ಪಾಕಿಸ್ತಾನದ ಹೊಸ ವರಸೆ, ಇಸ್ಲಾಮಾಬಾದ್ ಬಾಂಬ್ ಸ್ಫೋಟಕ್ಕೆ ಅಫ್ಘಾನಿಸ್ತಾನ ಕಾರಣ ಅಂತೆ!
ಪಾಕಿಸ್ತಾನ ಅಂದ್ರೆ ಸುಳ್ಳು... ಪಾಕಿಸ್ತಾನ ಅಂದ್ರೆ ಬರೀ ಓಳು... ಪಾಕಿಸ್ತಾನ ಮಾಡುವ ಎಲ್ಲಾ ರೀತಿ ಎಡವಟ್ಟು ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಲೇ ಇರುತ್ತದೆ. ಯಾಕಂದ್ರೆ ಪಾಕಿಸ್ತಾನ ಅಷ್ಟು ಕೆಟ್ಟ ಹೆಸರು ಪಡೆದಿದೆ. ಹೀಗಿದ್ದರೂ ತನ್ನ ವರಸೆ ಬದಲಾಯಿಸಿಕೊಳ್ಳದ ಈ ದೇಶ ಇದೀಗ ಮತ್ತೊಂದು ಕಿರಿಕ್ ತೆಗೆದು, ತನ್ನ ದೇಶದಲ್ಲಿ ತಾನೇ ಸಾಕಿದ ಉಗ್ರರು ನಡೆಸಿದ ದಾಳಿಗೆ ಇದೀಗ ಬೇರೆ ದೇಶವನ್ನು ಹೊಣೆ ಮಾಡಲು ಮುಂದೆ ನುಗ್ಗಿದೆ. ಇದೇ ವಿಚಾರ ಈಗ ಹೊಸ ಕಿಚ್ಚು ಹೊತ್ತಿಕೊಳ್ಳಲು ಕಾರಣವಾಗಿದೆ.
ಉಗ್ರರ ತವರು ಎಂಬ ಕೆಟ್ಟ ಹೆಸರು ಪಡೆದಿರುವ ಪಾಕಿಸ್ತಾನದಲ್ಲಿ ಕೆಲವು ದಿನಗಳ ಹಿಂದೆ ಭೀಕರ ಘಟನೆ ಸಂಭವಿಸಿತ್ತು. ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣ ಬಳಿ ಸಂಭವಿಸಿದ್ದ ಭೀಕರ ಸ್ಫೋಟದ ಪರಿಣಾಮ 12 ಜನರು ಮೃತಪಟ್ಟಿದ್ದು, ಸುಮಾರು 20 ರಿಂದ 25 ಜನ ಗಾಯಗೊಂಡಿದ್ದರು. ಭಾರತದ ರಾಜಧಾನಿ ದೆಹಲಿ ಹೃದಯ ಭಾಗದಲ್ಲಿ ಭೀಕರ ಬ್ಲಾಸ್ಟ್ ಆದ ನಂತರ ಪಾಕಿಸ್ತಾನದಲ್ಲೂ ಭೀಕರವಾಗಿ ಬ್ಲಾಸ್ಟ್ ಆಗಿದ್ದು ಚರ್ಚೆಗೆ ಗ್ರಾಸವಾಗಿ, ಪಾಕಿಸ್ತಾನ ಬೇಕು ಅಂತಲೇ ತನ್ನ ನೆಲದಲ್ಲಿ ಈ ಕೃತ್ಯ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು. ಕೊನೆಗೆ ಈ ದಾಳಿ ವಿಚಾರವನ್ನು ಭಾರತದ ತಲೆಗೆ ಕಟ್ಟಲು ಬಂದಿದ್ದ ಪಾಪಿ ಪಾಕಿಸ್ತಾನ ಈಗ ಮತ್ತೆ ತಾಲಿಬಾನ್ ವಿರುದ್ಧ ವಾಗ್ದಾಳಿ ಮಾಡುತ್ತಿದೆ!

ತಾಲಿಬಾನ್ ವಿರುದ್ಧ ಪಾಕಿಸ್ತಾನ ಆರೋಪ
ಹೌದು, ಪಾಕಿಸ್ತಾನದಲ್ಲಿ ಇರುವ ತಾಲಿಬಾನ್ ಸಂಘಟನೆ ಇಸ್ಲಾಮಾಬಾದ್ ಭಾಗದಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಕಾರಣ ಎಂದು ಆರೋಪ ಮಾಡಲಾಗಿದೆ. ಈ ವಿಚಾರ ಇದೀಗ ಮತ್ತೆ ಸಂಚಲನ ಸೃಷ್ಟಿ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹಾಗೇ ಇನ್ನೊಂದು ಕಡೆಯಲ್ಲಿ ಉಗ್ರರ ತವರು ಎಂಬ ಕೆಟ್ಟ ಪಟ್ಟ ಕಟ್ಟಿಕೊಂಡಿರುವ ಪಾಕಿಸ್ತಾನ ಬದಲಾಗುವುದಿಲ್ಲ ಅನ್ನೋದು ಗೊತ್ತಾಗುತ್ತಿದೆ. ಹಾಗೇ ತನ್ನ ಜಾಗದಲ್ಲೇ ಉಗ್ರರನ್ನ ಬೆಳೆಸಿಕೊಂಡು ನರಳುತ್ತಿರುವ ಪಾಕಿಸ್ತಾನ ಹೀಗೆ ನಾಶವಾಗಿ ಹೋಗುವ ಮುನ್ಸೂಚನೆ ಕೂಡ ಇದೆ.
ಒಟ್ನಲ್ಲಿ ಪಾಕಿಸ್ತಾನ ಒಂದು ವಿಷಜಂತು ರೀತಿ ಅಕ್ಕಪಕ್ಕದ ದೇಶಗಳನ್ನು ಕಾಡುತ್ತಿದೆ. ಹಾಗೇ ಪಾಕಿಸ್ತಾನದ ಈ ಕೃತ್ಯದಿಂದ ಅಪ್ಘಾನಿಸ್ತಾನ ಕೂಡ ರೊಚ್ಚಿಗೆದ್ದು ಇತ್ತೀಚೆಗೆ ದಾಳಿ ಮಾಡಿತ್ತು. ಅಲ್ಲದೆ ಭಾರತಕ್ಕೆ ಕೂಡ ಭಾರಿ ದೊಡ್ಡ ಸಮಸ್ಯೆಯನ್ನ ಮಾಡುತ್ತಿದೆ ಪಾಪಿ ಪಾಕಿಸ್ತಾನದ ಸೇನೆ. ಹೀಗಾಗಿ ಜಾಗತಿಕವಾಗಿ ಕೂಡ ಪಾಕಿಸ್ತಾನ ದೊಡ್ಡ ಮಟ್ಟದಲ್ಲಿ ಕೆಟ್ಟ ಹೆಸರು ಪಡೆಯುತ್ತಿದೆ.












Click it and Unblock the Notifications