Taliban Fight: ಕಾಬೂಲ್ ಮೇಲೆ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ ಸೇನೆ, ರೊಚ್ಚಿಗೆದ್ದ ತಾಲಿಬಾನ್
ಅಫ್ಘಾನಿಸ್ತಾನ ಮೇಲೆ ಹೇಗಾದರೂ ಮಾಡಿ ಹಿಡಿತ ಸಾಧಿಸಬೇಕು ಅನ್ನೋ ಹಠದಲ್ಲಿ ಪಾಕಿಸ್ತಾನ ಈಗ ನೇರವಾಗಿ ದಾಳಿ ಮಾಡುತ್ತಿದೆ. ಕೆಲವು ದಿನಗಳಿಂದ ಪಾಕಿಸ್ತಾನ & ಅಫ್ಘಾನಿಸ್ತಾನ ಗಡಿಯಲ್ಲಿ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಇಬ್ಬರ ನಡುವೆ ಶಾಂತಿ ಕಾಪಾಡಲು ಸ್ವತಃ ಸೌದಿ ಅರೇಬಿಯಾ ಮುಂದೆ ಬಂದು ಸಂಧಾನ ಮಾಡಿದ್ದರೂ ಅದು ಪ್ರಯೋಜನಕ್ಕೆ ಬಂದಿಲ್ಲ. ಇಷ್ಟೆಲ್ಲದರ ನಡುವೆ ದಿಢೀರ್ ಪಾಕಿಸ್ತಾನದ ಸೇನೆ ಅಫ್ಘಾನಿಸ್ತಾನದ ಕಾಬೂಲ್ ನಗರಕ್ಕೆ ನುಗ್ಗಿ ಭೀಕರವಾಗಿ ಬಾಂಬ್ ದಾಳಿ ನಡೆಸಿದೆ ಎಂಬ ಭಾರಿ ಗಂಭೀರ ಆರೋಪ ಮಾಡಲಾಗಿದೆ.
ಹೌದು, ಕಾಬೂಲ್ ನಗರದ ವಸತಿ ಪ್ರದೇಶದ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ ಪಾಪಿ ಪಾಕಿಸ್ತಾನ ಸೇನೆ ಎಂದು ಆರೋಪಿಸಲಾಗಿದೆ. ಆದರೆ ಈ ರೀತಿ ತಮ್ಮ ಮೇಲೆ ದಾಳಿ ನಡೆದಿದೆ ಅನ್ನೋದನ್ನ ಈಗ ಒಪ್ಪಿಕೊಳ್ಳಲು ತಾಲಿಬಾನ್ ಆಡಳಿತ ಸಿದ್ಧವಿಲ್ಲ. ಹೀಗಾಗಿ ಪಾಕಿಸ್ತಾನ ವಿರುದ್ಧ ತಾನು ಕೂಡ ಭೀಕರ ದಾಳಿ ನಡೆಸಲು ಈಗ ತಾಲಿಬಾನ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಮತ್ತೊಂದು ಕಡೆ ಈ ಬೆಳವಣಿಗೆಗಳ ಬೆನ್ನಲ್ಲೇ ಎರಡೂ ದೇಶಗಳ ಅಕ್ಕಪಕ್ಕದ ಗಡಿಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲಾ ರೀತಿ ಪರಿಸ್ಥಿತಿ ನಿಭಾಯಿಸಲು ವಿಶ್ವಸಂಸ್ಥೆ ಕೂಡ ಸಜ್ಜಾಗಬೇಕಿದೆ.

ನರಿ ಬುದ್ಧಿ ಪಾಕಿಸ್ತಾನದ ಕಿರಿಕ್
ಪಾಕಿಸ್ತಾನ ಅಂದ್ರೆ ಗೋಸುಂಬೆ ಇದ್ದಂತೆ ಅನ್ನೋ ಆರೋಪ ಇದೆ, ಪದೇ ಪದೇ ಇದು ಪ್ರೂವ್ ಆಗಿದೆ. ಜಗತ್ತಿನಲ್ಲಿ ಯಾರನ್ನು ಬೇಕಾದರೂ ನಂಬಬಹುದು, ಆದರೆ ಪಾಕಿಸ್ತಾನವನ್ನು ಇಡೀ ಜಗತ್ತಿನಲ್ಲಿ ಯಾರು ಕೂಡ ನಂಬಲು ಸಿದ್ಧವಿಲ್ಲ. ಚೀನಾ ಕೂಡ ಈ ವಿಚಾರದಲ್ಲಿ ಪಾಕಿಸ್ತಾನ ಎಂಬ ನರಿ ಬುದ್ಧಿಯ ದೇಶವನ್ನ ನಂಬಲಾರದು. ತಿಂದ ಮನೆಗೇ ಬೆಂಕಿ ಇಡುವ ಬುದ್ಧಿ ಪಾಕಿಸ್ತಾನ ರಾಜಕಾರಣಿಗಳದ್ದು, ಹೀಗೆ ಪಾಕಿಸ್ತಾನ ತನ್ನ ನೆರೆ ದೇಶಗಳ ಜೊತೆ ಸುಖಾಸುಮ್ಮನೆ ಕಿರಿಕ್ ಮಾಡಿ ಫೈಟ್ ಮಾಡುವುದು ಮಾಮೂಲಿ.
ಭಾರತ ಸೇನೆಯಿಂದ ಸಿಗುತ್ತಾ ಬೆಂಬಲ?
ಅದ್ರಲ್ಲೂ ಇದೇ ರೀತಿ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನ ನೆಲದ ಮೇಲೂ ದಾಳಿ ಮಾಡಿ, ಕಿರಿಕ್ ಮಾಡಿತ್ತು ಪಾಪಿ ಪಾಕ್. ಈಗ ದಿಢೀರ್ ಕಾಬೂಲ್ ನಗರದ ವಸತಿ ಪ್ರದೇಶದ ಮೇಲೆ ಬಾಂಬ್ ದಾಳಿಯನ್ನ ಮಾಡಿದ ಆರೋಪವನ್ನ ಎದುರಿಸುತ್ತಿದ್ದು, ಈ ಕುರಿತು ತಾಲಿಬಾನ್ ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಭೀಕರ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ. ಹೀಗಿದ್ದರೂ, ವಾಯುಸೇನೆಯ ವಿಚಾರದಲ್ಲಿ ಪಾಕ್ ಸೇನೆಯಷ್ಟು ತಾಲಿಬಾನ್ ಬಲಿಷ್ಠವಾಗಿಲ್ಲ, ಹೀಗಾಗಿ ಅಫ್ಘಾನ್‌ಗೆ ಭಾರತ ಸಾಥ್ ಕೊಡುತ್ತಾ? ಈ ಮೂಲಕ, ತನ್ನ ಶತ್ರು ಪಾಕಿಸ್ತಾನವನ್ನು ಭಾರತ ನಾಶ ಮಾಡುತ್ತಾ? ಅನ್ನೋ ಚರ್ಚೆ ಶುರುವಾಗಿದೆ.












Click it and Unblock the Notifications