ಮದುವೆ ನಾಟಕವಾಡಿ 11 ಮಂದಿಗೆ ನಾಮವಿಟ್ಟ ಥಾಯ್ಲೆಂಡ್ ಹುಡ್ಗಿ

ಥಾಯ್ಲೆಂಡ್ ನ ಈ ಹುಡುಗಿಯ ವಂಚನೆ ಪುರಾಣ ಮಜವಾಗಿದೆ. ಆದರೆ ಈಕೆಯಿಂದ ಮೋಸ ಹೋದವರ ಸ್ಥಿತಿ ನೆನಪಿಸಿಕೊಂಡರೆ ಅಯ್ಯೋ ಪಾಪ ಅನಿಸುತ್ತದೆ. ಆಕೆ ಒಂದರ ಹಿಂದೆ ಒಂದರಂತೆ ಒಟ್ಟು ಹನ್ನೊಂದು ಪುರುಷರನ್ನು ಮದುವೆಯಾಗಿ, ಆ ನಂತರ ದುಡ್ದಿನ ಜತೆಗೆ ನಾಪತ್ತೆ ಆಗಿದ್ದಾಳೆ. ಪ್ರತಿಯೊಬ್ಬರಿಗೂ ಆರರಿಂದ ಹನ್ನೊಂದು ಸಾವಿರ ಅಮೆರಿಕನ್ ಡಾಲರ್ ನಾಮ ಹಾಕಿದ್ದಾಳೆ.

ತನ್ನ ಕುಟುಂಬಕ್ಕೆ ಹಣ ವಾಪಸ್ ಮಾಡಬೇಕು ಎಂಬುದು ಸೇರಿದ ಹಾಗೆ ನಾನಾ ನೆಪಗಳನ್ನು ಹೇಳಿ ಒಬ್ಬೊಬ್ಬರಿಗೂ ವಂಚಿಸಿದ್ದಾಳೆ. ಈಕೆ ಎಂಥ ಚಾಲಾಕಿ ಅಂದರೆ ಆಗಸ್ಟ್ ತಿಂಗಳೊಂದರಲ್ಲೇ ನಾಲ್ಕು ಮಂದಿಯನ್ನು ಮದುವೆಯಾಗಿದ್ದಾಳೆ. ಪೊಲೀಸರ ಮಾಹಿತಿ ಪ್ರಕಾರ ಒಟ್ಟು ಹನ್ನೊಂದು ಮಂದಿಯನ್ನು ಮದುವೆಯಾಗಿದ್ದಾಳೆ.

One by one she married 11 men and disappeared with their money

ಯಾವಾಗ ಈಕೆ ಬಗ್ಗೆ ಫೇಸ್ ಬುಕ್ ನಲ್ಲಿ ಎಚ್ಚರಿಕೆಯ ಪೋಸ್ಟ್ ವೊಂದು ಪ್ರಕಟವಾಯಿತೋ ಆಗ ಎಲ್ಲವೂ ಬಯಲಿಗೆ ಬಂದಿದೆ. ಆದರೆ ಈ ಪೋಸ್ಟ್ ಹಾಕಿದವರು ಯಾರು ಎಂದು ಮಾತ್ರ ಗೊತ್ತಾಗಿಲ್ಲ. ಈ ಪೋಸ್ಟ್ ನೋಡಿದ ನಂತರ ಮೋಸಕ್ಕೊಳಗಾದವರು ಪೊಲೀಸರ ಬಳಿ ತೆರಳಿ ತಮ್ಮ ಕಥೆಗಳನ್ನು ಹೇಳಿಕೊಂಡಿದ್ದಾರೆ.

ಅವಳು ಫೇಸ್ ಬುಕ್ ನಲ್ಲೇ ಪುರುಷರನ್ನು ಹುಡುಕಿಕೊಳ್ಳುತ್ತಿದ್ದಳಂತೆ. ಆ ನಂತರ ಅವರನ್ನು ಭೇಟಿಯಾಗಿ, ದೈಹಿಕ ಸಂಪರ್ಕ ಬೆಳೆಸಿ, ಆಮೇಲೆ ಹಣದ ಜತೆಗೆ ಪರಾರಿಯಾಗುತ್ತಿದ್ದಳಂತೆ. ಸದ್ಯಕ್ಕೆ ಆಕೆ ವಿರುದ್ಧ ತನಿಖೆ ಜಾರಿಯಲ್ಲಿದೆ.

ಆದರೆ, ಆ ಮಹಿಳೆಗೆ ಮೋಸ ಮಾಡುವ ಉದ್ದೇಶವಿರಲಿಲ್ಲ. ಮದುವೆ ಆಗಿದ್ದು ಏಳೇ ಮಂದಿಯನ್ನು ಹನ್ನೊಂದಲ್ಲ. ಆಕೆ ಕುಟುಂಬದವರು ನಡೆಸುವ ಹಣ್ಣಿನ ವ್ಯಾಪಾರದಲ್ಲಿ ಅವರೆಲ್ಲ ತಾವಾಗಿಯೇ ಹಣ ತೊಡಗಿಸಿದರು ಎಂಬ ಸುದ್ದಿ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+