ಮಧ್ಯಪ್ರಾಚ್ಯ ಬಿಟ್ಟು ತಕ್ಷಣ ಹೊರಡಿ, ಅಮೆರಿಕ ಪ್ರಜೆಗಳಿಗೆ ಟ್ರಂಪ್ ಸರ್ಕಾರದ ಸೂಚನೆ | Operation Roaring Lion
ಎಲ್ಲೆಲ್ಲೂ ಬೀಳುತ್ತಿರುವ ಮಿಸೈಲ್ & ಬಾಂಬ್‌ಗಳು, ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಜನರು... ಅಂದಹಾಗೆ, ಇದು ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಕಂಡುಬರುತ್ತಿರುವ ಸಾಮಾನ್ಯ ದೃಶ್ಯಗಳು ಇವು. ಇರಾನ್ ಮೇಲೆ ಅಮೆರಿಕ ಇನ್ನಷ್ಟು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುತ್ತಿದ್ದು, ಇಸ್ರೇಲ್ ಸೇನೆ ಜೊತೆ ಸೇರಿ ಇರಾನ್ ರಾಜಧಾನಿ ತೆಹ್ರಾನ್ ಧೂಳ್ ಧೂಳ್ ಮಾಡುತ್ತಿದೆ ಅಮೆರಿಕ. ತಾನು ಇಟ್ಟಿರುವ ಗುರಿ ತಲುಪುವ ತನಕ ಯುದ್ಧ ನಿಲ್ಲುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಗುಡುಗಿದ್ದು, ಪರಿಸ್ಥಿತಿ ಸರಿ ಮಾಡಲು ಆಗದಷ್ಟು ಕೈಮೀರಿ ಹೋಗಿದೆ. ಇದೇ ಸಮಯದಲ್ಲಿ ಅಮೆರಿಕ ಪ್ರಜೆಗಳಿಗೆ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಮಹತ್ವದ ಸಂದೇಶ ಒಂದನ್ನು ಈಗ ರವಾನಿಸಿದೆ.
ಹೌದು, ಇರಾನ್ ನಾಶ ಮಾಡಿಯೇ ನಾವು ಇಲ್ಲಿಂದ ಹೊರಡುವುದು ಎಂದು ಅಮೆರಿಕ ಈಗ ತೊಡೆ ತಟ್ಟಿ ನಿಂತು ಮಧ್ಯಪ್ರಾಚ್ಯ ಭಾಗದಲ್ಲಿ ಗುಡುಗುತ್ತಿದೆ. ಅಮೆರಿಕ ಸೇನೆಯ ದೊಡ್ಡ ತುಕಡಿಗಳು ಅತ್ತ ಇರಾನ್ ಕಡೆಗೆ ನುಗ್ಗಿ ನುಗ್ಗಿ ಹೋಗುತ್ತಿವೆ. ಇನ್ನೊಂದು ಕಡೆ ಅಮೆರಿಕ ಸೇನೆಯ ಬೃಹತ್ ಯುದ್ಧದ ನೌಕೆಗಳು ಹಾಗೂ ಯುದ್ಧ ವಿಮಾನಗಳು ಈಗಾಗಲೇ ಇರಾನ್ ಸುತ್ತಲು ಸುತ್ತುವರಿದಿವೆ. ಈಗಾಗಲೇ, ಮೊದಲ ದಿನದ ಕಾರ್ಯಾಚರಣೆ ಸಮಯದಲ್ಲೇ ಇರಾನ್ ಸರ್ವಾಧಿಕಾರಿ ಕಥೆ ಮುಗಿಸಿರುವ ಇಸ್ರೇಲ್ ತನ್ನ ಗೆಳೆಯ ಅಮೆರಿಕಗೆ ದೊಡ್ಡ ಉಡುಗೊರೆ ನೀಡಿದೆ. ಇಷ್ಟಕ್ಕೇ ಯುದ್ಧ ನಿಲ್ಲುತ್ತಾ? ಎಂಬ ಚರ್ಚೆ ನಡೆಯುವಾಗಲೇ ಮತ್ತಷ್ಟು ದಾಳಿಯ ಎಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ತಕ್ಷಣ ಮಧ್ಯಪ್ರಾಚ್ಯ ಬಿಟ್ಟು ಹೊರಡಿ ಎಂಬ ಮಹತ್ವದ ಸಂದೇಶವನ್ನು ಇದೀಗ ಅಮೆರಿಕ ಪ್ರಜೆಗಳಿಗೆ ರವಾನಿಸಿದೆ ಟ್ರಂಪ್ ಅವರ ಸರ್ಕಾರ.

ಅಮೆರಿಕ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ
ಇರಾನ್ ಯುದ್ಧ ಶುರುವಾದ ನಂತರ ಆರ್ಥಿಕವಾಗಿ ಮಧ್ಯಪ್ರಾಚ್ಯ ಬೀದಿಗೆ ಬೀಳುವ ಎಲ್ಲಾ ಲಕ್ಷಣಗಳು ಈಗ ಕಾಣುತ್ತಿದೆ. ಜಗತ್ತಿನ ಶೇಕಡಾ 20ಕ್ಕೂ ಹೆಚ್ಚು ಭಾಗ ಕಚ್ಚಾ ತೈಲ ಪೂರೈಕೆ ಮಾಡುವ ಹರ್ಮುಜ್ ಜಲಸಂಧಿ ಬಂದ್ ಆಗಿಬಿಟ್ಟಿದೆ, ಇನ್ನೊಂದು ಕಡೆ ಕುವೈತ್, ಯುಎಇ, ಕತಾರ್ ಸೇರಿ ಅಮೆರಿಕದ ಸೇನಾ ನೆಲೆಗಳು ಇರುವ ಹಲವಾರು ಅರಬ್ ಪ್ರದೇಶಗಳ ಮೇಲೆ ಹಿಂದೆ ಮುಂದೆ ಯೋಚನೆ ಮಾಡದೆ ದಾಳಿ ನಡೆಸುತ್ತಿದೆ ಇರಾನ್ ಮಿಲಿಟರಿ. ಇದೇ ಸಮಯದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಇನ್ನೂ ದೊಡ್ಡದಾಗಿ ಇರಾನ್ ಮೇಲೆ ದಾಳಿ ಮಾಡಲು ಸಜ್ಜಾಗಿವೆ. ಇದೇ ಕಾರಣಕ್ಕೆ ತಕ್ಷಣವೇ ಅಮೆರಿಕದ ಪ್ರಜೆಗಳು ತಮ್ಮ ತಮ್ಮ ಲಗೇಜ್ ಸಮೇತ ಮಧ್ಯಪ್ರಾಚ್ಯ ಬಿಟ್ಟು ಓಡಿ ಎಂಬ ಸಂದೇಶವನ್ನು ಅಮೆರಿಕ ಸರ್ಕಾರ ಈಗ ರವಾನಿಸಿದೆ. ಮತ್ತೊಂದು ಕಡೆ ಅಮೆರಿಕ ಸರ್ಕಾರ ನೀಡಿರುವ ಈ ಎಚ್ಚರಿಕೆ ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ. ಇದೇ ಕಾರಣಕ್ಕೆ ಅಮೆರಿಕದ ಪ್ರಜೆಗಳು ಮಧ್ಯಪ್ರಾಚ್ಯ ಭಾಗದಿಂದ ಹೊರ ಹೋಗಲು ಒದ್ದಾಡುತ್ತಿದ್ದಾರೆ.












Click it and Unblock the Notifications