ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲಭೂಷಣ್ ಜಾಧವ್ ವಿರುದ್ಧ ಹೊಸ ಸಾಕ್ಷ್ಯ ಸಿಕ್ಕಿದೆ ಎಂದ ಪಾಕ್

|
Google Oneindia Kannada News

ಕರಾಚಿ, ಮೇ 29: ಅಂತರರಾಷ್ಟ್ರೀಯ ಕೋರ್ಟ್ ನಿಂದ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ಬಿದ್ದು ಹತ್ತು ದಿನಗಳ ನಂತರ ಪಾಕಿಸ್ತಾನ ತನ್ನ ಬಳಿ ಹೊಸ ಸಾಕ್ಷ್ಯ ಇದೆ ಎಂದು ಹೇಳಿಕೊಂಡಿದೆ. ಪಾಕ್ ವಿರುದ್ಧ ಗೂಢಚಾರಿಕೆ ಹಾಗೂ ವಿಧ್ವಂಸಕ ಕೃತ್ಯ ನಡೆಸಲು ಕುಲಭೂಷಣ್ ಜಾಧವ್ ಷಡ್ಯಂತ್ರ ಮಾಡಿದ್ದರು ಎಂದು ಅಲ್ಲಿನ ಸೇನಾ ಕೋರ್ಟ್ ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ವಿದೇಶಾಂಗ ಕಚೇರಿಯ ವಕ್ತಾರರಾದ ನಫೀಸ್ ಜಕಾರಿಯಾ ಸೋಮವಾರ ಈ ಬಗ್ಗೆ ಹೇಳಿಕೆ ನೀಡಿದ್ದು, ಪಾಕಿಸ್ತಾನದ ವಿರುದ್ಧದ ಭಯೋತ್ಪಾದನಾ ದಾಳಿ ನಡೆಸುವ ವಿಚಾರವಾಗಿ ಗುಪ್ತಚರ ಮಾಹಿತಿಯನ್ನು ಜಾಧವ್ ನೀಡಿರುವುದಾಗಿ ತಿಳಿಸಲಾಗಿದೆ. ಅಟಾರ್ನಿ ಜನರಲ್ ಅಷ್ತಾರ್ ಔಸಫ್ ಡಾನ್ ಟಿವಿಗೆ ಸಂದರ್ಶನ ನೀಡಿದ್ದಾರೆ.[ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ]

Kulbhushan Jadhav

ಕುಲಭೂಷಣ್ ಜಾಧವ್ ವಿರುದ್ಧದ ಹೊಸ ಸಾಕ್ಷ್ಯವು ಅಂತರರಾಷ್ಟ್ರೀಯ ಕೋರ್ಟ್ ನಲ್ಲಿ ಪಾಕಿಸ್ತಾನದ ಪ್ರಕರಣವನ್ನು ಬಲಿಷ್ಠಗೊಳಿಸುತ್ತದೆ ಎಂದಿರುವ ಅವರು, ಆ ಸಾಕ್ಷ್ಯ ಏನು ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.[ಕುಲಭೂಷಣ್ ಜಾಧವ್ ವಿರುದ್ಧ ಸಾಕ್ಷ್ಯಾಧಾರ ನೀಡುತ್ತೇವೆ: ಪಾಕ್]

ಕುಲಭೂಷಣ್ ಜಾಧವ್ ಪ್ರಕರಣವನ್ನು ಶೀಘ್ರವೇ ಕೈಗೆತ್ತಿಕೊಳ್ಳಲಿ ಎಂಬ ನಿರೀಕ್ಷೆಯಲ್ಲಿ ಪಾಕಿಸ್ತಾನ ಇದೆ. ಅಂತರರಾಷ್ಟ್ರೀಯ ಕೋರ್ಟ್ ಜಾಧವ್ ಗಲ್ಲು ಶಿಕ್ಷೆಗೆ ಮೇ ಹದಿನೆಂಟರಂದು ತಡೆಯಾಜ್ಞೆ ನೀಡಿತ್ತು.

English summary
Ten days after the International Court of Justice in Hague stayed the execution of Indian national Kulbhushan Jadhav accused of espionage, Pakistan claimed on Tuesday that it had fresh evidence against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X