ಪೈಲೆಟ್ ಅಭಿನಂದನ್ ರನ್ನು ಬಿಡುಗಡೆ ಮಾಡಿ: ಪಾಕ್ ಲೇಖಕಿಯ ಭಾವುಕ ಬರಹ
ಇಸ್ಲಾಮಾಬಾದ್, ಫೆಬ್ರವರಿ 28: "ಪಾಕಿಸ್ತಾನದ ಸೆರೆಯಲ್ಲಿರುವ ಭಾರತೀಯ ಪೈಲಟ್ ಅನ್ನು ಬಿಡುಗಡೆ ಮಾಡಿ" ಎಂದು ಪಾಕಿಸ್ತಾನದ ಲೇಖಕಿ ಮತ್ತು ಮಾಜಿ ಪ್ರಧಾನಿ ಜುಲಿಫ್ಕಾರ್ ಅಲಿ ಭುಟ್ಟೋ ಅವರ ಪುತ್ರಿ ಫಾತಿಮಾ ಭುಟ್ಟೋ ಒತ್ತಾಯಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ನ ಒಪೆಡ್ ಪುಟದಲ್ಲಿ ಅವರು ಬರೆದ ಲೇಖನದಲ್ಲಿ, "ನಾನು ಮತ್ತು ಪಾಕಿಸ್ತಾನದ ಹಲವು ಯುವಕರು ಭಾರತೀಯ ಪೈಲಟ್ ಅನ್ನು ಇಡುಗಡೆ ಮಾಡಬೇಕು ಎಂಬ ಅಭಿಪ್ರಾಯ ಹೊಂದಿದ್ದೇವೆ. ನಮಗೆ ಬೇಕಿರುವುದು ಶಾಂತಿ, ಮಾನವೀಯತೆ ಮತ್ತು ಘನತೆ" ಎಂದು ಭುಟ್ಟೋ ಬರೆದಿದ್ದಾರೆ.
ಬುಧವಾರ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಲು ಮುಂದಾದ ಭಾರತದ ಮಿಗ್ ವಿಮಾನದ ಪೈಲಟ್ ಅಭಿನಂದನ್ ಪಾಕ್ ಸೈನಿಕರ ಬಳಿ ಸಿಕ್ಕಿಹಾಕಿಕೊಂಡಿದ್ದರು. ಅವರು ಸುರಕ್ಷಿತವಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಅಭಿನಂದನ್ ಅವರನ್ನು ಪಾಕಿಸ್ತಾನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಭಾರತವೂ ಆಗ್ರಹಿಸಿದೆ.
|
ಅನಾಥರ ಉಪಖಂಡವಾಗುವುದು ಬೇಡ!
"ನಾವು ನಮ್ಮ ಬದುಕನ್ನು ಯುದ್ಧದಲ್ಲೇ ಕಳೆದಿದ್ದೇವೆ. ನನಗೆ ನನ್ನ ಪಾಕಿಸ್ತಾನಿ ಸೈನಿಕರು ಸಾಯುವುದು ಬೇಕಿಲ್ಲ, ಭಾರತೀಯ ಸೈನಿಕರೂ ಸಾಯುವುದು ಬೇಕಿಲ್ಲ. ನಾವು ಅನಾಥರ ಉಪಖಂಡವಾಗುವುದು ಬೇಕಿಲ್ಲ" ಎಂದು ಭಾವುಕರಾಗಿ ಭುಟ್ಟೋ ಬರೆದಿದ್ದಾರೆ.
|
ನೈತಿಕತೆ ಮೆರೆದು, ಘನತೆ ಉಳಿಸಿಕೊಳ್ಳಿ!
ನಮಗೆ ಯುದ್ಧ ಬೇಕಿಲ್ಲ. ನೈತಿಕತೆಯನ್ನು ಮೆರೆದು ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಿ. ಪಾಕಿಸ್ತಾನ ಅಥವಾ ಭಾರತೀಯ ಸೈನಿಕರು ಸಾಯುವುದು ಬೇಡ. ಮಾನವೀಯತೆ ಮೆರೆಯುವ ಮೂಲಕ ಘನತೆ ಉಳಿಸಿಕೊಳ್ಳಿ- ಫಾತಿಮಾ ಭುಟ್ಟೋ
|
ಸಭ್ಯತೆಯಿಂದ ವರ್ತಿಸಿ
ಯುದ್ಧವನ್ನು ಬಯಸದ ನಾವು ಎಲ್ಲರ ಶಾಂತಿಯ್ನು ಬಯಸುತ್ತೇವೆ. ನಮ್ಮ ಅಭಿಪ್ರಾಯವನ್ನು ನಾವು ನೇರವಾಗಿ ಮತ್ತು ಧೈರ್ಯವಾಗಿ ಅಭಿವ್ಯಕ್ತಿಪಡಿಸೋಣ. ಸಭ್ಯತೆ ಮೆರೆಯೋಣ- ಫಾತಿಮಾ ಭುಟ್ಟೋ
|
ಯುದ್ಧ ಬಯಸುವವರು, ಹೋರಾಡುವವರಲ್ಲ!
ರಾಜಕಾರಣಿಗಳು ಮತ್ತು ಯುದ್ಧ ಬೇಡ ಎನ್ನುವವರನ್ನು ಟ್ರೋಲ್ ಮಾಡುವವರು, ಬಾಲಿವುಡ್ ನಟರು ಮೂಂತಾಗಿ ಯಾರೇ ಆದರೂ ಯುದ್ಧರಂಗದಲ್ಲಿ ಸೆಣಸುವವರಲ್ಲ. ಕೇವಲ ಸೈನಿಕರಷ್ಟೇ ಯುದ್ಧ ಭೂಮಿಯಲ್ಲಿ ಹೋರಾಡುವವರು. ಸ್ವಲ್ಪ ಸಭ್ಯತೆಯಿಂದ ಮಾತನಾಡಿ- ಫಾತಿಮಾ ಭುಟ್ಟೋ












Click it and Unblock the Notifications