ಮಲಾಲಾ, ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ
ಓಸ್ಲೋ, ಅ. 10 : ಒಂದು ಕಡೆ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ಎದುರಾಗುವ ಲಕ್ಷಣಗಳು ಕಾಣುತ್ತಿದ್ದರೆ, ಇನ್ನೊಂದೆಡೆ ಭಾರತದ ಮಕ್ಕಳ ಹಕ್ಕುಗಳ ಆಂದೋಲನಕಾರ ಕೈಲಾಶ್ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯಿ ಅವರಿಗೆ ಜಂಟಿಯಾಗಿ ನೊಬೆಲ್ ಪಾರಿತೋಷಕ ಲಭಿಸಿದೆ.
60 ವರ್ಷದ ಕೈಲಾಶ್ ಸತ್ಯಾರ್ಥಿ ಭಾರತದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 'ಬಚ್‌ಪನ್ ಬಚಾವೋ ಆಂದೋಲನ್ 'ಆರಂಭಿಸಿದವರು. ಮದರ್ ಥೆರೇಸಾ ಬಳಿಕ ಭಾರತಕ್ಕೆ ಶಾಂತಿ ನೊಬೆಲ್ ದೊರಕಿಸಿದ ಕೀರ್ತಿ ಕೈಲಾಶ್ ಪಾಲಾಗಿದೆ.[ಮೆದುಳಿನ 'ಜಿಪಿಎಸ್' ಶೋಧಕರಿಗೆ ವೈದ್ಯ ನೊಬೆಲ್]

ವಿದ್ಯಾರ್ಥಿನಿಯಾಗಿರುವ 17 ವರ್ಷದ ಪಾಕಿಸ್ತಾನದ ಮಲಾಲಾ ಈ ಬಾರಿ ನೊಬೆಲ್ ಪಡೆದುಕೊಂಡಿದ್ದಾರೆ. ಅಲ್ಲದೇ ನೊಬೆಲ್ ಶಾಂತಿ ಪುರಸ್ಕೃತರಲ್ಲಿ ಅತ್ಯಂತ ಕಿರಿಯ ವಯಸ್ಸಿನಳು ಎಂಬ ಹಿರಿಮೆಯೂ ಪಾತ್ರರಾಗಿದ್ದಾರೆ.
ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಡೆದ ಪಾಕಿಸ್ತಾನದ ತಾಲಿಬಾನ್ ಸಂಘಟನೆ ವಿರುದ್ಧ ಪ್ರತಿಭಟನೆಗೆ ನಿಂತ ಮಲಾಲಾ ಮೇಲೆ 2012ರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ಮಲಾಲಾ ಪಾಕಿಸ್ತಾನಕ್ಕೆ ಮೊದಲ ನೊಬೆಲ್ ಪ್ರಶಸ್ತಿ ದೊರಕಿಸಿಕೊಟ್ಟಿದ್ದಾರೆ.
BREAKING NEWS: The #nobelprize2014 in Peace is awarded to Indian Kailash Satyarthi and Pakistani Malala Yousafzay pic.twitter.com/W1K0rh9An6
— The Nobel Prize (@NobelPrize) October 10, 2014 











Click it and Unblock the Notifications