ಇಮ್ರಾನ್ ಖಾನ್ ಗ್ಯಾಂಗ್‌ಗೆ ಪಾಕ್ ಸೇನೆ ವಾರ್ನಿಂಗ್!
ಇಸ್ಲಾಮಾಬಾದ್: ಉಗ್ರರ ತವರು ಪಾಕಿಸ್ತಾನದಲ್ಲಿ ಕಿರಿಕ್ ಇನ್ನೂ ನಿಂತಿಲ್ಲ. ಅದ್ರಲ್ಲೂ ಪಾಕ್ ಸೇನೆ ವಿರುದ್ಧ ಮಾತನಾಡಿದ್ದ ಇಮ್ರಾನ್ ವಿರುದ್ಧ ಕೆಂಡ ಉಗುಳುತ್ತಿದೆ ಪಾಕಿಸ್ತಾನ ಸೇನೆ. ಈಗ ಖುದ್ದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಇಮ್ರಾನ್ ಖಾನ್ ಗ್ಯಾಂಗ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಪರಿಣಾಮ ನೆಟ್ಟಗಿರಲ್ಲ ಎಂದಿದ್ದಾರೆ. ಹಾಗಾದ್ರೆ ಪಾಕ್ ಆರ್ಮಿ ಹೇಳಿದ್ದೇನು? ತಿಳಿಯೋಣ ಬನ್ನಿ.
ಇಮ್ರಾನ್ ಖಾನ್‌ಗೆ ಪಾಕಿಸ್ತಾನದ ಕೋಟ್ಯಂತರ ಜನ ಪ್ರಾಣ ಬಿಡೋಕು ಸಿದ್ಧ. ಅದರಲ್ಲೂ ಯುವಕರ ನೆಚ್ಚಿನ ಲೀಡರ್ ಆಗಿ ಬೆಳೆದಿದ್ದಾಗಿದೆ ಈ ಖಾನ್. ಹೀಗಾಗಿ ಇಮ್ರಾನ್ ಖಾನ್ (Imran Khan) ಅರೆಸ್ಟ್ ಆದಾಗ ಇಡೀ ಪಾಕ್ ಹೊತ್ತಿ ಉರಿದಿತ್ತು. ರೈಲ್ವೆ ಸ್ಟೇಷನ್, ಪೆಟ್ರೋಲ್ ಬಂಕ್‌ನಿಂದ ಹಿಡಿದು ಪಾಕ್‌ನ ಸೇನಾ ಕಮಾಂಡರ್ ಮನೆ ತನಕ ಕಂಡಕಂಡ ಕಡೆ ಬೆಂಕಿ ಹಚ್ಚಿದ್ದರು ಇಮ್ರಾನ್ ಬೆಂಬಲಿಗರು. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಉಗ್ರ ಪ್ರತಿಭಟನೆಗೆ ಇಮ್ರಾನ್ ಸಿದ್ಧವಾದ ಸಂದರ್ಭದಲ್ಲೇ ರೊಚ್ಚಿಗೆದ್ದಿದೆ ಪಾಕಿಸ್ತಾನಿ ಸೇನೆ.

