ಮಾನವಿಯತೆಗೆ ಮಿಡಿದ ಮನ, ಗಾಜಾಪಟ್ಟಿ ಜನರಿಗಾಗಿ 2.5 ಕೋಟಿ ರೂಪಾಯಿ ದಾನ ಕೊಟ್ಟ ಮಲಾಲಾ!

ಗಾಜಾಪಟ್ಟಿ ಜನ ಕ್ಷಣಕ್ಷಣಕ್ಕೂ ನರಳುತ್ತಿದ್ದಾರೆ. ಅನ್ನ, ನೀರು, ಔಷಧ, ವಿದ್ಯುತ್ ಕೂಡ ಇಲ್ಲದೆ ಜೀವ ಬಿಡುತ್ತಿದ್ದಾರೆ. ಇಸ್ರೇಲ್ ಸೇನೆ ಕೂಡ ಹಮಾಸ್ ವಿರುದ್ಧದ ಕಾರ್ಯಾಚರಣೆಗೆ ಅಂತಾ ಗಾಜಾಪಟ್ಟಿ ಮೇಲೆ ಭೀಕರ ದಾಳಿ ನಡೆಸುತ್ತಿದೆ. ಹೀಗಾಗಿ ಪರಿಸ್ಥಿತಿ ಕೈಮೀರುತ್ತಿದ್ದು ಜನರು ಜೀವ ಉಳಿಸಿಕೊಳ್ಳಲು ಗಾಜಾ ಬಿಟ್ಟು ಓಡಿ ಹೋಗುತ್ತಿದ್ದಾರೆ. ಹೀಗಿದ್ದಾಗಲೇ ಏನೂ ತಪ್ಪು ಮಾಡದ ಸಾಮಾನ್ಯ ಜನರ ಪರ ಮಲಾಲಾ ನಿಂತಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಝೈ ಅವರು, ಗಾಜಾದ ಜನರಿಗಾಗಿ ಸಹಾಯ ಮಾಡಲು ಸುಮಾರು 2.5 ಕೋಟಿ ರೂಪಾಯಿ ನೆರವು ನೀಡುವುದಾಗಿ ತಿಳಿಸಿದ್ದಾರೆ. ಗಾಜಾ ಆಸ್ಪತ್ರೆಯ ಭೀಕರ ದಾಳಿಯಿಂದಾಗಿ 500 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಈ ಸುದ್ದಿ ಆತಂಕ ಮೂಡಿಸಿದೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ ಮಲಾಲಾ ಯೂಸುಫ್‌ಝೈ, ಹಾಗೇ ಕದನ ವಿರಾಮ ಘೋಷಣೆ ಮಾಡಿ ಗಾಜಾದ ಜನ ಸಾಮಾನ್ಯರಿಗಾಗಿ ಮಾನವೀಯ ನೆರವು ನೀಡಿ ಎಂದು ಇದೇ ವೇಳೆ ಇಸ್ರೇಲ್‌ ಸರ್ಕಾರದ ಬಳಿ ಮನವಿ ಕೂಡ ಮಾಡಿದ್ದಾರೆ ಮಲಾಲಾ ಯೂಸುಫ್‌ಝೈ.

Nobel Peace Prize winner Malala Yousafzai will help needies of Gaza Strip

ಇಬ್ಬರ ಮಧ್ಯೆ ಡೆಡ್ಲಿ ಅಟ್ಯಾಕ್!

ಮೊನ್ನೆ ರಾತ್ರಿ ಗಾಜಾಪಟ್ಟಿಯ ಅಲ್-ಶಿಫಾ ಆಸ್ಪತ್ರೆ ಮೇಲೆ ಭೀಕರ ವಾಯು ದಾಳಿ ನಡೆದು 500 ಜನ ಮೃತಪಟ್ಟಿದ್ರು. ಒಂದು ಕಡೆ ಈ ಅಟ್ಯಾಕ್ ಇಸ್ರೇಲ್ ಸೇನೆ ನಡೆಸಿದೆ ಎಂಬ ಆರೋಪ ಕೇಳಿಬರುತ್ತಿದ್ದರೆ ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಆರೋಪ ಮಾಡುತ್ತಿದೆ. ಹೀಗೆ ಇಬ್ಬರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ & ಪ್ರತ್ಯಾರೋಪ ಮಾಡುತ್ತಿದ್ದರೆ ಅಮಾಯಕ ಜನರ ಜೀವ ಕೊನೆಯಾಗುತ್ತಿದೆ. ಈ ಸ್ಥಿತಿಯಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಮಲಾಲಾ ಯೂಸುಫ್‌ಝೈ ನೆರವಿನ ಹಸ್ತ ಚಾಚುತ್ತಿದ್ದಾರೆ.

ಸಾವಿನ ಸಂಖ್ಯೆ ಒಟ್ಟು ಎಷ್ಟಾಗಿದೆ?

