ಕ್ಯಾನ್ಸರ್ ಸಂಶೋಧಕರಿಗೆ ವೈದ್ಯಕೀಯ ನೊಬೆಲ್ ಪುರಸ್ಕಾರ

ಬೆಂಗಳೂರು, ಅಕ್ಟೋಬರ್ 01: ಸ್ವೀಡನ್ನಿನ ಸೋಲ್ನದಲ್ಲಿರುವ ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ ನಲ್ಲಿ ನಡೆದ ನೊಬೆಲ್ ಅಸೆಂಬ್ಲಿಯಲ್ಲಿ 2018ನೇ ಸಾಲಿನ ಫಿಸಿಯೋಲಾಜಿ /ವೈದ್ಯಕೀಯ ಕ್ಷೇತ್ರದ ನೊಬೆಲ್ ಪಾರಿತೋಷಕ ವಿಜೇತರ ಹೆಸರನ್ನು ಇಂದು ಘೋಷಿಸಲಾಯಿತು.

ಕ್ಯಾನ್ಸರ್ ಥೆರಪಿಗೆ ಸಂಬಂಧಿಸಿದಂತೆ ಅಮೆರಿಕಾ ಹಾಗೂ ಜಪಾನ್ ವಿಜ್ಞಾನಿಗಳು (immunologist) ನಡೆಸಿದ ಸಂಶೋಧನೆಯನ್ನು ಪರಿಗಣಿಸಿ ನೊಬೆಲ್ ವೈದ್ಯಕೀಯ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಜೇಮ್ಸ್ ಅಲಿಸನ್ ಹಾಗೂ ತಸುಕು ಹೊಂಜೋ ಅವರಿಗೆ 9 ಮಿಲಿಯನ್ ಸ್ವೀಡಿಷ್ ಕ್ರೊನೊರ್ (ಸುಮಾರು 775,000 ಪೌಂಡ್ )ಪ್ರಶಸ್ತಿ ಮೊತ್ತ ಲಭಿಸಲಿದೆ.

Nobel prize for medicine won by cancer researchers

ಕ್ಯಾನ್ಸರ್ ಸೆಲ್ ಗಳ ವಿರುದ್ಧ ಹೋರಾಡಲು ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವ ಬಗ್ಗೆ ಈ ಇಬ್ಬರು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ತನ್ನಷ್ಟಕ್ಕೆ ತಾನೆ ದ್ವಿಗುಣಗೊಳ್ಳುವ ಕ್ಯಾನ್ಸರ್ ಸೆಲ್ ವಿರುದ್ಧ ಇಮ್ಯೂನ್ ಸೆಲ್ ಗಳು ಹೋರಾಡುವಂತೆ ಮಾಡಲು ಬೇಕಾದ ಮೆಡಿಸನ್ ಗಳ ಅಭಿವೃದ್ಧಿಗೆ ಈ ಸಂಶೋಧನೆ ಸಹಾಯಕವಾಗಿತ್ತು.

ಈ ಮೆಡಿಸನ್ ಸೇವನೆಯಿಂದ ಸೈಡ್ ಎಫೆಕ್ಟ್ ಗಳಾಗುತ್ತವೆ ಎಂಬ ವಿರೋಧವೂ ವ್ಯಕ್ತವಾಗಿತ್ತು. ಆದರೆ, ಹೆಚ್ಚು ಪರಿಣಾಮಕಾರಿ ಸಂಶೋಧನೆ ಇದಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಂಸ್ಥೆ ಪರಿಗಣಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+