Bomb Blast: ಅಕ್ರಮ ವಲಸಿಗರಿಗೆ ಪಾಕಿಸ್ತಾನ ಸರ್ಕಾರದ ವಾರ್ನಿಂಗ್
ಪಾಕಿಸ್ತಾನಕ್ಕೆ ಉಗ್ರರ ಕಾಟ ಹೆಚ್ಚಾಗಿದ್ದು, ಇವರನ್ನು ನಿಭಾಯಿಸುವುದೇ ಕಷ್ಟವಾಗುತ್ತಿದೆ. ಕಂಡ ಕಂಡಲ್ಲಿ ಬಾಂಬ್ ಸ್ಫೋಟಗಳು ಮೊಳಗುತ್ತಿದ್ದು, ಈಗಾಗಲೇ ಸಾವಿರಾರು ಪಾಕಿಸ್ತಾನಿ ನಾಗರಿಕರು ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಪಾಕ್ ಸರ್ಕಾರ ಅಕ್ರಮ ವಲಸಿಗರ ವಿರುದ್ಧ ಗುಡುಗಿದೆ. ಅಲ್ಲದೆ ಖಡಕ್ ಎಚ್ಚರಿಕೆ ಸಂದೇಶವನ್ನ ನೀಡಿದೆ.
ಪಾಕಿಸ್ತಾನದಲ್ಲಿ ಪದೇ ಪದೆ ಉಗ್ರರ ದಾಳಿ ನಡೆಯುತ್ತಿವೆ. ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, 2023ರಲ್ಲಿ ಹಲವು ದಾಳಿಗಳು ನಡೆದಿದ್ದು ರಕ್ತಪಾತವೇ ಆಗಿದೆ. ಪರಿಸ್ಥಿತಿ ಹೀಗಿದ್ದಾಗ ಅಕ್ರಮ ವಲಸಿಗರ ವಿರುದ್ಧ ಪಾಕಿಸ್ತಾನ ಸರ್ಕಾರವು ಕೆಂಗಣ್ಣು ಬೀರಿದೆ. ಅರೆರೆ ತಿನ್ನೋದಕ್ಕೆ ಗತಿ ಇಲ್ಲದ ಪಾಕಿಸ್ತಾನದಲ್ಲಿ ಅಕ್ರಮ ವಲಸಿಗರು ಇದ್ದಾರಾ? ಅಂತಾ ಪ್ರಶ್ನೆ ಮಾಡಬೇಡಿ. ಯಾಕಂದ್ರೆ ಪಾಕಿಸ್ತಾನ ಕೂಡ ಅಕ್ರಮ ವಲಸಿಗರಿಂದ ಸಖತ್ ಸಂಕಷ್ಟ ಎದುರಿಸುತ್ತಿದೆ.

ತಾಲಿಬಾನ್‌ಗೆ ಹೆದರಿ ಓಡಿ ಬಂದ ಜನ!
ಅಷ್ಟಕ್ಕೂ ಅಫ್ಘಾನಿಸ್ತಾನ ತಾಲಿಬಾನ್ ಆಡಳಿತಕ್ಕೆ ಒಳಪಟ್ಟ ನಂತರ ಮತ್ತು ಅದಕ್ಕಿಂತಲೂ ಮೊದಲು ಭಾರಿ ಪ್ರಮಾಣದಲ್ಲಿ ಅಕ್ರಮ ವಲಸಿಗರು ಪಾಕ್ ಒಳಗೆ ಬಂದಿದ್ದಾರೆ. ಇವರಿಂದ ಬಾಂಬ್ ಸ್ಫೋಟಗಳು ಸಂಭವಿಸುತ್ತಿವೆ ಎಂಬ ಆರೋಪ ಈಗ ಕೇಳಿಬಂದಿದೆ. ಇದೇ ಕಾರಣ ಅವರನ್ನೆಲ್ಲಾ ಪಾಕಿಸ್ತಾನ ಬಿಟ್ಟು ಹೋಗುವಂತೆ ಸೂಚನೆ ನೀಡಲಾಗಿದೆ. ಆದರೆ ಪಾಕಿಸ್ತಾನ ಕೂಡ ಸಂಕಷ್ಟದಲ್ಲೇ ಇದ್ದು, ಅಕ್ರಮ ವಲಸಿಗರನ್ನ ಗುರುತಿಸಲು ಕೂಡ ದುಡ್ಡಿಲ್ಲ. ಇದೇ ಕಾರಣಕ್ಕೆ ಅಕ್ರಮ ವಲಸಿಗರನ್ನು ಗುರುತಿಸಿ, ಹೊರಗೆ ಹಾಕುವುದು ಕಷ್ಟದ ವಿಚಾರ ಎಂಬ ಮಾತು ಕೂಡ ಕೇಳಿಬಂದಿದೆ.
ಪಾಕ್ ಸರ್ಕಾರ ರೊಚ್ಚಿಗೆದ್ದಿದ್ದು ಏಕೆ?
ಮೊನ್ನೆ ಮೊನ್ನೆಯಷ್ಟೇ ಪಾಕಿಸ್ತಾನದ, ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಹಿನ್ನೆಲೆ ಮೆರವಣಿಗೆ ನಡೆಸಲಾಗಿತ್ತು. ಇದೆ ಮೆರವಣಿಗೆ ಟಾರ್ಗೆಟ್ ಮಾಡಿದ್ದ ಉಗ್ರರ ಗ್ಯಾಂಗ್ ಭೀಕರ ಆತ್ಮಾಹುತಿ ಅಟ್ಯಾಕ್ ಮಾಡಿತ್ತು. ಸೂಸೈಡ್ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡ ಕಾರಣ ಮೆರವಣಿಗೆ ವೇಳೆ ರಕ್ತಪಾತವಾಗಿತ್ತು. ಈ ಘಟನೆಯಲ್ಲಿ ಈವರೆಗೂ 60ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹೀಗಾಗಿ ರೊಚ್ಚಿಗೆದ್ದಿರುವ ಪಾಕಿಸ್ತಾನಿ ಸರ್ಕಾರ, ಈ ರೀತಿ ಅಕ್ರಮ ವಲಸಿಗರ ವಿರುದ್ಧ ಯುದ್ಧ ಸಾರಿದೆ.