ಅಧಿಕೃತವಾಗಿ ಸಿಗುತ್ತಿರುವ ಮಾಹಿತಿ ಪ್ರಕಾರ ಗಾಜಾಪಟ್ಟಿ ಭಾಗದಲ್ಲಿ ಇಲ್ಲಿಯವರೆಗೆ ಒಟ್ಟು, 3,478 ಜನ ಮೃತಪಟ್ಟು 12,065 ಜನರು ಆಸ್ಪತ್ರೆ ಸೇರಿದ್ದಾರೆ ಎನ್ನಲಾಗಿದೆ. ಆದರೆ ಇದನ್ನ ಮೀರಿ ಸಾವಿನ ಸಂಖ್ಯೆ ಹೆಚ್ಚಾಗಿರುವ ಅನುಮಾನ ಮೂಡಿದೆ. ಇಸ್ರೇಲ್ ಕಡೆ ಕೂಡ ಭಾರಿ ಜೀವ ಹಾನಿ ಆಗಿದ್ದು ಸಾವಿರಾರು ಜನ ಮೃಪಟ್ಟಿದ್ದಾರೆ. ಇಸ್ರೇಲ್ ಹಮಾಸ್ ನಡುವೆ ಯುದ್ಧ ಶುರುವಾಗಿ 1 ವಾರ ಕಳೆದಿದ್ದು, 2ನೇ ವಾರಕ್ಕೆ ಕಾಲಿಟ್ಟಿದೆ. ನೋಡ ನೋಡುತ್ತಲೇ ಗಾಜಾದಲ್ಲಿ ನರಕವೇ ಸೃಷ್ಟಿಯಾಗಿದೆ. ಜೀವ ಉಳಿಸಿಕೊಳ್ಳಲು ಗಾಜಾಪಟ್ಟಿ ಬಿಟ್ಟು ಓಡಿ ಹೋಗುತ್ತಿದ್ದಾರೆ ಅಲ್ಲಿನ ಸ್ಥಳೀಯ ನಿವಾಸಿಗಳು. ಹಮಾಸ್ ಉಗ್ರರು ಮಾಡಿದ ತಪ್ಪಿಗೆ ಸಾಮಾನ್ಯರ ಜೀವನ ಈಗ ನರಕವಾಗಿದೆ.

ಒಟ್ನಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಹೊತ್ತಿರುವ ಬೆಂಕಿ ಧಗಧಗಿಸುತ್ತಿದ್ದು, ಯುದ್ಧ ಇನ್ನಷ್ಟು ಭೀಕರ ಸ್ವರೂಪ ಪಡೆಯುವ ಭಯ ಶುರುವಾಗಿದೆ. ಅದರಲ್ಲೂ ಸಂಧಾನಕ್ಕಾಗಿ ಯಾರೂ ಪ್ರಯತ್ನ ನಡೆಸದ ಕಾರಣ ಗಾಜಾಪಟ್ಟಿ ಜನರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ. ಆದರೆ ಗಾಜಾಪಟ್ಟಿ ನೆಲದಿಂದ ಹೊರ ಹೋಗಲು ದಾರಿಯೇ ಇಲ್ಲದೆ ಅಲ್ಲಿನ ಪ್ರಜೆಗಳು ಗಡಿ ಭಾಗದಲ್ಲೇ ನರಳುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕಗ್ಗಂಟಾಗುತ್ತಾ ಹೋಗುತ್ತಿದೆ.

Nobel Peace Prize winner Malala Yousafzai will help needies of Gaza Strip

ಇಸ್ರೇಲ್ ಪ್ರಧಾನಿ & ಬ್ರಿಟನ್ ಪ್ರಧಾನಿ ಭೇಟಿ

ಉಕ್ರೇನ್ & ರಷ್ಯಾ ಯುದ್ಧ ಶುರುವಾದಾಗ ಪ್ರಪಂಚ ನಿಧಾನವಾಗಿ ಎರಡು ಭಾಗವಾಗುತ್ತಾ ಸಾಗಿತ್ತು. ಇದು ಸಾಲದು ಎಂಬಂತೆ ಹಮಾಸ್ ಮತ್ತು ಇಸ್ರೇಲ್ ನಡುವೆ ಘೋರ ಯುದ್ಧವು ಶುರುವಾಗಿದೆ. ಈ ಸಮಯದಲ್ಲಿ ನೋಡ ನೋಡುತ್ತಲೇ ಜಗತ್ತು ಛಿದ್ರವಾಗುತ್ತಿದೆ. ಅಮೆರಿಕ ಮತ್ತು ಬ್ರಿಟನ್ ಈಗ ನೇರವಾಗಿ ಇಸ್ರೇಲ್ ಪರ ನಿಲ್ಲುವ ಸೂಚನೆ ನೀಡಿವೆ. ಹಾಗೇ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಇಂದು ಇಸ್ರೇಲ್‌ಗೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಬೈಡನ್ ಕೂಡ ಇಸ್ರೇಲ್‌ಗೆ ಭೇಟಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+