• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಸಾವು

|
   ಉಗ್ರ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಇನ್ನಿಲ್ಲ | Oneindia Kannada

   ವಾಷಿಂಗ್ಟನ್, ಆಗಸ್ಟ್ 01: ಅಲ್ ಖೈದಾ ಉಗ್ರ ಸಂಘಟನೆಯ ಉಗ್ರ, ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಲಾಡೆನ್ ಮೃತಪಟ್ಟಿರುವ ಸುದ್ದಿ ಬಂದಿದೆ ಎನ್ ಬಿಸಿ ನ್ಯೂಸ್ ಮೊದಲಿಗೆ ವರದಿ ಮಾಡಿದ್ದು, ಅಧಿಕಾರಿಗಳು ಸುದ್ದಿಯನ್ನು ಖಚಿತಪಡಿಸಿದ್ದಾರೆ.

   ಜ್ಯೂನಿಯರ್ ಲಾಡೆನ್ ಸತ್ತಿರುವುದು ನಿಜವಾದರೂ ಹಮ್ಜಾ ಸತ್ತಿದ್ದು ಹೇಗೆ? ಹಮ್ಜಾನನ್ನು ಯಾರು ಕೊಂದರು? ಯುಎಸ್ ಅಧಿಕಾರಿಗಳ ತಂತ್ರಗಾರಿಕೆ ಇದೆಯೆ? ಹಮ್ಜಾ ಸಾಯುವ ವೇಳೆಗೆ ಯಾವ ತಾಣದಲ್ಲಿದ್ದ ಎಂಬುದು ಬಹಿರಂಗವಾಗಿದೆಯೆ? ಎಂಬೆಲ್ಲ ಪ್ರಶ್ನೆಗಳು ಉದ್ಭವಿಸಿವೆ. ಅಫ್ಘಾನಿಸ್ತಾನ, ಇರಾನ್, ಪಾಕಿಸ್ತಾನ ಅಥವಾ ಸಿರಿಯಾಗಳಲ್ಲಿ ಜ್ಯೂನಿಯರ್ ಲಾಡೆನ್ ಅಡುಗುತಾಣಗಳಿತ್ತು. ಈ ದೇಶಗಳಲ್ಲಿ ಯಾವುದೋ ಒಂದು ದೇಶದಲ್ಲಿ ಮೃತಪಟ್ಟಿದ್ದಾನೆ ಎಂದು ಸದ್ಯಕ್ಕೆ ಲಭ್ಯ ಮಾಹಿತಿ.

   ಲಾಡೆನ್ ಸಾವಿನ ಪ್ರತೀಕಾರ: ಅಮೆರಿಕಕ್ಕೆ ಸವಾಲು ಹಾಕಿದ್ದ ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ಬಳಿಕ ಅಲ್ ಖೈದಾ ಉಗ್ರ ಸಂಘಟನೆ ಮುನ್ನಡೆಸುವವರು ಇಲ್ಲದ್ದಂತಾಗಿತ್ತು. ಹಮ್ಜಾ ಲಾಡೆನ್ ಮುಖಂಡನಾಗಿ ಹೊರಹೊಮ್ಮುವ ವೇಳೆಗೆ ಅಲ್ ಖೈದಾ ಸಂಘಟನೆಯಲ್ಲಿ ಒಡಕು ಮೂಡಿ ಎರಡು ಮೂರು ಪ್ರತ್ಯೇಕ ಬಣಗಳಾಗಿ ಮಾರ್ಪಟ್ಟಿದ್ದವು.

   ಆದರೆ, ತಂದೆ ಸಾವಿನ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದ ಹಮ್ಜಾ, ಅಮೆರಿಕ ವಿರುದ್ಧ ಯುದ್ಧ ಸಾರಿದ್ದ. ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಅಲ್ಲಿನ ಜನತೆಗೆ ಹಮ್ಜಾ ಕರೆ ನೀಡಿದ್ದ. ಲಾಡೆನ್ ಮೂರು ಪತ್ನಿಗಳ ಪೈಕಿ ಖೈರಾಯ್ಯ ಸಬರ್ ಪುತ್ರ ಹಮ್ಜಾ ಕೊನೆಗಾಲದಲ್ಲಿ ಅಬೊಟಾಬಾದ್ ನಲ್ಲಿದ್ದ ಎಂದು ತಿಳಿದು ಬಂದಿದೆ.

   English summary
   Hamza bin Laden the son of Osama bin Laden is dead. First reported by NBC News, officials confirmed the news of Laden's death.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X