North Korea: ವಿನಾಶಕಾರಿ ಅಸ್ತ್ರ ಹೊರ ತೆಗೆಯಲು ಸರ್ವಾಧಿಕಾರಿ ಕಿಮ್ ಸಿದ್ಧತೆ?
ಕಿಮ್ ಜಾಂಗ್ ಉನ್ ಹೆಸರು ಕೇಳಿದ್ರೆ ಸಾಕು ಹೊಟ್ಟೆಯಲ್ಲಿ ಇರುವ ಮಗು ಕೂಡ ಒಂದು ಕ್ಷಣ ಹೆದರಿ ಹೊಗುತ್ತದೆ ಅನ್ನೋ ಅತಿರೇಕದ ಮಾತುಗಳು ಇವೆ. ಯಾಕಂದ್ರೆ ಉತ್ತರ ಕೊರಿಯಾ ಸರ್ವಾಧಿಕಾರಿಯ ಕೋಪ & ತಾಪ ಅಷ್ಟು ಭಯಂಕರವಾಗಿ ಇರುತ್ತದೆ ಅನ್ನೋದು ಇದರ ಅರ್ಥ. ಅದರಲ್ಲೂ ಅಮೆರಿಕ ದೇಶದ ವಿರುದ್ಧ ಕಿಮ್ ಜಾಂಗ್ ಉನ್ ಭಾರಿ ದೊಡ್ಡ ಪ್ಲಾನ್ ಮಾಡಿರುವ ಮಾತುಗಳು ಕೇಳಿ ಬರ್ತಿವೆ. ಮತ್ತೊಂದು ಕಡೆ ಕಿಮ್ ಕಥೆ ಮುಗಿಸಲು ಶತ್ರುಗಳು ಸಿದ್ಧರಾಗಿದ್ದಾರೆ ಅನ್ನೋ ಮಾತು ಕೂಡ ಓಡಾಡ್ತ ಇದೆ. ಇಷ್ಟೆಲ್ಲದರ ನಡುವೆ, ವಿನಾಶಕಾರಿ ಅಸ್ತ್ರ ಹೊರ ತೆಗೆಯಲು ಸರ್ವಾಧಿಕಾರಿ ಕಿಮ್ ಸಿದ್ಧತೆ?
ಹೌದು, ಕಿಮ್ ಜಾಂಗ್ ಉನ್ ಬಳಿ ನೂರಾರು ವಿನಾಶಕಾರಿ ಅಸ್ತ್ರಗಳು ಇದ್ದು ಪದೇ ಪದೇ ಅವುಗಳನ್ನ ಇಟ್ಟುಕೊಂಡೇ ಹೆದರಿಸುವ ಪ್ರಯತ್ನ ಮಾಡ್ತಿದ್ದಾರೆ ಉತ್ತರ ಕೊರಿಯಾ ಸರ್ವಾಧಿಕಾರಿ ಅನ್ನೋ ಭಾರಿ ಗಂಭೀರ ಆರೋಪ ಇದೆ. ಹೀಗಿದ್ದಾಗ ಅಮೆರಿಕ ಕೂಡ ಉತ್ತರ ಕೊರಿಯಾ ದೇಶದ ಮಿಲಿಟರಿ ಮತ್ತು ಕಿಮ್ ಜಾಂಗ್ ಉನ್ ಮಾಡುವ ಕೆಲಸಗಳ ಮೇಲೆ ಕಣ್ಣಿಟ್ಟು ಕೂತಿದೆ. ಹೀಗಾಗಿ ಜಾಗತಿಕವಾಗಿ ಕೂಡ ಅಮೆರಿಕ & ಕಿಮ್ ಜಾಂಗ್ ಉನ್ ತಿಕ್ಕಾಟ ಭಾರಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಕಿಮ್ ಜಾಂಗ್ ಉನ್ ಮೇಲೆ ದಾಳಿಗೆ ಪ್ರಯತ್ನ ಮಾಡಲಾಗಿತ್ತು ಅನ್ನೋ ಭಾರಿ ಗಂಭೀರ ಆರೋಪ ಮಾಡಲಾಗಿತ್ತು. ಈಗ ಅದಕ್ಕೆಲ್ಲಾ ಉತ್ತರ ಕೊಡಲು ಕಿಮ್ ಸಿದ್ಧತೆ?

