Syria: ಸಿರಿಯಾ ಬಿಟ್ಟು ಓಡಿ ಹೋಗಿದ್ದ ಮಾಜಿ ಅಧ್ಯಕ್ಷ ಅಸ್ಸಾದ್ ಹೆಂಡತಿಗೆ ಭಯಾನಕ ರೋಗ!
ಸಿರಿಯಾ ಈಗಲೂ ತಣ್ಣಗಾಗಿಲ್ಲ, ಆಂತರಿಕ ಕಿಚ್ಚಿನಲ್ಲಿ ನಲುಗಿ ಹೋಗಿ ಪರದಾಡಿದ್ದ ಸಿರಿಯಾ ನೆಲದಲ್ಲಿ ಶಾಂತಿ ಎಂಬುದು ಈಗಲೂ ಮರೀಚಿಕೆಯೇ ಆಗಿದೆ. ಸಿರಿಯಾ ಜನರು ಕ್ರಿಸ್‌ಮಸ್ ಹಬ್ಬದ ದಿನ ಕೂಡ ರಕ್ತದ ಮಡುವಲ್ಲಿ ನರಳುವಂತೆ ಆಗಿದೆ. ಒಂದು ಕಡೆ ಸಿರಿಯಾ ದೇಶದ ಕಥೆ ಹೀಗೆ ಆಗಿದ್ದರೆ, ಸಿರಿಯಾ ದೇಶವನ್ನೇ ಬಿಟ್ಟು ಓಡಿ ಹೋಗಿರುವ ಮಾಜಿ ಅಧ್ಯಕ್ಷ ಅಸ್ಸಾದ್ ಅವರ ಹೆಂಡತಿಗೆ ಭಯಾನಕ ರೋಗ ಬಂದಿದೆ!
ಸಿರಿಯಾ ನೆಮ್ಮದಿ ಹಾಳಾಗಿ ಬಹುಶಃ ಹತ್ತಿರ ಹತ್ತಿರ 14 ವರ್ಷಗಳೇ ಕಳೆದು ಹೋಗಿರಬೇಕು. ಒಬಾಮಾ ಅವರ 2ನೇ ಆಡಳಿತ ಶುರುವಾಗುವ ಮೊದಲೇ ಸಿರಿಯಾ ನೆಲದಲ್ಲಿ ರಕ್ತ ಕ್ರಾಂತಿಯು ಶುರುವಾಗಿತ್ತು. ಸಣ್ಣಗೆ ಶುರುವಾಗಿದ್ದ ಆಂತರಿಕ ಕಿತ್ತಾಟ ಮುಂದೆ ದೊಡ್ಡದಾಗಿ, ಲಕ್ಷಾಂತರ ಜನರ ಜೀವ ಬಲಿಯಾಗುವಂತೆ ಮಾಡಿತ್ತು. ಹೀಗಿದ್ದಾಗ 2024ರ ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಬೆಳವಣಿಗೆಗೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು, ಇನ್ನೇನು ಸಿರಿಯಾ ನೆಮ್ಮದಿಯಾಗಿ ಇರಲಿದೆ ಅಂತಾ ಎಲ್ಲರೂ ಅಂದುಕೊಳ್ಳುವಾಗಲೇ ಮತ್ತೆ ಕಿಚ್ಚು ಹೊತ್ತಿಕೊಂಡಿದೆ.

ಸಿರಿಯಾ ಮಾಜಿ ಅಧ್ಯಕ್ಷನ ಹೆಂಡತಿಗೆ...