ಹಿಂಗೆ ಮಾಡ್ತಾ ಇದ್ರೆ ಶಾಸ್ತಿ ಮಾಡ್ತೀವಿ!
ಹೌದು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನೇರವಾಗಿ ಇಮ್ರಾನ್ ಖಾನ್‌ಗೆ ಎಚ್ಚರಿಕೆ ನೀಡಿದ್ದಾನೆ. ಮೇ 9ರಂದು ಇಮ್ರಾನ್ ಬಂಧನವಾದ ದಿನ ಸೇನಾ ನೆಲೆಗಳ ಮೇಲೆ ನಡೆಸಿದ್ದ ದಾಳಿ ಬಗ್ಗೆ ಗರಂ ಆಗಿರುವ ಜನರಲ್ ಅಸಿಮ್ ಮುನೀರ್, ಮೊದಲೇ ಪ್ಲ್ಯಾನ್ ಮಾಡಿ ನಡೆಸಿದ ಹಿಂಸಾಚಾರಕ್ಕೆ ತಕ್ಕ ಬೆಲೆ ನೀವು ಕಟ್ಟುತ್ತೀರಿ. ಯಾರೇ ಇಂತಹ ಕೃತ್ಯ ಎಸಗಿದ್ರೂ ಅವ್ರು ಅದಕ್ಕೆ ಪ್ರಾಯಶ್ಚಿತ ಪಡಲೇಬೇಕು ಎಂದಿದ್ದಾನೆ ಪಾಕ್ ಸೇನಾ ಮುಖ್ಯಸ್ಥ. ಇದು ಮೊದಲೇ ಧಗಧಗಿಸುತ್ತಿದ್ದ ಬೆಂಕಿಗೆ ಪೆಟ್ರೋಲ್ ಸುರಿದಿದೆ.
ಪಾಕಿಸ್ತಾನ್ ಯೋಧರಿಗೂ ಅವಮಾನ?
ಇನ್ನೊಂದ್ಕಡೆ ಯೋಧರ ಸ್ಮಾರಕಗಳ ಮೇಲೂ ಇಮ್ರಾನ್ ಗ್ಯಾಂಗ್ ದಾಳಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾನೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್. ನಮ್ಮ ಯೋಧರ ಸ್ಮಾರಕದ ಮೇಲೆ ದಾಳಿ ನಡೆದಿರುವುದು ಅಕ್ಷಮ್ಯ ಅಪರಾಧ, ಇದಕ್ಕೆಲ್ಲಾ ಸರಿಯಾದ ಪ್ರತ್ಯುತ್ತರ ಕಾದಿದೆ ಎನ್ನುವ ರೀತಿ ಖಡಕ್ ಎಚ್ಚರಿಕೆ ನೀಡಿದ್ದಾನೆ ಜನರಲ್ ಅಸಿಮ್ ಮುನೀರ್. ಹೀಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ & ಪಾಕಿಸ್ತಾನ ಸೇನೆ ನಡುವಿನ ಜಗಳ ತಾರಕಕ್ಕೇರಿದೆ.
ಪಾಕಿಸ್ತಾನ ಸೇನೆ VS ಖಾನ್!
ಇಮ್ರಾನ್ ಬೆಂಬಲಿಗರು ಪಾಕಿಸ್ತಾನ ಸೇನೆ ವಿರುದ್ಧ ತಿರುಗಿಬಿದ್ದಿದ್ದಾರೆ, ಇತ್ತ ಪಾಕಿಸ್ತಾನದ ಆಡಳಿ ಪಕ್ಷವು ಇಮ್ರಾನ್ ಬೆಂಬಲಿಗರ ವಿರುದ್ಧ ಬೇರೆಯದ್ದೇ ಮಸಲತ್ತು ಮಾಡಿದೆ. ಪಾಕ್‌ನ ಸೇನೆ ವಿರುದ್ಧ ಇಮ್ರಾನ್ ಖಾನ್ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕೆಲವೇ ದಿನದ ಒಳಗಾಗಿ ಖುದ್ದು ಪಾಕ್ ಸೇನಾ ಮುಖ್ಯಸ್ಥ ಎಚ್ಚರಿಕೆ ನೀಡಿರುವುದು ಪರಿಸ್ಥಿತಿಯನ್ನ ಮತ್ತಷ್ಟು ಕಂಗೆಡಿಸಿದೆ. ಮತ್ತೊಂದ್ಕಡೆ ಇಮ್ರಾನ್ ಖಾನ್ ಅರೆಸ್ಟ್ ಮಾಡೋದಕ್ಕೆ ಪಾಕ್ ಸೇನೆ ತಯಾರಿ ನಡೆಸಿದೆ ಎಂಬ ಆರೋಪಕ್ಕೆ ಪ್ರೂಫ್ ಸಿಕ್ಕಂತಾಗಿದೆ.

ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ?
ಇತ್ತೀಚೆಗೆ ಪಾಕಿಸ್ತಾನದಲ್ಲಿ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ನಮಗಿರುವ ಏಕೈಕ ಭರವಸೆ ನ್ಯಾಯಾಂಗ ಮಾತ್ರ ಎಂದಿದ್ದರು. ಮೊದಲ ಬಾರಿ ಅರೆಸ್ಟ್ ವಾರಂಟ್ ತೋರಿಸಿದ್ದು ಜೈಲಿನಲ್ಲಿ. ಈ ರೀತಿ ವರ್ತನೆ ನಡೆಯುವುದು ಕಾಡಿನಲ್ಲಿ ಮಾತ್ರ. ಹೀಗಾಗಿ ಸೇನೆ ಅಪಹರಣ ಮಾಡಿ ನನ್ನ ಕರೆದೊಯ್ದಿತ್ತು. ಆಗ ಪೊಲೀಸರು ಎಲ್ಲಿದ್ರು? ಇದು ಕಾಡಿನ ಕಾನೂನು ಅಲ್ವಾ? ಎಂದು ಖಾನ್ ಆಕ್ರೋಶ ಹೊರಹಾಕಿದ್ದರು.
ಪಾಕಿಸ್ತಾನದ ಮೇಲೆ ಚೀನಾ ಕಣ್ಣು
ಹೌದು, ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಯಿಂದ ಹಿಡಿದು ಇಮ್ರಾನ್ ಬಂಧನದ ತನಕ ಪ್ರತಿ ಅಪ್‌ಡೇಟ್ ಬಗ್ಗೆ ಚೀನಾ ಹದ್ದಿನ ಕಣ್ಣಿಟ್ಟು ಕೂತಿದೆ. ಯಾಕಂದ್ರೆ ಈಗಾಗಲೇ ಪಾಕ್‌ನ ಅಭಿವೃದ್ಧಿಗೆ ಲಕ್ಷಾಂತರ ಕೋಟಿ ಸುರಿದಿರುವ ಚೀನಾ ಸರ್ಕಾರ, ತನ್ನ ಹಣವನ್ನ ರಕ್ಷಿಸಿಕೊಳ್ಳಲು ಪಾಕಿಸ್ತಾನದ ಮೇಲೆ ಹದ್ದಿನ ಕಣ್ಣಿಟ್ಟು ಕೂತಿದೆ. ಕ್ಷಣಕ್ಷಣದ ಮಾಹಿತಿ ತರಿಸಿಕೊಳ್ಳುತ್ತಾ, ಯಾವಾಗ ಏನಾಗುತ್ತೋ? ಎಂಬ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ ಚೀನಾದ ಅಧಿಕಾರಿಗಳು.












Click it and Unblock the Notifications