N.Korea: ಸರ್ವಾಧಿಕಾರಿ ಹತ್ಯೆಗೆ ಸ್ಕೆಚ್, ನಡುಗಿದ ನಾರ್ತ್ ಕೊರಿಯಾ!
ಅದು ಸರ್ವಾಧಿಕಾರಿ ಕೋಟೆ, ಅಲ್ಲಿ ಯಾರಾದರೂ ಅಪರಿಚಿತರು ಹೋದರೆ ಅವರ ಕತ್ತು ಕಚಕ್. ಆ ದೇಶದಲ್ಲಿ ಕಂಡ ಕಂಡಲ್ಲಿ ವಿಡಿಯೋ ಮಾಡುವಂತಿಲ್ಲ, ಇನ್ನು ಸಾರ್ವಜನಿಕ ಸ್ಥಳದಲ್ಲಿ ಮುಕ್ತವಾಗಿ ಓಡಾಡಲು ಆಗಲ್ಲ. ಇಂತಹ ದೇಶದಲ್ಲಿ ಅಪರಿಚಿತರು ನುಗ್ಗಿ ಕಿಮ್ ಜಾಂಗ್ ಉನ್ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಉತ್ತರ ಕೊರಿಯಾದಲ್ಲಿ ಭೀಕರ ಸ್ಫೋಟ ಸಂಭವಿಸಿ ನಡುಕ ಹುಟ್ಟಿಸಿದೆ.
ಹೌದು ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್ ಬಾಂಬ್ ಸ್ಫೋಟಕ್ಕೆ ನಡುಗಿ ಹೋಗಿದೆ ಜನರು ಬೆಚ್ಚಿಬಿದ್ದಿದ್ದಾರೆ. ಆದರೆ ವಿಚಾರ ಇದಲ್ಲ, ಹೀಗೆ ಬಾಂಬ್ ಸ್ಫೋಟದ ಹಿಂದೆ ಅಲ್ಲಿ ಸರ್ವಾಧಿಕಾರಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಅನ್ನೋ ಆರೋಪ ಕೇಳಿಬಂದಿದೆ. ಈ ಘಟನೆ ಬಳಿಕ ಕಿಮ್ ಜಾಂಗ್ ಉನ್ ಕೂಡ ಬೆಚ್ಚಿಬಿದ್ದಿದ್ದು, ತನ್ನ ಜೀವಕ್ಕೆ ಅಪಾಯ ಇರುವ ಬಗ್ಗೆ ಅಲರ್ಟ್ ಆಗಿದ್ದಾನಂತೆ. ಹೀಗಾಗಿ ಕಿಮ್ ಜಾಂಗ್ ಉನ್‌ಗೆ ನೀಡುವ ಭದ್ರತೆ ಡಬಲ್ ಆಗಿದೆ. ಯಾರಾದರೂ ಹತ್ತಿರ ಬಂದರೆ ಅಥವಾ ದಾಳಿ ನಡೆಸಿದರೆ ಅವರ ಕಥೆಯು ಕ್ಷಣಮಾತ್ರದಲ್ಲಿ ಮುಗಿದು ಹೋಗಲಿದೆ.

