ಸರ್ವಾಧಿಕಾರಿ ಅಥವಾ ಸೈಕೋಪಾತ್? ದಕ್ಷಿಣ ಕೊರಿಯಾಗೆ ನಿಲ್ಲುತ್ತಿಲ್ಲ ಕಿರುಕುಳ!
ಕಿಮ್ ಜಾಂಗ್ ಉನ್ ಮಾಡುತ್ತಿರುವ ಕಿರಿಕ್ ಈಗ ಮತ್ತಷ್ಟು ಜೋರಾಗಿದ್ದು, ಇದರಿಂದ ಇಡೀ ದಕ್ಷಿಣ ಕೊರಿಯಾ ನಲುಗಿ ಹೋಗಿದೆ. ಇಷ್ಟುದಿನ ಬಾಂಬ್ & ಮಿಸೈಲ್ ತೋರಿಸಿ ಬೆದರಿಕೆ ಹಾಕುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಈಗ, ಶತ್ರು ದೇಶಕ್ಕೆ ಕಸ ಕಳುಹಿಸಿ ಹಿಂಸೆ ನೀಡುತ್ತಿದ್ದಾನೆ. ಈ ಮೂಲಕ ಕಿಮ್ ಜಾಂಗ್ ಉನ್ & ಶತ್ರುಗಳ ನಡುವಿನ ತಿಕ್ಕಾಟ ಮತ್ತಷ್ಟು ಜೋರಾಗಿದೆ.
ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾಗೆ ದೊಡ್ಡ ದೊಡ್ಡ ಬಲೂನ್ ಬಳಸಿ ಕಸ ಕಳುಹಿಸಿದ್ದ. ಈ ಘಟನೆ ಇನ್ನೂ ಹಸಿಯಾಗಿ ಇರುವಾಗಲೇ ಮತ್ತೊಮ್ಮೆ ಅಂತಹದ್ದೇ ಕೃತ್ಯ ಎಸಗಿದ್ದಾನೆ ಕಿಮ್ ಜಾಂಗ್ ಉನ್. ಈ ಬಾರಿ ಬರೋಬ್ಬರಿ 600 ಕಸ ತುಂಬಿದ ಬಲೂನ್ ಹಾರಿಸಿದ್ದು. ದಕ್ಷಿಣ ಕೊರಿಯಾದ ಗಡಿಯಲ್ಲಿ ಬಂದು ಬಿದ್ದಿವೆ. ಇದು ದಕ್ಷಿಣ ಕೊರಿಯಾ ಜನರಲ್ಲಿ ಆತಂಕವನ್ನ ಕೂಡ ಹೆಚ್ಚಿಸಿದೆ. ಯಾಕಂದ್ರೆ ಬಲೂನ್ ಮೂಲಕ ಬಂದ ಕಸದಲ್ಲಿ ಏನೇನು ಇದೆಯೋ? ಎಂಬ ಆತಂಕ ಆವರಿಸಿದೆ. ಮತ್ತೊಂದು ಕಡೆ ಅಮೆರಿಕ ಕೂಡ ಈ ಘಟನೆ ಕುರಿತು ಮಾಹಿತಿ ಪಡೆದಿದೆ ಎನ್ನಲಾಗಿದೆ.

ಶಾಕ್ ಮೇಲೆ ಶಾಕ್ ಕೊಟ್ಟ!
ಕಳೆದ ಬಾರಿ ಹೀಗೆ 'ಬಲೂನ್' ಹಾರಿ ಬಂದಿದ್ದನ್ನು ನೋಡಿ ದಕ್ಷಿಣ ಕೊರಿಯಾ ನಡುಗಿತ್ತು. ಉತ್ತರ ಕೊರಿಯಾ ಹೀಗೆ ಕಸ ತುಂಬಿದ ಬಲೂನ್‌ಗಳ ರಾಶಿಯನ್ನೇ ತನ್ನ ಮೇಲೆ ಸುರಿದಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆಗಿತ್ತು ದಕ್ಷಿಣ ಕೊರಿಯಾ. ಕೂಡಲೇ ಆ ಕಸದಲ್ಲಿ ಇರುವ ವಸ್ತುಗಳನ್ನ ಪರಿಶೀಲನೆ ಮಾಡಿತ್ತು. ಆದ್ರೆ ಮೇಲ್ನೋಟಕ್ಕೆ ಕಸದ ಚೀಲಗಳಲ್ಲಿ ಹಾನಿಗೊಳಗಾದ ವಸ್ತು, ಪೇಪರ್ ಪೀಸ್, ಪ್ಲಾಸ್ಟಿಕ್ ಬಾಟಲಿ, ಬ್ಯಾಟರಿ, ಗೊಬ್ಬರ, ಶೂ ಬಿಡಿಭಾಗ ಸೇರಿದಂತೆ ಬೇಡವಾದ ವಸ್ತುಗಳೇ ಕಂಡುಬಂದಿದ್ದವು.
ಕಸದ ಪರಿಶೀಲನೆ ನಡೆಯುತ್ತಿದೆ!
ಹೀಗಿದ್ದರೂ ಎಲ್ಲಾ ವಸ್ತುಗಳನ್ನ ಸಂಗ್ರಹ ಮಾಡಿರುವ ದಕ್ಷಿಣ ಕೊರಿಯಾ, ಅದನ್ನ ಪರಿಶೀಲನೆ ಮಾಡುತ್ತಿದೆ. ಈ ಸಮಯದಲ್ಲಿ ಮತ್ತಷ್ಟು ಕಸ ತುಂಬಿದ ಚೀಲಗಳನ್ನು ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ ಮೇಲೆ ಎಸೆದಿದ್ದಾನೆ. ಇದು ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವಂತೆ ಮಾಡುತ್ತಿದೆ. ಮತ್ತೊಂದು ಕಡೆ ಇದೇ ವಿಚಾರ ಎರಡೂ ದೇಶಗಳ ನಡುವೆ ಮತ್ತಷ್ಟು ಕಿರಿಕ್ ಮಾಡಿಸುವ ಮುನ್ಸೂಚನೆ ನೀಡುತ್ತಿದೆ. ದಕ್ಷಿಣ ಕೊರಿಯಾ & ಉತ್ತರ ಕೊರಿಯಾ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ತಿಕ್ಕಾಟವು ಮತ್ತೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications