ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನನ್ನ ದೋಸ್ತ್ ಅಂತಿದ್ದಾನೆ ಸರ್ವಾಧಿಕಾರಿ!
ರಷ್ಯಾ & ಉತ್ತರ ಕೊರಿಯಾ ನಡುವೆ ಭಾರಿ ಗಟ್ಟಿಯಾದ ಸಂಬಂಧ ಬೆಳೆದಿದೆ. ಅದರಲ್ಲೂ, ಈ ವಿಚಾರದಲ್ಲಿ ವ್ಲಾದಿಮಿರ್ ಪುಟಿನ್ & ಕಿಮ್ ಜಾಂಗ್ ಉನ್ ತೆಗೆದುಕೊಂಡ ನಿರ್ಧಾರಗಳು ಇದೀಗ ಜಾಗತಿಕ ಮಟ್ಟದಲ್ಲೂ ಸದ್ದು ಮಾಡುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಕಿಮ್ ಜಾಂಗ್ ಉನ್ ನೇರವಾಗಿ ರಷ್ಯಾಗೆ ತೆರಳಿ ವ್ಲಾದಿಮಿರ್ ಪುಟಿನ್ ಜೊತೆಗೆ ಮಾತುಕತೆ ನಡೆಸಿ ವಾಪಸ್ ಬಂದಿದ್ದರು. ಇಂತಹ ವಾತಾವರಣ ಇದ್ದಾಗಲೇ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನನ್ನ ದೋಸ್ತ್ ಅಂತಿದ್ದಾನೆ ಸರ್ವಾಧಿಕಾರಿ!
ಕಿಮ್ ಜಾಂಗ್ ಉನ್ ಎಂತಹ ತಿಕ್ಕಲು ಸರ್ವಾಧಿಕಾರಿ ಅನ್ನೋದು ಇಡೀ ಜಗತ್ತಿಗೇ ಗೊತ್ತು. ಹಾಗೇ ಕಿಮ್ ಜಾಂಗ್ ಉನ್ ದೇಶ ಉತ್ತರ ಕೊರಿಯಾದಲ್ಲೂ ಜನರಿಗೆ ಸುಮ್ಮನೆ ಹಿಂಸೆಯನ್ನ ಕೊಡುತ್ತಾರೆ ಅನ್ನೋ ಆರೋಪ ಇದೆ. ಹಾಗೇ ಸಣ್ಣ ಸಣ್ಣ ವಿಚಾರಕ್ಕೂ ಉತ್ತರ ಕೊರಿಯಾ ನಾಯಕರು ಜನರಿಗೆ ಮರಣ ದಂಡನೆ ವಿಧಿಸುತ್ತಿರುವ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ಇದೀಗ ಕಿಮ್ ಜಾಂಗ್ ಉನ್‌ಗೆ ಒಬ್ಬ ಉತ್ತಮ ಸ್ನೇಹಿತ ಕೂಡ ಸಿಕ್ಕಿದ್ದಾನಂತೆ. ಇದನ್ನ ಖುದ್ದಾಗಿ ಕಿಮ್ ಜಾಂಗ್ ಉನ್ ಹೇಳಿಕೊಂಡಿದ್ದು, ಇದೀಗ ಜಾಗತಿಕ ಮಟ್ಟದಲ್ಲಿ ಸೌಂಡ್ ಕೂಡ ಮಾಡ್ತಿದೆ.

ಕಿಮ್ ಜಾಂಗ್ ಉನ್ ಫ್ರೆಂಡ್!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವೆ ಅತ್ಯಂತ ಆತ್ಮೀಯ ಸಂಬಂಧ ಇದ್ದು, ಇಬ್ಬರೂ ಪದೇ ಪದೇ ಭೇಟಿಯನ್ನು ಕೂಡ ಮಾಡಿದ್ದಾರೆ. ಅಲ್ಲದೆ ಯುದ್ಧದ ಸಮಯದಲ್ಲಿ ರಷ್ಯಾಗೆ ನೆರಳಾಗಿ ನಿಂತಿರುವ ಇದೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ರಷ್ಯಾಗೆ ಸೇನೆಗೆ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಕೂಡ ರವಾನಿಸಿದ್ದ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ವ್ಲಾದಿಮಿರ್ ಪುಟಿನ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಸಂದೇಶ ರವಾನಿಸಿದ್ದಾನೆ ಕಿಮ್ಮಣ್ಣ!
ರಷ್ಯಾ ದೇಶವನ್ನು ಬಲಿಷ್ಠವಾಗಿ...
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕುರಿತು ಮಾತನಾಡಿರುವ ಕಿಮ್ ಜಾಂಗ್ ಉನ್, ಇದು ಖುಷಿಯ ವಿಚಾರ. ನನ್ನ ಅತ್ಯಂತ ಆತ್ಮೀಯ ಕಾಮ್ರೆಡ್ ಅಂದ್ರೆ ಹೋರಾಟದ ಜೊತೆಗಾರರ ಪೈಕಿ ಪುಟಿನ್ ಮೊದಲಿಗರು. ತಮ್ಮ ಹೋರಾಟ & ಶಕ್ತಿಯಿಂದ ರಷ್ಯಾ ದೇಶವನ್ನು ಬಲಿಷ್ಠ ಹಾಗೂ ಸದೃಢವಾಗಿ ಕಟ್ಟಿದ್ದಾರೆ. ಹಾಗೇ ಅವರ ನಾಯಕತ್ವದ ಗುಣಗಳು ಮಾದರಿ ಎಂದು ಇದೀಗ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದು, ಅಮೆರಿಕದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾನೆ ಕಿಮ್ಮಣ್ಣ.












Click it and Unblock the Notifications