• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನ್ ಪ್ರವಾಸ ಶನಿವಾರವೇ ರದ್ದುಗೊಳಿಸಿ ಪಾಕ್ ನಲ್ಲೇ ಉಳಿದ ಸಚಿವ

|

ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದ ನಂತರ ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನ ವಾತಾವರಣ ಇರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ತಮ್ಮ ಜಪಾನ್ ಪ್ರವಾಸವನ್ನು ಮುಂದೂಡಿದ್ದಾರೆ ಎಂದು ಸೋಮವಾರ ಅಲ್ಲಿನ ವಿದೇಶಾಂಗ ಕಚೇರಿ ತಿಳಿಸಿದೆ. ಪುಲ್ವಾಮಾ ಉಗ್ರ ದಾಳಿಯ ಹೊಣೆ ಹೊತ್ತ ಜೈಶ್-ಇ-ಮೊಹ್ಮ್ದ್ ಗೆ ಪಾಕಿಸ್ತಾನ ಬೆಂಬಲ ಇದೆ ಎಂದು ಭಾರತ ಆರೋಪಿಸಿತ್ತು.

ಆದರೆ, ದಾಳಿಗೆ ಪಾಕಿಸ್ತಾನದ ಬೆಂಬಲ ಇದೆ ಅನ್ನೋದಿಕ್ಕೆ ಸಾಕ್ಷ್ಯಾಧಾರ ನೀಡುವಂತೆ ಪ್ರಧಾನಿ ಇಮ್ರಾನ್ ಖಾನ್ ಕೇಳಿದ್ದರು. ಒಂದು ವೇಳೆ ಕ್ರಮ ತೆಗೆದುಕೊಳ್ಳಬಹುದಾದಂಥ ಸಾಕ್ಷ್ಯ ನೀಡುವುದಾದರೆ ನಾವು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಪ್ರತಿಯಾಗಿ ನಾವೂ ದಾಳಿ ನಡೆಸಬೇಕಾಗುತ್ತದೆ ಎಂದಿದ್ದರು.

ಪುಲ್ವಾಮಾ ಪ್ರತೀಕಾರ LIVE: ಉಗ್ರನೆಲೆ ಮೇಲೆ 1000 ಕೆಜಿ ಬಾಂಬ್ ಎಸೆದ ಭಾರತ

ಜಪಾನ್ ದೇಶದ ಅಧಿಕೃತ ಆಹ್ವಾನದ ಮೇರೆಗೆ ಫೆಬ್ರವರಿ 24ರಂದು ವಿದೇಶಾಂಗ ಸಚಿವ ಖುರೇಶಿ ತೆರಳಬೇಕಿತ್ತು. ಆದರೆ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಜಪಾನ್ ನ ವಿದೇಶಾಂಗ ಸಚಿವ ಟಾರೊ ಕೊನೊ ಅವರಿಗೆ ದೂರವಾಣಿ ಕರೆ ಮಾಡಿ, ಪುಲ್ವಾಮಾ ಉಗ್ರಗಾಮಿ ದಾಳಿ ನಂತರ ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ಇದೆ. ಆ ಕಾರಣಕ್ಕೆ ಪಾಕಿಸ್ತಾನದಲ್ಲಿ ಇರಬೇಕಾಗಿದೆ ಎಂದು ತಿಳಿಸಿದ್ದಾರೆ.

ಯುದ್ಧ ಬೇಕಾಗಿರುವುದು ಭಾರತಕ್ಕೆ, ಪಾಕಿಸ್ತಾನಕ್ಕಲ್ಲ: ಪಾಕ್ ವಿದೇಶಾಂಗ ಸಚಿವ

ಭಾರತ-ಪಾಕಿಸ್ತಾನ ಮಧ್ಯೆ ಪರಿಸ್ಥಿತಿ ಸುಧಾರಿಸಲು ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಗೆ ಜಪಾನ್ ಪತ್ರ ಬರೆದಿದೆ.

English summary
The Pakistan Foreign Office on Monday announced that Foreign Minister Shah Mahmood Qureshi had postponed his trip to Japan due to the "sensitive situation" brewing in the region in the wake of the Pulwama attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X