ವಾರ್ನಿಂಗ್ ಕೊಡಲು ಕಿಮ್ ಸಿದ್ಧತೆ?
ಬೇಡ ಅಂದ್ರೂ ಕೆಣಕುತ್ತಾ & ಸಣ್ಣ ವಿಷಯಕ್ಕೂ ಸರ್ವಾಧಿಕಾರಿ ವಿರುದ್ಧ ಮಾತನಾಡ್ತಾ ಅಮೆರಿಕ ಏನೋ ಎಡವಟ್ಟು ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಎಲ್ಲಾ ಆರೋಪಗಳ ನಡುವೆ ಇದೀಗ ಕಿಮ್ ಜಾಂಗ್ ಉನ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಶತ್ರುಗಳಿಗೆ ನೇರ ಎಚ್ಚರಿಕೆ ರವಾನೆ ಮಾಡುವ ಸಲುವಾಗಿ ಭಯಾನಕ ಅಸ್ತ್ರಗಳ ರಾಶಿಯನ್ನೇ ಇದೀಗ ತೋರಿಸಲು ಸಜ್ಜಾಗಿದ್ದಾನೆ ಅನ್ನೋ ಸುದ್ದಿಯು ಈಗ ಹರಿದಾಡುತ್ತಿದೆ. ಅದರಲ್ಲೂ ಕೆಲವು ದಿನಗಳ ಹಿಂದಷ್ಟೇ ಕಿಮ್ ಜಾಂಗ್ ಉನ್ ತನ್ನ ಶಸ್ತ್ರಾಸ್ತ್ರಗಳ ಉತ್ಪಾದನಾ ಕಾರ್ಖಾನೆಗೆ ಭೇಟಿ ನೀಡಿ & ಕ್ಷಿಪಣಿ ಘಟಕಗಳಿಗೂ ಭೇಟಿ ನೀಡಿದ್ದಾನೆ ಎಂಬ ಸುದ್ದಿಯು ಈಗ ತಲ್ಲಣ ಎಬ್ಬಿಸಿದೆ.
3ನೇ ಮಹಾಯುದ್ಧ ನಡೆಯೋದು ಫಿಕ್ಸ್?
ಕಿಮ್ ಜಾಂಗ್ ಉನ್ ಪಟಾಲಂ ಬಳಿ ಮಿಸೈಲ್‌ಗಳು ಭಯಾನಕವಾಗಿವೆ ಈ ಕ್ಷಿಪಣಿ ಅಥವಾ ಮಿಸೈಲ್‌ಗಳು ಹೇಗಿವೆ ಅಂದ್ರೆ ಅಮೆರಿಕದ ಪ್ರಮುಖ ನಗರಗಳ ಮೇಲೆ ಕ್ಷಣಮಾತ್ರದಲ್ಲಿ ಅಟ್ಯಾಕ್ ಮಾಡುವ ಸಾಮರ್ಥ್ಯ ಇದೆ. ಹಾಗೆಯೇ, ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯಿಂದ ಭಯ ಶುರುವಾಗಿದೆ. ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ದೇಶಗಳ ಜೊತೆಗೆ ಯುರೋಪ್ ದೇಶಗಳನ್ನೂ ಟಾರ್ಗೆಟ್ ಮಾಡಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಆರೋಪವು ಕೇಳಿಬರುತ್ತಿದೆ. ಇದು ಮತ್ತೊಂದು ಮಹಾಯುದ್ಧದ ಆತಂಕ ಹುಟ್ಟಿಸಿದೆ.












Click it and Unblock the Notifications