ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂಪುರ್ ವಿವಾದ: ಕುವೈತ್‌ನಲ್ಲಿ ಪ್ರತಿಭಟಿಸಿದ ಭಾರತೀಯ ವಲಸಿಗರ ಗಡಿಪಾರು ಸಾಧ್ಯತೆ: ಪತ್ರಕರ್ತ

|
Google Oneindia Kannada News

ಕುವೈತ್ ಜೂನ್ 14: ಕುವೈತ್‌ನಲ್ಲಿ ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸುವ ಭಾರತೀಯ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡುವ ಲಕ್ಷಣಗಳಿವೆ ಎಂದು ಸ್ಥಳೀಯ ಪ್ರರ್ತಕರ್ತರೊಬ್ಬರು ಹೇಳಿದ್ದಾರೆ. ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಇದೀಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದ ಭಾರತೀಯರು ಸೇರಿದಂತೆ ಎಲ್ಲಾ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡಲು ಕುವೈತ್ ಸರ್ಕಾರ ನಿರ್ಧರಿಸಿದೆ.

ಗಲ್ಫ್ ರಾಷ್ಟ್ರವು ವಲಸಿಗರಿಗೆ ಕಾರ್ಮಿಕ ಕಾನೂನುಗಳನ್ನು ಒಳಗೊಂಡಂತೆ ಅದರ ಕಾನೂನುಗಳೊಂದಿಗೆ ಕಟ್ಟುನಿಟ್ಟಾಗಿದೆ. ಕುವೈತ್ ಮೂಲದ ಭಾರತೀಯ ಪತ್ರಕರ್ತರ ಪ್ರಕಾರ, ಭಾರತೀಯ ವಲಸಿಗರ ಬಗ್ಗೆ ಸರ್ಕಾರವು ಮೃದುವಾಗಿರುವುದಿಲ್ಲ ಎಂದು ತಿಳಿದು ಬಂದಿದೆ.

ನೂಪುರ್ ಶರ್ಮಾ ಹೇಳಿಕೆ ವಿವಾದದ ಬಗ್ಗೆ ಚೀನಾ ಪ್ರತಿಕ್ರಿಯೆನೂಪುರ್ ಶರ್ಮಾ ಹೇಳಿಕೆ ವಿವಾದದ ಬಗ್ಗೆ ಚೀನಾ ಪ್ರತಿಕ್ರಿಯೆ

''ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸಿದ ಕುವೈತ್‌ನಲ್ಲಿರುವ ಭಾರತೀಯ ವಲಸಿಗರಿಗೆ ಯಾವುದೇ ಭರವಸೆ ಇಲ್ಲ. ಕುವೈತ್ ಸರ್ಕಾರ ಅವರ ಬಗ್ಗೆ ಮೃದುಧೋರಣೆ ತೋರುವುದಿಲ್ಲ. ಶೀಘ್ರದಲ್ಲೇ ಅವರನ್ನು ಗಡಿಪಾರು ಮಾಡಲಾಗುವುದು'' ಎಂದು ಕುವೈತ್ ಮೂಲದ ಭಾರತೀಯ ಪತ್ರಕರ್ತ ಜೀವ್ಸ್ ಎರಿಂಜೆರಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

Nupur controversy: Possibility of deportation of Indian expatriates protesting in Kuwait: Journalist

"ಕುವೈತ್ ತನ್ನ ಕಾನೂನುಗಳೊಂದಿಗೆ ತುಂಬಾ ಕಟ್ಟುನಿಟ್ಟಾಗಿದೆ ಮತ್ತು ನಿರ್ದಿಷ್ಟವಾಗಿದೆ. ಕೆಲವೇ ವಾರಗಳಲ್ಲಿ ಅವರನ್ನು [ಭಾರತೀಯ ವಲಸಿಗರನ್ನು] ಗಡಿಪಾರು ಮಾಡಲಾಗುವುದು" ಎಂದು ಎರಿಂಜೇರಿ ಹೇಳಿದ್ದಾರೆ. "ಭಾರತ ಸರ್ಕಾರ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಕಾನೂನುಗಳನ್ನು ಅನುಸರಿಸಲು ಹೇಳುತ್ತಿದೆ. ಹಾಗಾಗಿ ರಾಯಭಾರ ಕಚೇರಿಯ ಕಡೆಯಿಂದ ಬೆಂಬಲವಿದೆ ಎಂದು ನಾನು ಭಾವಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಪ್ರವಾದಿ ವಿವಾದ: ಕುವೈತ್‌ನಿಂದ ವಲಸಿಗರು ಹೊರಕ್ಕೆಪ್ರವಾದಿ ವಿವಾದ: ಕುವೈತ್‌ನಿಂದ ವಲಸಿಗರು ಹೊರಕ್ಕೆ