ಯಾವಾಗ ಸಿರಿಯಾ ಸೇನೆ ಸೋಲು ಒಪ್ಪಿಕೊಂಡು, ಬಂಡುಕೋರರ ಗುಂಪು ಸಿರಿಯಾ ಒಳಗೆ ನುಗ್ಗಿ ಬಂತೋ ಆಗ ಅಲ್ಲೋಲ ಕಲ್ಲೋಲ ಶುರುವಾಗಿತ್ತು. ಕೊನೆಗೆ ಸಿರಿಯಾ ಅಧ್ಯಕ್ಷ ಸ್ಥಾನ ಬಿಟ್ಟು ಓಡಿ ಹೋಗಿದ್ದ ಮಾಜಿ ಅಧ್ಯಕ್ಷ ಅಸ್ಸಾದ್, ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಡಳಿತದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ರಷ್ಯಾಗೆ ಹೋಗಿರುವ ಅಸ್ಸಾದ್ ಕುಟುಂಬ ನಲುಗಿ ಹೋಗುವ ಸುದ್ದಿ ಇದೀಗ ಹೊರ ಬಿದ್ದಿದೆ.
ಹೌದು, ಇದೀಗ ಹೊರಬಿದ್ದ ಮಾಹಿತಿಗಳ ಪ್ರಕಾರ ಸಿರಿಯಾ ಮಾಜಿ ಅಧ್ಯಕ್ಷ ಅಸ್ಸಾದ್ ಅವರ ಹೆಂಡತಿಗೆ 'ಲ್ಯೂಕೀಮಿಯ' ಎಂಬ ಭಯಾನಕ ರೋಗ ಬಂದಿದೆ ಎಂಬ ಸುದ್ದಿ ಹಬ್ಬಿದೆ. ಹೀಗೆ ಅಸ್ಸಾದ್ ಅವರ ಹೆಂಡತಿ ಆಸ್ಮಾ ಅಸ್ಸಾದ್‌ಗೆ ಹಿಂದೆ ಸ್ತನ ಕ್ಯಾನ್ಸರ್ ಬಂದಿತ್ತು ಅದರಿಂದ ಅವರು ಚಿಕಿತ್ಸೆ ಪಡೆದು ಸುಧಾರಿಸಿಕೊಂಡು, ಇನ್ನೇನು ನೆಮ್ಮದಿ ಜೀವನ ನಡೆಸಬೇಕು ಎನ್ನುವಷ್ಟರಲ್ಲೇ ನಡೆಯಬಾರದ ಘಟನೆ ನಡೆದು ಹೋಗಿತ್ತು.
ರಷ್ಯಾದಲ್ಲೇ ಅಸ್ಸಾದ್ ಪತ್ನಿಗೆ ಚಿಕಿತ್ಸೆ?
ಸಿರಿಯಾ ಆಂತರಿಕ ಜಗಳದ ಪರಿಣಾಮ ಇಡೀ ಅಸ್ಸಾದ್ ಕುಟುಂಬ ರಷ್ಯಾಗೆ ಓಡಿ ಹೋಗಿತ್ತು. ಇದರ ಜೊತೆಗೆ 'ಲ್ಯೂಕೀಮಿಯ' ಬಗ್ಗೆಯೂ ಸ್ಫೋಟಕ ಸಂಗತಿ ಹೊರಬಿದ್ದಿದೆ. ರಷ್ಯಾದಲ್ಲಿ ಗುಪ್ತವಾಗಿ ಜೀವನ ನಡೆಸುತ್ತಿರುವ ಅಸ್ಸಾದ್ ಕುಟುಂಬದ ರಕ್ಷಣೆಯ ಹೊಣೆಯನ್ನು ರಷ್ಯಾದ ಸೇನೆ ವಹಿಸಿಕೊಂಡಿದೆ. ಹಾಗೇ ಅಸ್ಸಾದ್ ಕುಟುಂಬ ಇರುವ ಪ್ರದೇಶದಲ್ಲಿ ಹೆಚ್ಚಿನ ಭದ್ರತೆಯ ಒದಗಿಸಲಾಗಿದೆ. ಮತ್ತೊಂದು ಕಡೆ ಅಸ್ಸಾದ್ ಅವರ ಪತ್ನಿ ಆಸ್ಮಾ ಅಸ್ಸಾದ್ ಅವರಿಗೆ ರಷ್ಯಾದಲ್ಲೆ 'ಲ್ಯೂಕೀಮಿಯ'ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.












Click it and Unblock the Notifications