ಸರ್ವಾಧಿಕಾರಿಗೆ ಭದ್ರತೆ ಈಗ ಹೇಗಿದೆ?
ಉತ್ತರ ಕೊರಿಯಾ ಒಂದು ನಿಗೂಢ ದೇಶ, ಅಲ್ಲಿ ಏನಾಗುತ್ತೆ? ಏನೆನು ನಡೆಯುತ್ತೆ? ಎಂಬ ವಿಚಾರ ಹೊರ ಜಗತ್ತಿಗೆ ಸುಲಭವಾಗಿ ಗೊತ್ತಾಗಲ್ಲ. ಈಗಲೂ ಅಷ್ಟೇ ಸ್ಫೋಟ ಸಂಭವಿಸಿದ ಎಷ್ಟೋ ದಿನದ ಬಳಿಕ ವಿಚಾರ ಬಹಿರಂಗವಾಗಿದೆ. ಹಾಗೇ ಜೀವ ಭಯದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುಗಿ ಹೋದ ವಿಚಾರ ಕೂಡ ಗೊತ್ತಾಗಿದೆ. ಇದೇ ಕಾರಣಕ್ಕೆ ಕಿಮ್ ಜಾಂಗ್ ಉನ್ ರಕ್ಷಣೆಗೆ ಬೇರೆ ದೇಶದಿಂದ ಸ್ಫೋಟಕ ಪತ್ತೆ ಉಪಕರಣ ತರಿಸಿಕೊಳ್ಳಲಾಗಿದ್ದು, ಬ್ಯಾಲಿಸ್ಟಿಕ್ ಬ್ರೀಫ್‌ಕೇಸ್ ವ್ಯವಸ್ಥೆ ಕೂಡ ಮಾಡಲಾಗಿದೆ.
ವೈರಿಗಳಿಂದ ರಕ್ಷಣೆಗೆ ರಣತಂತ್ರ
ಕಿಮ್ ಜಾಂಗ್ ರಕ್ಷಣೆಗೆ ತರಿಸಿದ ಗುಂಡು ನುಂಗುವ ಬ್ಯಾಗ್‌ಗಳನ್ನು ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಗುಂಡು-ನಿರೋಧಕ ಮಾತ್ರವಲ್ಲದೆ ವೈರಿಗಳಿಂದ ಆಪತ್ತು ಎದುರಾದರೆ, ತಕ್ಷಣ ವಿವಿಧ ರೀತಿಯಲ್ಲಿ ರಕ್ಷಣೆ ನೀಡುತ್ತವೆ. ಅಪಾಯ ಗೊತ್ತಾದಲ್ಲಿ ಭದ್ರತಾ ಸಿಬ್ಬಂದಿ ಈ ಬ್ಯಾಗ್‌ಗಳ ಮೂಲಕ ಕಿಮ್‌ಗೆ ರಕ್ಷಣಾ ಗೋಡೆ ನಿರ್ಮಿಸಬಹುದು. ಹಾಗೇ ಈ ಬ್ಯಾಗ್‌ಗಳನ್ನ ಫ್ಯಾಬ್ರಿಕ್ ಶೀಲ್ಡ್ ರೀತಿ ಮಡಚಿ ಕೊಂಡೊಯ್ಯಲು ಅವಕಾಶವು ಇದೆ. ಮತ್ತೊಂದು ಪ್ರಮುಖ ವಿಚಾರ ಎಂದರೆ, ಕಿಮ್ ಜಾಂಗ್ ಉನ್ ಅಪ್ಪ ಕಿಮ್ ಜಾಂಗ್ ಇಲ್ ಕೂಡ ಇದೇ ರೀತಿಯ ಉಪಕರಣದ ಮೂಲಕ ರಕ್ಷಣೆ ಪಡೆಯುತ್ತಿದ್ದ.

ಒಟ್ನಲ್ಲಿ ನಿಗೂಢ ದೇಶ ಉತ್ತರ ಕೊರಿಯಾದಲ್ಲಿ ಏನೋ ವಿಚಿತ್ರ ಘಟನೆಗಳು ನಡೆಯುತ್ತಿವೆ. ಅಲ್ಲಿನ ಸರ್ವಾಧಿಕಾರಿ ಮತ್ತು ಪವರ್‌ಫುಲ್ ಅಧ್ಯಕ್ಷನ ಜೀವಕ್ಕೆ ಕುತ್ತು ಎದುರಾಗಿದೆ ಎಂಬ ವಿಚಾರ ಉತ್ತರ ಕೊರಿಯಾ ಜನರಿಗೆ ಭಯ ಮೂಡಿಸಿದೆ. ಅಲ್ಲದೆ ಮುಂದೆ ಪರಿಸ್ಥಿತಿ ಹೇಗೆ? ಎಂಬ ಚಿಂತೆ ಕೂಡ ಶುರುವಾಗಿದೆ. ಆದ್ರೆ ಇನ್ನೊಂದು ಕಡೆ ಉತ್ತರ ಕೊರಿಯಾ ರಾಜಧಾನಿ ಬಾಂಬ್ ಸ್ಫೋಟ ಘಟನೆ ಹಿಂದೆ ಉತ್ತರ ಕೊರಿಯಾ ಜನರದ್ದೆ ಕೈವಾಡ ಇದೆ ಎನ್ನಲಾಗಿದೆ. ಊಟ ಕದಿಯಲು ಕಳ್ಳರು ಹೀಗೆ ಬಾಂಬ್ ಸ್ಫೋಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹೀಗೆ ಕ್ಷಿಪಣಿಗಳ ರಾಜ, ಪರಮಾಣು ಬಾಂಬ್‌ಗಳ ದೊರೆ ಕಿಮ್ ಜಾಂಗ್ ಉನ್ ಭಯದಲ್ಲಿ ಬದುಕುತ್ತಿರುವ ವಿಚಾರ ಜಗತ್ತಿಗೇ ಹರಡಿದೆ. ಅಲ್ಲದೆ ಕಳೆದ ಕೆಲವು ತಿಂಗಳಿಂದಲೂ ಕಿಮ್ ಜಾಂಗ್ ಉನ್ ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳುತ್ತಿಲ್ಲ, ಈ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಹೀಗೆ ತಮ್ಮ ನಾಯಕನ ರಕ್ಷಣೆಗಾಗಿ ಉತ್ತರ ಕೊರಿಯಾ ಸೇನೆ ಮತ್ತು ಭದ್ರತಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಗಡಿ ಭಾಗದಲ್ಲಿ ಹದ್ದಿನ ಕಣ್ಣಿಟ್ಟು, ಶತ್ರು ಸಂಹಾರಕ್ಕೆ ಪಣತೊಟ್ಟಿದ್ದಾರೆ.












Click it and Unblock the Notifications