖ್ಯಾತ ಹಿಂದೂಗಳ ಮದುವೆ ನಿಯಂತ್ರಣದ ಈ ಮಸೂದೆಗೆ ಅವಿರೋಧ ಬೆಂಬಲ ವ್ಯಕ್ತವಾಗಿದೆ.
ಮಸೂದೆಯನ್ನು ನ್ಯಾಷನಲ್ ಅಸೆಂಬ್ಲಿ 2015 ಸೆಪ್ಟಂಬರ್ 26ರಂದು ಅಂಗೀಕರಿಸಿತ್ತು. ಈಗ ಸೆನೆಟ್ ಅವಿರೋಧವಾಗಿ ಅಂಗೀಕರಿಸಿದ್ದು, ಇನ್ನು ಕಾನೂನು ಆಗಲು ದೇಶದ ಅಧ್ಯಕ್ಷರ ಸಹಿ ಮಾತ್ರ ಬಾಕಿಯಿದೆ.[ಪಾಕಿಸ್ತಾನದ ಹಿಂದೂಗಳ ವಿವಾಹ ವಿಧೇಯಕಕ್ಕೆ ವಿಳಂಬಕ್ಕೆ ಕಾರಣವೇನು?]
ಮಸೂದೆಯು ವಿವಾಹ, ವಿವಾಹ ನೋಂದಣಿ, ವಿಚ್ಛೇದನೆ ಮತ್ತು ಮರುಮದುವೆಗಳಿಗೆ ಸಂಬಂಧಿಸಿದೆ. ಮುಖ್ಯವಾಗಿ ಮದುವೆಯಾಗಲು ಕನಿಷ್ಠ ವಯೋಮಿಯನ್ನು ಯುವಕ ಹಾಗೂ ಯುವತಿ ಇಬ್ಬರಿಗೂ 18 ವರ್ಷ ಎಂದು ನಿಗದಿಪಡಿಸಿದೆ.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ? ಏಕೆ?]

ಮಸೂದೆಗೆ ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳ ವ್ಯಾಪಕ ಬೆಂಬಲವಿದೆ ಎಂದು 'ಡಾನ್ ನ್ಯೂಸ್' ವರದಿ ಮಾಡಿದೆ.ಹಿಂದೂ ಮಹಿಳೆಯರು ತಮ್ಮ ಮದುವೆಯ ದಾಖಲೀಕೃತ ಪುರಾವೆಯನ್ನು ಪಡೆಯಲು ಈ ಮಸೂದೆಯಿಂದ ಸಾಧ್ಯವಾಗಲಿದೆ.[ಹಿಂದೂ ಮಹಿಳೆಯರಿಗೆ ವಿವಾಹ ವಿಚ್ಛೇದನ ಇನ್ನು ಬಹು ಸುಲಭ]
ಮಸೂದೆಯು ಪಂಜಾಬ್, ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂಂಖ್ವ ಪ್ರಾಂತಗಳಲ್ಲಿ ಜಾರಿಗೆ ಬರಲಿದೆ. ಸಿಂಧ್ ಪ್ರಾಂತವು ಈಗಾಗಲೇ ತನ್ನದೇ ಆದ ಹಿಂದೂ ಮದುವೆ ಕಾನೂನನ್ನು ಹೊಂದಿದೆ.
ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಹಿಂದೂ ಸಂಸದ ರಮೇಶ್ ಕುಮಾರ್ ವಂಕ್ವಾನಿ, ದೇಶದಲ್ಲಿ ಹಿಂದೂ ವಿವಾಹ ಕಾನೂನೊಂದನ್ನು ಜಾರಿಗೆ ತರಲು ಮೂರು ವರ್ಷಗಳಿಂದ ನಿರಂತರವಾಗಿ ಶ್ರಮಿಸಿದ್ದಾರೆ.
1947ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡ ಪಾಕಿಸ್ತಾನ ಹತ್ತು ಹಲವು ಬಾರಿ ಹಿಂದೂ ವಿವಾಹ ಕಾಯ್ದೆ ಬಗ್ಗೆ ಚರ್ಚೆ ನಡೆಸಿತ್ತು.
ಆದರೆ, ಹಲವು ತೊಡಕುಗಳನ್ನು ಮುಂದಿಟ್ಟುಕೊಂಡು ಕಾನೂನು ಜಾರಿಗೊಳಿಸದೆ ವಿಳಂಬ ಮಾಡಿತ್ತು. ಅದರಲ್ಲೂ ಅಧಿನಿಯಮ 13ರ ಪ್ರಕಾರ ಹಿಂದೂ ದಂಪತಿಗಳು ವಿವಾಹ ವಿಚ್ಛೇದನ ಪಡೆಯಲು ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಪತಿ ಅಥವಾ ಪತ್ನಿಯನ್ನು ಯಾವಾಗ ಬೇಕಾದರೂ ವಿಚ್ಛೇದನ ನೀಡಬಹುದಾಗಿತ್ತು. ಈ ನಿಯಮ ತಿದ್ದುಪಡಿಯಾದ ವಿಧೇಯಕದಲ್ಲಿರಲಿಲ್ಲ.












Click it and Unblock the Notifications