ಕೈಯಲ್ಲಿ ಆಗದವನು ಮೈ...
ಪಾಕ್ ಉಗ್ರರ ತವರು ಅನ್ನೋ ಮಾತು ಮತ್ತೆ ಮತ್ತೆ ಪ್ರೂವ್ ಆಗುತ್ತಿದ್ದು ಪಾಕಿಸ್ತಾನಿ ನಾಗರಿಕರು ನೆಮ್ಮದಿಯಾಗಿ ಬದಕಲು ಆಗುತ್ತಿಲ್ಲ. ಈಗ ಮತ್ತೆ ಪಾಕ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರಕ್ತಪಾತಕ್ಕೆ ಕಾರಣವಾಗಿದ್ದಾರೆ. ಪರಿಸ್ಥಿತಿ ಕೈಮೀರಿದ್ದು, ಪಾಕ್ ನಾಗರಿಕರು ಅಲ್ಲಿನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗೆಲ್ಲಾ ಪರಿಸ್ಥಿತಿ ಕೈಮೀರಿ ಹೋಗಿರುವ ಸಂದರ್ಭದಲ್ಲಿ, ಉಗ್ರರನ್ನ ಬೆಳೆಸುವ ಪಾಕಿಸ್ತಾನ ಬಾಂಬ್ ಸ್ಫೋಟಕ್ಕೆ ಕಾರಣ ಯಾರು? ಅನ್ನೋದನ್ನ ಹುಡುಕೋದು ಬಿಟ್ಟು ವಲಸಿಗರನ್ನ ಟಾರ್ಗೆಟ್ ಮಾಡ್ತಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಪಾಕಿಸ್ತಾನ ಚುನಾವಣೆ ಕೂಡ ಎದುರಿಸಲಿದೆ. ಆದರೆ ಹೀಗೆ ಉಗ್ರರ ದಾಳಿ ನಡೆಯುತ್ತಿದ್ದರೆ ಕಥೆ ಏನು? ಎಂಬ ಪ್ರಶ್ನೆ ಕೂಡ ಮೂಡಿದೆ.
ಪಾಕಿಸ್ತಾನ ತಾನು ಮಾಡಿದ ತಪ್ಪಿಗೆ ತಾನೇ ಶಿಕ್ಷೆ ಅನುಭವಿಸುವ ಪರಿಸ್ಥಿತಿ ಈಗ ಬಂದಿದೆ. ಇದೇ ಪಾಕಿಸ್ತಾನ ಈ ಹಿಂದೆ ಉಗ್ರರಿಗೆ ನೆಲೆ ನೀಡುತ್ತಾ ಬಂದಿತ್ತು. ಆದರೆ ಈಗ ಅದೇ ಉಗ್ರರಿಂದ ನರಳುತ್ತಿದೆ. ಈಗಲೂ ಭಾರತದ ವಿರುದ್ಧ ಪಾಕ್ ಉಗ್ರರನ್ನ ಸಾಕುತ್ತಿದೆ. ಇಷ್ಟೆಲ್ಲಾ ಸೌಲಭ್ಯ ಕೊಟ್ಟರೂ ಪಾಪಿ ಉಗ್ರರು ಪಾಕಿಸ್ತಾನಿಗಳ ನೆಲವನ್ನೇ ಹಾಳು ಮಾಡುತ್ತಿದ್ದಾರೆ. ಹೀಗಿದ್ದಾಗ ಪಾಕಿಸ್ತಾನ ಸರ್ಕಾರದ ಕೆಂಗಣ್ಣು ಅಕ್ರಮ ವಲಸಿಗರ ಮೇಲೆ ಬಿದ್ದಿದೆ. ಹೀಗಾಗಿ ಇವರನ್ನೆಲ್ಲ ಹೊರಗೆ ಹಾಕಲು ಯಾವ ರೀತಿ ಇಕ್ರಮ ಕೈಗೊಳ್ಳುತ್ತೆ? ಅಂತಾ ಕಾದು ನೋಡಬೇಕಿದೆ. ಈ ಮಧ್ಯೆ ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪಗಳು ಕೂಡ ಪಾಕ್ ಜನರನ್ನು ಕಂಗೆಡಿಸಿವೆ.












Click it and Unblock the Notifications