ಕುವೈತ್ ಸರ್ಕಾರದ ಪ್ರಕಾರ, ಪ್ರವಾದಿ ಮುಹಮ್ಮದ್ ಅವರನ್ನು ಬೆಂಬಲಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಫಹಾಹೀಲ್ ಪ್ರದೇಶದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ಆಯೋಜಿಸಿದ ಅನಿವಾಸಿಗಳನ್ನು ಬಂಧಿಸಲು ಸೂಚನೆಗಳನ್ನು ನೀಡಲಾಗಿದೆ. ಅವರು ಕುವೈತ್‌ನ ಕಾನೂನು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗುವುದು, ಗಲ್ಫ್ ರಾಷ್ಟ್ರದಲ್ಲಿ ವಲಸಿಗರು ಧರಣಿ ಅಥವಾ ಪ್ರತಿಭಟನೆಗಳನ್ನು ಆಯೋಜಿಸಬಾರದು ಎಂದು ಷರತ್ತು ವಿಧಿಸುತ್ತದೆ.

ಟಿವಿ ಸಂದರ್ಶನದ ವೇಳೆ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇಸ್ಲಾಮಿಕ್ ರಾಷ್ಟ್ರಗಳು ಮಾತ್ರವಲ್ಲದೇ ದೇಶದಲ್ಲೂ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಬೃಹತ್ ಪ್ರತಿಭಟನೆಯ ಮೂಲಕ ನೂಪುರ್ ಶರ್ಮಾ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುತ್ತಿದೆ. ಇರಾನ್, ಸೌದಿ ಅರೇಬಿಯಾ, ಕತಾರ್ ಮತ್ತು ಕುವೈತ್‌ನಂತಹ ಹಲವಾರು ದೇಶಗಳು ಕಳೆದ ತಿಂಗಳು ಟಿವಿ ಸುದ್ದಿ ಚರ್ಚೆಯೊಂದರಲ್ಲಿ ನೂಪುರ್ ಶರ್ಮಾ ಮಾಡಿದ ಕಾಮೆಂಟ್‌ಗಳನ್ನು ಟೀಕಿಸಿವೆ.

ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಯಂತ್ರಿಸಲು ಭಾರತೀಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಆಂದೋಲನಕಾರರನ್ನು ಮನೆಗಳನ್ನು ಧ್ವಂಸ ಮಾಡಲಾಗಿದೆ ಎನ್ನುವ ಆರೋಪಗಳು ಇವೆ. ನೂಪುರ್ ಶರ್ಮಾ ಅವರ ಅಮಾನತು ಸಾಕಾಗುವುದಿಲ್ಲ ಮತ್ತು ಅವರನ್ನು ಬಂಧಿಸಬೇಕು ಎಂದು ಅನೇಕ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಆದರೆ ಕೋಪಗೊಂಡ ಕೆಲವು ಪ್ರತಿಭಟನಾಕಾರರು ಅವರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ.

Recommended Video

ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಪಾತ್ರ ಏನು? | Oneindia Kannada
Nupur controversy: Possibility of deportation of Indian expatriates protesting in Kuwait: Journalist

ಪ್ರಾಸಂಗಿಕವಾಗಿ, ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿಯ ಬಗ್ಗೆ ನೂಪುರ್ ಶರ್ಮಾ ಅವರ ಹೇಳಿಕೆಗಳ ಬಗ್ಗೆ ಭಾರತೀಯ ರಾಯಭಾರಿಯನ್ನು ಕರೆದ ಗಲ್ಫ್ ರಾಷ್ಟ್ರಗಳಲ್ಲಿ ಕುವೈತ್ ಕೂಡ ಒಂದು. ವಿವಾದವು ಭುಗಿಲೆದ್ದಂತೆ, ಭಾರತ ಸರ್ಕಾರವು ಟೀಕೆಗಳಿಂದ ದೂರವಿತ್ತು. ಬಿಜೆಪಿ ತನ್ನ ರಾಷ್ಟ್ರೀಯ ವಕ್ತಾರ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ ಮತ್ತು ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಿದೆ.

English summary
Kuwait-based Indian journalist Jeeves Erringeri told that there are signs that Indian expatriates protesting against Nupur Sharma are arrested and deported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X