ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪಾಕ್‌ನಲ್ಲಿ ಬಸ್-ಟ್ಯಾಂಕ್ ಡಿಕ್ಕಿ; 20 ಮಂದಿ ಸಜೀವ ದಹನ

|
Google Oneindia Kannada News

ಇಸ್ಲಮಾಬಾದ್, ಆಗಸ್ಟ್ 16: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮಂಗಳವಾರದಂದು ಪ್ರಯಾಣಿಕರ ಬಸ್ ಮತ್ತು ಆಯಿಲ್ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಕನಿಷ್ಠ 20 ಜನರು ಸಜೀವ ದಹನಗೊಂಡಿದ್ದಾರೆ.

ಲಾಹೋರ್‌ನಿಂದ ಸುಮಾರು 350 ಕಿಮೀ ದೂರದಲ್ಲಿರುವ ಮುಲ್ತಾನ್‌ನ ರಸ್ತೆ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಭೀಕರ ಅಪಘಾತದ ನಂತರ ಹಲವು ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಶ್ರೀಲಂಕಾ ನಂತರ ಪತನದ ಅಂಚಿನಲ್ಲಿ ಪಾಕಿಸ್ತಾನದ ಆರ್ಥಿಕತೆ!ಶ್ರೀಲಂಕಾ ನಂತರ ಪತನದ ಅಂಚಿನಲ್ಲಿ ಪಾಕಿಸ್ತಾನದ ಆರ್ಥಿಕತೆ!

"ಲಾಹೋರ್‌ನಿಂದ ಕರಾಚಿಗೆ ಹೋಗುತ್ತಿದ್ದ ಬಸ್ ಮತ್ತು ಆಯಿಲ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ 20 ಜನರು ಸಾವನ್ನಪ್ಪಿದ್ದಾರೆ. ಅಪಘಾತದ ನಂತರ, ಬಸ್ ಮತ್ತು ಟ್ಯಾಂಕರ್‌ ಎರಡಕ್ಕೂ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ" ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

Pakistan:20 people died in bus-oil tanker crash

ಅಪಘಾತದಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆರು ಪ್ರಯಾಣಿಕರನ್ನು ಮುಲ್ತಾನ್‌ನ ನಿಶ್ತಾರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಆದರೆ, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

''ಸಾವಿಗೀಡಾದ ಪ್ರಯಾಣಿಕರ ದೇಹಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಗುರುತಿಸಲು ಕಷ್ಟವಾಗುತ್ತಿದೆ. ಈ ದೇಹಗಳ ಡಿಎನ್‌ಎ ಪರೀಕ್ಷೆ ನಡೆಸಿ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು'' ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತದ ನಂತರ ಬೆಂಕಿ ಎರಡೂ ವಾಹನಗಳನ್ನು ಆವರಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ತಂಡಗಳಿಗೆ ಬಹಳ ಕಷ್ಟವಾಗಿದೆ ಎಂದಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಅವರು ಅಪಘಾತದಲ್ಲಿ ಜೀವಗಳನ್ನು ಕಳೆದುಕೊಂಡಿರುವ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಂಬಂಧಿಸಿದ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೃತರ ಕುಟುಂಬದವರನ್ನು ಗುರುತಿಸಲು ಸಹಕರಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.

ಇನ್ನು, ಶನಿವಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಲೋಡ್ ಟ್ರಕ್ ಒಂದು ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದು ಕನಿಷ್ಠ 13 ಜನರು ಸಾವನ್ನಪ್ಪಿದ್ದರು.

Recommended Video

ಇಷ್ಟೊಂದು ತಲ್ಲೀರಾಗಿ ರಾಷ್ಟ್ರಗೀತೆಯನ್ನು ಹೇಳೋಕೆ ಯಾರಿಗಾದ್ರೂ ಸಾಧ್ಯಾನಾ? | *Viral | OneIndia Kannada

ಕಳಪೆ ಮೂಲಸೌಕರ್ಯಗಳು, ಶಿಥಿಲಗೊಂಡ ವಾಹನಗಳು ಮತ್ತು ಸಂಚಾರ ನಿಯಮಗಳ ಅನುಸರಣೆಯ ಕೊರತೆಯಿಂದಾಗಿ ಇಂತಹ ರಸ್ತೆ ಅಪಘಾತಗಳು ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ.

English summary
Pakistan:20 people were burnt alive in bus-oil tanker crash in Pakistan’s Punjab province. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X